ಶಿವ ಅಷ್ಟೋತ್ತರ ಶತನಾಮ ಕ್ಷಿಪ್ರವಾಗಿ ಹೇಳಿದ 9 ವರ್ಷದ ಬಾಲಕಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಸ್ಸಾಂನ ಅನುಶಕ್ತಿ ದಾಸ್
ಗುವಾಹಟಿಯ 9 ವರ್ಷದ ಬಾಲಕಿ ಅನುಶಕ್ತಿದಾಸ್ ಅವರು ಶಿವ ಅಷ್ಟೋತ್ತರ ಶತನಾಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಈ ಕುರಿತ ಒಂದು ಚಿತ್ರನೋಟ ಇಲ್ಲಿದೆ.
(1 / 6)
ಗುವಾಹಟಿಯ 9 ವರ್ಷದ ಬಾಲಕಿ ಅನುಶಕ್ತಿದಾಸ್ ಅವರು ಶಿವ ಅಷ್ಟೋತ್ತರ ಶತನಾಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಈ ಬಾಲಕಿಗೆ ಪ್ರಮಾಣ ಪತ್ರ ನೀಡಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅದನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ. (India Book of Record)
(2 / 6)
ಅನುಶಕ್ತಿ ದಾಸ್ ಅವರು ಶಿವ ಅಷ್ಟೋತ್ತರ ಶತನಾಮಾವಳಿಯನ್ನು 3 ನಿಮಿಷ 39 ಸೆಕೆಂಡುಗಳಲ್ಲಿ ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2024 ರಲ್ಲಿ ತಮ್ಮ ಹೆಸರನ್ನು ಮಾಡಿದ್ದಾರೆ. ಶಿವ ಅಷ್ಟೋತರ ಶತನಾಮದಲ್ಲಿ ಶಿವನ 108 ಹೆಸರುಗಳಿವೆ. ಶಿವ ದೇವರ ಅನುಗ್ರಹ ಪಡೆಯಲು ಇರುವ ಶತನಾಮಾವಳಿ ಇದು.
(3 / 6)
ಅನುಶಕ್ತಿ 5 ನೇ ತರಗತಿಯಲ್ಲಿ ಓದುತ್ತಾಳೆ ಮತ್ತು 9 ವರ್ಷ ವಯಸ್ಸಿನವಳು. ಅವಳು ಮೊಹ್ಘರ್ ಲೋವರ್ ಪ್ರೈಮರಿ ಸ್ಕೂಲ್ ನಂಬರ್ 2ರಲ್ಲಿ ಓದುತ್ತಿದ್ದಾಳೆ.
(4 / 6)
ಅನುಶಕ್ತಿ ಸಲೀಸಾಗಿ ಶಿವನ ಹೆಸರಗಳನ್ನು ಸ್ಮರಿಸಿಕೊಳ್ಳುತ್ತಾಳೆ. ಆಕೆಯ ಸಾಧನೆ ಬಗ್ಗೆ ಪಾಲಕರಿಗಷ್ಟೇ ಅಲ್ಲ, ಶಿಕ್ಷಕರಿಗೂ ಖುಷಿ, ಹೆಮ್ಮ ಇದೆ. ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ್ದು ಎಲ್ಲರಲ್ಲಿ ಸಂಭ್ರಮ ಮೂಡುವಂತೆ ಮಾಡಿದೆ.
(5 / 6)
ಬಾಲಕಿಯು ಭಜನೆಗಳನ್ನು ಹೇಳುವ ಸಾಮರ್ಥ್ಯ ಹೊಂದಿದ್ದು, ತಾಯಿಯೇ ಈ ವಿಚಾರದಲ್ಲಿ ಆಕೆಗೆ ಗುರು. ದುರ್ಗಾ ಸಪ್ತಶತಿ ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ ಮತ್ತು ಶ್ರೀ ಕೃಷ್ಣ ಅಷ್ಟೋತ್ತರ ಶತನಾಮಾವಳಿಗಳನ್ನೂ ಆಕೆ ಪಠಿಸುತ್ತಾಳೆ.
ಇತರ ಗ್ಯಾಲರಿಗಳು