RamLalla Coin: ಬಂತು ಅಯೋಧ್ಯೆ ರಾಮಮಂದಿರ, ಬಾಲರಾಮನ ನೆನಪಿನ ನಾಣ್ಯ, ನೀವು ಖರೀದಿಸುವುದಿದ್ದರೆ ಹೀಗೆ ಮಾಡಿ Photos
- Coloured souvenir coin ಭಾರತದಲ್ಲಿ ಪ್ರಮುಖ ಸಂದರ್ಭ ನೆನಪಿನ ನಾಣ್ಯ ಬಿಡುಗಡೆ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್( SPMCIL) ಇದರ ಹೊಣೆ ಹೊತ್ತಿದ್ದು ಈಗ ಬಾಲರಾಮ, ರಾಮಮಂದಿರ, ಬುದ್ದ, ಘೇಂಡಾಮೃಗದ ವಿಶೇಷ ನಾಣ್ಯ ಬಿಡುಗಡೆ ಮಾಡಲಾಗಿದೆ. ಇದರ ಚಿತ್ರ ನೋಟ ಇಲ್ಲಿದೆ.
- Coloured souvenir coin ಭಾರತದಲ್ಲಿ ಪ್ರಮುಖ ಸಂದರ್ಭ ನೆನಪಿನ ನಾಣ್ಯ ಬಿಡುಗಡೆ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್( SPMCIL) ಇದರ ಹೊಣೆ ಹೊತ್ತಿದ್ದು ಈಗ ಬಾಲರಾಮ, ರಾಮಮಂದಿರ, ಬುದ್ದ, ಘೇಂಡಾಮೃಗದ ವಿಶೇಷ ನಾಣ್ಯ ಬಿಡುಗಡೆ ಮಾಡಲಾಗಿದೆ. ಇದರ ಚಿತ್ರ ನೋಟ ಇಲ್ಲಿದೆ.
(1 / 6)
ಭಾರತದ ಹೆಮ್ಮೆಯ ಕ್ಷಣಗಳಲ್ಲಿ ಒಂದಾದ ರಾಮಮಂದಿರ ಉದ್ಘಾಟನೆ ಈಗ ನೆನಪಿನ ನಾಣ್ಯದ ರೂಪ(Coloured souvenir coin) ಪಡೆದಿದೆ. ಬಳಕೆಗಿಂತ ಇದು ಸಂಗ್ರಹಯೋಗ್ಯ ನಾಣ್ಯ. ಇದನ್ನು ಕೇಂದ್ರ ಸರ್ಕಾರದ ಸೆಕ್ಯುರಿಟಿ ಪ್ರಿಂಟಿಗ್ ಅಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್( SPMCIL) ಬಿಡುಗಡೆ ಮಾಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಬಿಡುಗಡೆ ಮಾಡಿದಾಗ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್̧, ಎಸ್‌ಪಿಎಂಸಿಐಎಲ್ ಅಧ್ಯಕ್ಷರಾದ ವಿಜಯರಂಜನ್ ಸಿಂಗ್ ಮತ್ತಿತರರು ಇದ್ದರು.ಎಸ್‌ಪಿಎಂಸಿಐಎಲ್ ಮೂಲಕ ನಾಣ್ಯ ಖರೀದಿಸಲು ಅವಕಾಶವಿದೆ ಇದಕ್ಕಾಗಿ website: https://indiagovtmint.in/souvenir-coins/ ಸಂಪರ್ಕಿಸಬಹುದು
(2 / 6)
ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ರೂಪಿಸಿರುವ ಬಾಲರಾಮನ ವಿಗ್ರಹದ ನೆನಪಿಗೆ ಈಗ ಸ್ಮರಣೀಯ ನಾಣ್ಯ( Coloured souvenir coin of Ral Lalla ) ಬಿಡುಗಡೆಯಾಗಿದೆ. ಇದನ್ನು website: https://indiagovtmint.in/souvenir-coins/ ಮೂಲಕ ಖರೀದಿ ಮಾಡಬಹುದು.
(3 / 6)
ಕಳೆದ ತಿಂಗಳು ಉದ್ಘಾಟನೆಗೊಂಡ ಅಯೋಧ್ಯೆ ರಾಮಮಂದಿರದ ನೆನಪಿಗಾಗಿ (Coloured souvenir coin of Ayodhya Ram Mandir) ಬಿಡುಗಡೆಗೊಂಡ ಸ್ಮರಣೀಯ ನಾಣ್ಯ.
(4 / 6)
ಗೌತಮ ಬುದ್ದನ ನೆನಪಿಗಾಗಿ ರೂಪಿಸಿರುವ ವಿಶೇಷ ಸ್ಮರಣೀಯ ನಾಣ್ಯ(Bi-metallic clad souvenir coin on Enlightenment of Buddha) ಬಿಡುಗಡೆಯಾಗಿದೆ.
(5 / 6)
ಭಾರತದ ಅಸ್ಸಾಂನ ಕಾಜಿ ರಂಗದಲ್ಲಿ ನೆಲೆಗೊಂಡಿರುವ ಘೇಂಡಾಮೃಗದ ನೆನಪಿಗಾಗಿ ಒಂಟಿಕೊಂಬಿನ ಘೇಂಡಾಮೃಗ ಇರುವ ಸ್ಮರಣೀಯ ನಾಣ್ಯವನ್ನು(Coloured souvenir coin on Endangered Animals of India - Greater One Horned Rhino) ಬಿಡುಗಡೆ ಮಾಡಲಾಗಿದೆ.
ಇತರ ಗ್ಯಾಲರಿಗಳು