ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹತ್ರಾಸ್ ಕಾಲ್ತುಳಿತ ದುರಂತ; ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆ, ಘಟನಾ ಸ್ಥಳದ ಚಿತ್ರನೋಟ ಇಲ್ಲಿದೆ

ಹತ್ರಾಸ್ ಕಾಲ್ತುಳಿತ ದುರಂತ; ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆ, ಘಟನಾ ಸ್ಥಳದ ಚಿತ್ರನೋಟ ಇಲ್ಲಿದೆ

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಮಂಗಳವಾರ (ಜುಲೈ 2) ನಡೆದ ಸತ್ಸಂಗ ಕಾರ್ಯಕ್ರಮದ ಕೊನೆಯಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳದ ಚಿತ್ರನೋಟ ಹೀಗಿದೆ.

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದರಾ ರಾವ್ ಪ್ರದೇಶದ ಸತ್ಸಂಗ ಸ್ಥಳದಲ್ಲಿ ಮಂಗಳವಾರ ಭಾರಿ ಕಾಲ್ತುಳಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಇಂದು (ಜುಲೈ 3) 121ಕ್ಕೆ ಏರಿಕೆಯಾಗಿದೆ. ದುರಂತ ಸ್ಥಳದಲ್ಲಿ ಫೋರೆನ್ಸಿಕ್ ತಂಡ ಪರಿಶೀಲನೆ ನಡೆಸಿದ ಸಂದರ್ಭ.
icon

(1 / 11)

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದರಾ ರಾವ್ ಪ್ರದೇಶದ ಸತ್ಸಂಗ ಸ್ಥಳದಲ್ಲಿ ಮಂಗಳವಾರ ಭಾರಿ ಕಾಲ್ತುಳಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಇಂದು (ಜುಲೈ 3) 121ಕ್ಕೆ ಏರಿಕೆಯಾಗಿದೆ. ದುರಂತ ಸ್ಥಳದಲ್ಲಿ ಫೋರೆನ್ಸಿಕ್ ತಂಡ ಪರಿಶೀಲನೆ ನಡೆಸಿದ ಸಂದರ್ಭ.(PTI)

ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ 5000 ಜನ ಭಾಗವಹಿಸುತ್ತಾರೆ ಎಂದು ಉಲ್ಲೇಖಿಸಿ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ಅಲ್ಲಿ 15,000ಕ್ಕೂ ಹೆಚ್ಚು ಜನ ಸೇರಿದ್ದರು. ಅಷ್ಟು ಜನರಿಗೆ ಬೇಕಾದಷ್ಟು ವ್ಯವಸ್ಥೆ ಅಲ್ಲಿ ಇರಲಿಲ್ಲ ಎಂದು ಅಲಿಗಡ ವಲಯದ ಐಜಿ ಶಲಭ್ ಮಾಥುರ್ ಹೇಳಿದ್ದಾರೆ.
icon

(2 / 11)

ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ 5000 ಜನ ಭಾಗವಹಿಸುತ್ತಾರೆ ಎಂದು ಉಲ್ಲೇಖಿಸಿ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ಅಲ್ಲಿ 15,000ಕ್ಕೂ ಹೆಚ್ಚು ಜನ ಸೇರಿದ್ದರು. ಅಷ್ಟು ಜನರಿಗೆ ಬೇಕಾದಷ್ಟು ವ್ಯವಸ್ಥೆ ಅಲ್ಲಿ ಇರಲಿಲ್ಲ ಎಂದು ಅಲಿಗಡ ವಲಯದ ಐಜಿ ಶಲಭ್ ಮಾಥುರ್ ಹೇಳಿದ್ದಾರೆ.(HT_PRINT)

ಹತ್ರಾಸ್‌ ಕಾಲ್ತುಳಿತ ದುರಂತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಗ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂದರ್ಭದಲ್ಲಿ ಮೃತರ ಗುರುತು ಪತ್ತೆಗಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಮೀಪ ಪೊಲೀಸರು ದಾಖಲೆ ಪರಿಶೀಲಿಸುತ್ತಿದ್ದರು.
icon

(3 / 11)

ಹತ್ರಾಸ್‌ ಕಾಲ್ತುಳಿತ ದುರಂತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಗ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂದರ್ಭದಲ್ಲಿ ಮೃತರ ಗುರುತು ಪತ್ತೆಗಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಮೀಪ ಪೊಲೀಸರು ದಾಖಲೆ ಪರಿಶೀಲಿಸುತ್ತಿದ್ದರು.(ANI)

ಹತ್ರಾಸ್‌ ಕಾಲ್ತುಳಿತ ದುರಂತದ ಬಳಿಕ, ಗಾಯಾಳುಗಳನ್ನು ದಾಖಲಿಸಿದ್ದ ಇಟಾಹ್ ಆಸ್ಪತ್ರೆಯ ಹೊರಗೆ ಮೃತರ ಸಂಬಂಧಿಕರು, ಸ್ಥಳೀಯರು ಮತ್ತು ಪೊಲೀಸರು. 
icon

(4 / 11)

ಹತ್ರಾಸ್‌ ಕಾಲ್ತುಳಿತ ದುರಂತದ ಬಳಿಕ, ಗಾಯಾಳುಗಳನ್ನು ದಾಖಲಿಸಿದ್ದ ಇಟಾಹ್ ಆಸ್ಪತ್ರೆಯ ಹೊರಗೆ ಮೃತರ ಸಂಬಂಧಿಕರು, ಸ್ಥಳೀಯರು ಮತ್ತು ಪೊಲೀಸರು. (Nitin Sharma)

ಹತ್ರಾಸ್ತ ಕಾಲ್ತುಳಿತ ದುರಂತ ಸ್ಥಳದಿಂದ ಮೃತದೇಹಗಳನ್ನು ಮಹಜರಿಗಾಗಿ ಆಸ್ಪತ್ರೆಗೆ ಸಾಗಿಸಿದ ಸಂದರ್ಭ.
icon

(5 / 11)

ಹತ್ರಾಸ್ತ ಕಾಲ್ತುಳಿತ ದುರಂತ ಸ್ಥಳದಿಂದ ಮೃತದೇಹಗಳನ್ನು ಮಹಜರಿಗಾಗಿ ಆಸ್ಪತ್ರೆಗೆ ಸಾಗಿಸಿದ ಸಂದರ್ಭ.(PTI)

ಹತ್ರಾಸ್ ಕಾಲ್ತುಳಿತ ದುರಂತ ಸ್ಥಳದಲ್ಲಿ ಮೃತರ ಸಂಬಂಧಿಕರು, ಗಾಯಾಳುಗಳ ಸಂಕಟ.
icon

(6 / 11)

ಹತ್ರಾಸ್ ಕಾಲ್ತುಳಿತ ದುರಂತ ಸ್ಥಳದಲ್ಲಿ ಮೃತರ ಸಂಬಂಧಿಕರು, ಗಾಯಾಳುಗಳ ಸಂಕಟ.(PTI)

ಹತ್ರಾಸ್‌ ಕಾಲ್ತುಳಿತ ದುರಂತದ ಸಾಕ್ಷಿಯಾಗಿ ಬುಧವಾರ (ಜುಲೈ 3) ಕ್ಯಾಮರಾ ಕಣ್ಣಿಗೆ ಬಿದ್ದ ದೃಶ್ಯವಿದು.
icon

(7 / 11)

ಹತ್ರಾಸ್‌ ಕಾಲ್ತುಳಿತ ದುರಂತದ ಸಾಕ್ಷಿಯಾಗಿ ಬುಧವಾರ (ಜುಲೈ 3) ಕ್ಯಾಮರಾ ಕಣ್ಣಿಗೆ ಬಿದ್ದ ದೃಶ್ಯವಿದು.(AFP)

ಹತ್ರಾಸ್‌ ಕಾಲ್ತುಳಿತ ದುರಂತದ ಬಳಿಕ ಸಿಕಂದರಾ ರಾವ್ ಆಸ್ಪತ್ರೆ ಸಮೀಪ ಮೃತರ ಸಂಬಂಧಿಕರು ಗೋಳಾಡುತ್ತಿದ್ದ ಹೃದಯವಿದ್ರಾವಕ ದೃಶ್ಯ.
icon

(8 / 11)

ಹತ್ರಾಸ್‌ ಕಾಲ್ತುಳಿತ ದುರಂತದ ಬಳಿಕ ಸಿಕಂದರಾ ರಾವ್ ಆಸ್ಪತ್ರೆ ಸಮೀಪ ಮೃತರ ಸಂಬಂಧಿಕರು ಗೋಳಾಡುತ್ತಿದ್ದ ಹೃದಯವಿದ್ರಾವಕ ದೃಶ್ಯ.(AP)

ಹತ್ರಾಸ್ ಕಾಲ್ತುಳಿತ ದುರಂತ ಸ್ಥಳಕ್ಕೆ ಬುಧವಾರ (ಜುಲೈ 3) ಆಗಮಿಸಿದ ಫಾರೆನ್ಸಿಕ್ ತಂಡ ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾಗ ಅವರ ಕೆಲಸವನ್ನು ಗಮನಿಸಿದ ಸಾರ್ವಜನಿಕರು.
icon

(9 / 11)

ಹತ್ರಾಸ್ ಕಾಲ್ತುಳಿತ ದುರಂತ ಸ್ಥಳಕ್ಕೆ ಬುಧವಾರ (ಜುಲೈ 3) ಆಗಮಿಸಿದ ಫಾರೆನ್ಸಿಕ್ ತಂಡ ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾಗ ಅವರ ಕೆಲಸವನ್ನು ಗಮನಿಸಿದ ಸಾರ್ವಜನಿಕರು.(AP)

ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸುವುದಕ್ಕೆ ಮೊದಲು ನಿನ್ನೆ (ಜುಲೈ 2) ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮದ ನೋಟ. ಭಾರಿ ಪ್ರಮಾಣದ ಜನರು ಅಲ್ಲಿ ಸೇರಿದ್ದರು. ಅವರ ಪೈಕಿ ಮಹಿಳೆಯರೇ ಹೆಚ್ಚಾಗಿದ್ದರು.
icon

(10 / 11)

ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸುವುದಕ್ಕೆ ಮೊದಲು ನಿನ್ನೆ (ಜುಲೈ 2) ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮದ ನೋಟ. ಭಾರಿ ಪ್ರಮಾಣದ ಜನರು ಅಲ್ಲಿ ಸೇರಿದ್ದರು. ಅವರ ಪೈಕಿ ಮಹಿಳೆಯರೇ ಹೆಚ್ಚಾಗಿದ್ದರು.(HT_PRINT)

ಸತ್ಸಂಗ ಕಾರ್ಯಕ್ರಮಕ್ಕೆ ಪತ್ನಿ ಜೊತೆಗೆ ಬರುವ ಭೋಲೆ ಬಾಬಾ. 
icon

(11 / 11)

ಸತ್ಸಂಗ ಕಾರ್ಯಕ್ರಮಕ್ಕೆ ಪತ್ನಿ ಜೊತೆಗೆ ಬರುವ ಭೋಲೆ ಬಾಬಾ. 


ಇತರ ಗ್ಯಾಲರಿಗಳು