Ayodhya Ram Mandir: ರಾಮನ ಅಯೋಧ್ಯೆಗೆ ಸಾಗರದಲೆಗಳಂತೆ ಅಪ್ಪಳಿಸಿದ ರಾಮಭಕ್ತರು; ನಸುಕಿನ 3 ರಿಂದಲೇ ಬಾಲರಾಮನ ಕಣ್ತುಂಬಲು ಕಾತರ
Heavy rush outside Ayodhya Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದ ಮಾರನೇ ದಿನವಾದ ಇಂದು ಸಾರ್ವಜನಿಕ ಪ್ರವೇಶದ ಮೊದಲ ದಿನ. ಬಾಲರಾಮನ ದರ್ಶನವನ್ನು ಮೊದಲ ದಿನವೇ ಪಡೆಯಬೇಕೆಂಬ ಕಾತರದೊಂದಿಗೆ ಕಾಯುತ್ತಿದ್ದಾರೆ ಸಾವಿರಾರು ರಾಮಭಕ್ತರು. ಇಲ್ಲಿದೆ ಒಂದ ಚಿತ್ರನೋಟ.
(1 / 10)
ಅಯೋಧ್ಯೆ ರಾಮ ಮಂದಿರದ ಆವರಣ ಪ್ರವೇಶಿಸಲು ಕಾತರರಾಗಿರುವ ರಾಮಭಕ್ತರು ಮಂಗಳವಾರ ನಸುಕಿನ 3 ಗಂಟೆಯಿಂದಲೇ ಸರದಿ ನಿಂತಿದ್ದರು. ಬಾಲರಾಮನ ಪ್ರಾಣ ಪ್ರತಿಷ್ಠೆ ನಿನ್ನೆ (ಜ.22) ಆಗಿದ್ದು, ಸಾರ್ವಜನಿಕರಿಗೆ ಇಂದೇ ಮೊದಲ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ. (PTI)
(3 / 10)
ರಾಮ ಮಂದಿರದ ಸಮೀಪ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ವಾಹನ ಸಂಚಾರ, ಭಕ್ತರ ಸಂಚಾರಕ್ಕೆ ಅನುವು ಮಾಡಿಕೊಡಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು.(HT_PRINT)
(6 / 10)
ಭಕ್ತ ಜನರ ದಟ್ಟಣೆ ನಡುವೆ ನಿಲ್ಲಲು ಕಷ್ಟಪಟ್ಟ ಮಹಿಳೆಯೊಬ್ಬರು ಬ್ಯಾರಿಕೇಡ್ ನುಸುಳಿ ಹೊರಬಂದ ದೃಶ್ಯ.(REUTERS)
(7 / 10)
ಅಯೋಧ್ಯೆಯಲ್ಲಿ ಜನದಟ್ಟಣೆ ನಿರ್ವಹಿಸುವುದಕ್ಕೆ ಪೊಲೀಸ್, ಭದ್ರತಾ ಸಿಬ್ಬಂದಿ ಪ್ರಯತ್ನಿಸುವಾಗ ಭಕ್ತರೊಬ್ಬರು ಅವರೊಂದಿಗೆ ಘರ್ಷಣೆಗೆ ಇಳಿದಿರುವ ದೃಶ್ಯ.(REUTERS)
(8 / 10)
ಅಯೋಧ್ಯೆ ರಾಮ ಮಂದಿರದ ಒಳಗೆ ಪ್ರವೇಶಿಸಲು ನೂಕುನುಗ್ಗಲು ಉಂಟಾಗಿತ್ತು. ಶಿಸ್ತು ಸಂಯಮ ಕಾಪಾಡುವಂತೆ ಭದ್ರತಾ ಸಿಬ್ಬಂದಿ ಮನವಿ ಮಾಡಿದ್ದು, ಗುಂಪು ಚದುರಿಸಲು ಹರಸಾಹಸಪಟ್ಟರು.(REUTERS)
(9 / 10)
ರಾಮ ಮಂದಿರ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾದಾಗ ಪರಿಸ್ಥಿತಿ ನಿಭಾಯಿಸಲು ಭದ್ರತಾ ಸಿಬ್ಬಂದಿ ಪ್ರಯತ್ನಿಸಿದರು.(REUTERS)
ಇತರ ಗ್ಯಾಲರಿಗಳು