ಜೈಲು ಸೇರಿದ ಭಾರತದ 7 ರಾಜ್ಯಗಳ ಸಿಎಂ, ಮಾಜಿ ಸಿಎಂಗಳು, ಯಾರು ಇದ್ದಾರೆ ಇಲ್ಲಿದೆ ಪಟ್ಟಿ photos
- ಭಾರತದಲ್ಲಿ ರಾಜಕಾರಣ ಮುಳ್ಳಿನ ಹಾಸಿಗೆ. ಅಧಿಕಾರದಲ್ಲಿದ್ದವರ ಮೇಲೆ ನಂತರ ಅಧಿಕಾರಕ್ಕೆ ಬಂದವರು ದ್ವೇಷ ಸಾಧಿಸುವುದು, ಜೈಲಿಗೆ ಅಟ್ಟುವಂತಹ ಸನ್ನಿವೇಶ ನಿರ್ಮಾಣ ಹೊಸದೇನೂ ಅಲ್ಲ. ಆದರೆ ಅಧಿಕಾರದಲ್ಲಿದ್ದಾಗಲೇ ಸಿಎಂ ಒಬ್ಬರು ಬಂಧನಕ್ಕೆ ಒಳಗಾಗಿರುವುದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್. ಇದಕ್ಕೂ ಮುನ್ನ9 ಮಾಜಿ ಸಿಎಂಗಳು ಜೈಲು ಅನುಭವಿಸಿದ್ದಾರೆ. ಇದರ ವಿವರ ಇಲ್ಲಿದೆ.
- ಭಾರತದಲ್ಲಿ ರಾಜಕಾರಣ ಮುಳ್ಳಿನ ಹಾಸಿಗೆ. ಅಧಿಕಾರದಲ್ಲಿದ್ದವರ ಮೇಲೆ ನಂತರ ಅಧಿಕಾರಕ್ಕೆ ಬಂದವರು ದ್ವೇಷ ಸಾಧಿಸುವುದು, ಜೈಲಿಗೆ ಅಟ್ಟುವಂತಹ ಸನ್ನಿವೇಶ ನಿರ್ಮಾಣ ಹೊಸದೇನೂ ಅಲ್ಲ. ಆದರೆ ಅಧಿಕಾರದಲ್ಲಿದ್ದಾಗಲೇ ಸಿಎಂ ಒಬ್ಬರು ಬಂಧನಕ್ಕೆ ಒಳಗಾಗಿರುವುದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್. ಇದಕ್ಕೂ ಮುನ್ನ9 ಮಾಜಿ ಸಿಎಂಗಳು ಜೈಲು ಅನುಭವಿಸಿದ್ದಾರೆ. ಇದರ ವಿವರ ಇಲ್ಲಿದೆ.
(1 / 10)
ಚೆನ್ನೈನಲ್ಲಿ ಮೇಲ್ಸೇತುವೆ ನಿರ್ಮಾಣ ಪ್ರಕರಣದಲ್ಲಿ ತಮಿಳುನಾಡು ಸಿಎಂ ಎಂ.ಕರುಣಾನಿಧಿ ಅವರನ್ನು 2001ರಲ್ಲಿ ಬಂಧಿಸಲಾಗಿತ್ತು. ಅದು ಮನೆಗೆ ನುಗ್ಗಿ ಪೊಲೀಸರು ಬಂಧಿಸಿದ್ದು ಭಾರೀ ಸುದ್ದಿಯಾಗಿತ್ತು. ಆನಂತರ ಅವರು ಕೆಲ ದಿನ ಜೈಲಿನಲ್ಲಿದ್ದರು.
(2 / 10)
ಮಿತಿಗಿಂತಲೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಜಯಲಲಿತಾ ವಿರುದ್ದ ಮೊಕದ್ದಮೆ ದಾಖಲಾಗಿತ್ತು.ಬೆಂಗಳೂರಿನ ವಿಶೇಷ ನ್ಯಾಯಾಲಯವು 2014,ರಲ್ಲಿ ಜಯಲಲಿತಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಸಿಎಂ ಹುದ್ದೆ ತೊರೆದು. ಜೈಲಿನಲ್ಲಿದ್ದೇ ಹೋರಾಟ ಮಾಡಿ ಮತ್ತೆ ಸಿಎಂ ಸ್ಥಾನಕ್ಕೆ ಜಯಲಲಿತಾ ಬಂದಿದ್ದರು.
(3 / 10)
ಬಿಹಾರದಲ್ಲಿ ಮೇವು ಹಗರಣದಲ್ಲಿ ಸಿಲುಕಿದ್ದ ಲಾಲೂ ಪ್ರಸಾದ್ ಯಾದವ್ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದರು.ಆನಂತರ ಅವರ ಪತ್ನಿ ರಾಬ್ರಿ ದೇವಿ ಸಿಎಂ ಆಗಿದ್ದರು.ಈ ಪ್ರಕರಣದ ವಿಚಾರಣೆ ನಡೆದು 2013ರಲ್ಲಿ ಶಿಕ್ಷೆಗೆ ಗುರಿಯಾಗಿ ಐದು ವರ್ಷ ಜೈಲು ವಾಸ ಅನುಭವಿಸಿದರು.
(4 / 10)
ಗಣಿ ಹಗರಣದಲ್ಲಿ ಲೋಕಾಯುಕ್ತ ವರದಿ ಆಧರಿಸಿ ಸಿಎಂ ಸ್ಥಾನ ತೊರೆದಿದ್ದ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜಮೀನು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಲುಕಿ ಬೆಂಗಳೂರಿನಲ್ಲಿ 25 ದಿನ ಜೈಲು ವಾಸ ಅನುಭವಿಸಿದ್ದರು.
(5 / 10)
ಹರಿಯಾಣದ ಸಿಎಂ ಆಗಿದ್ದ ಒಂಪ್ರಕಾಶ್ ಚೌತಾಲ ಅವರು ಶಿಕ್ಷಕರ ನೇಮಕ ಪ್ರಕರಣದಲ್ಲಿ ಸಿಲುಕಿದ್ದರು. ಅವರ ವಿರುದ್ದ ತನಿಖೆ ನಡೆದು ಪುತ್ರ ಅಜಯ್ ಚೌತಾಲ ಜತೆಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮೇಲ್ಮನವಿಯಲ್ಲೂ ಹಿನ್ನಡೆಯಾಗಿತ್ತು. ಕೊನೆಗೆ 2013ರಲ್ಲಿ ಜೈಲು ಸೇರಿ ಇತ್ತೀಚಿಗೆ ಬಿಡುಗಡೆಯಾಗಿದ್ದಾರೆ.
(6 / 10)
ಆಂಧ್ರಪ್ರದೇಶದಲ್ಲಿ ಸಿಎಂ ಆಗಿದ್ದಾಗ ಕೌಶಲ್ಯ ಅಭಿವೃದ್ದಿ ನಿಗಮದಲ್ಲಿ ನಡೆದಿದ್ದ ಹಗರಣದಲ್ಲಿ ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಾಯ್ಡು ವಿಚಾರಣೆ ಎದುರಿಸುತ್ತಿದ್ದಾರೆ.
(7 / 10)
ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಾರ್ಖಂಡ್ ನ ಮಾಜಿ ಸಿಎಂ ಶಿಬು ಸೊರೆನ್ ಅವರನ್ನು 2006ರಲ್ಲಿ ಬಂಧಿಸಲಾಗಿತ್ತು. ನಂತರ ಜೈಲು ವಾಸವನ್ನೂ ಅನುಭವಿಸಿದ್ದರು.
(8 / 10)
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಮಾಜಿ ಹೇಮಂತ್ ಸೋರೆನ್ ಎರಡು ತಿಂಗಳ ಹಿಂದೆ ಬಂಧನಕ್ಕೆ ಒಳಗಾಗದರು. ಅವರಿಗೆ ದೆಹಲಿ ಜೈಲಿನಲ್ಲಿದ್ದಾರೆ. ಅಪ್ಪನ ನಂತರ ಮಗ ಬಂಧನಕ್ಕೆ ಒಳಗಾದ ಇತಿಹಾಸ ಜಾರ್ಖಂಡ್ ನಲ್ಲಿದೆ.
(9 / 10)
ಅಕ್ರಮ ಹಣ ಗಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಿಎಂ ಮಧುಖೋಡಾ ಅವರನ್ನು 2009ರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇದಲ್ಲದೇ ಹಲವು ಪ್ರಕರಣಗಳಲ್ಲಿ ಅವರು ಸಿಲುಕಿದ್ದರು. ಜಾರ್ಖಂಡ್‌ನಲ್ಲಿ ಬಂಧನಕ್ಕ ಒಳಗಾದ ಮೊದಲ ಎರಡನೇ ಸಿಎಂ ಇವರು.
ಇತರ ಗ್ಯಾಲರಿಗಳು