Kite Festival: ಹೈದರಾಬಾದ್‌ನ ಬಾನಂಗಳದಿ ಹಾರಾಡಿದ ಪುಷ್ಪಕ ವಿಮಾನ, ಹನುಮಾನ್, ಗರುಡ; ಗಾಳಿಪಟ ಉತ್ಸವದ ಸಂಭ್ರಮ ಸಡಗರ
Kite Festival 2024: ಹೈದರಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಮುಂಚಿತವಾಗಿ ಶನಿವಾರ (ಜ.13) ಶುರುವಾದ ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಚಿತ್ತಾಕರ್ಷಕ ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಿದವು. ಈ ನಡುವೆ, ಅಯೋಧ್ಯೆಯಲ್ಲಿ ಶ್ರೀರಾಮಲಲಾನ ಪ್ರಾಣಪ್ರತಿಷ್ಠಾ ಮಹೋತ್ಸವದ ಸಂಭ್ರಮದ ಪ್ರಭಾವವೆಂಬಂತೆ ರಾಮಾಯಣ ಥೀಮ್‌ನ ಗಾಳಿಪಟಗಳು ಗಮನಸೆಳೆದವು.
(1 / 9)
ಹೈದರಾಬಾದ್‌ನಲ್ಲಿ ಶನಿವಾರ (ಜ.13) ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಶುರುವಾಗಿದೆ. ಇದು ಸೋಮವಾರದ (ಜ.15) ತನಕ ನಡೆಯಲಿದೆ. ಹೈದರಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿ ಗಾಳಿಪಟ ಮತ್ತು ಸಿಹಿ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟದ ಸಂಭ್ರಮ ಸಡಗರ ಗರಿಗೆದರಿದೆ. ಪುಷ್ಪಕ ವಿಮಾನ ಮಾದರಿಯ ಗಾಳಿ ಪಟ ಹಿಡಿದ ವ್ಯಕ್ತಿಯೊಬ್ಬರ ಸಂಭ್ರಮ.(PTI)
(2 / 9)
ಹೈದರಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದ ಭಾಗವಾಗಿ, ನಾನಾ ಆಕಾರದ ಗಾಳಿಪಟಗಳನ್ನು ಹಾರಿಸಿದ ಜನರ ಸಂಭ್ರಮ. ಈ ಉತ್ಸವದಲ್ಲಿ 16 ದೇಶಗಳ ಜನರು ಭಾಗವಹಿಸುತ್ತಿದ್ದಾರೆ.(PTI)
(4 / 9)
ಹೈದರಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದ ವೇಳೆ ಕಂಡುಬಂದ ಕಥಕ್ಕಳಿ ಮುಖವಾಡದ ಗಾಳಿಪಟ ಮತ್ತು ಗರುಡದೇವನ ಗಾಳಿಪಟ.(AFP)
(6 / 9)
ಹೈದರಾಬಾದ್ ಗಾಳಿಪಟ ಉತ್ಸವದಲ್ಲಿ ವಿದೇಶೀಯರೂ ಪಾಲ್ಗೊಂಡಿದ್ದು, ಈ ಪೈಕಿ ಕೈಟ್ ಕಪಲ್ ಗಾಳಿಪಟ ಗಮನಸೆಳೆಯಿತು.(PTI)
ಇತರ ಗ್ಯಾಲರಿಗಳು