Dev Deepavali: ವಾರಾಣಸಿಯಲ್ಲಿ ದೇವ ದೀಪಾವಳಿ, ದೀಪಗಳ ಹಬ್ಬದ ಚಿತ್ತಾಕರ್ಷಕ ಫೋಟೋಸ್ ಕಣ್ತುಂಬಿಕೊಳ್ಳಿ
ದೀಪಾವಳಿ ಹಬ್ಬ ಕಳೆದು 15 ದಿನದ ಬಳಿಕ ಬರುವ ಹಬ್ಬವೇ ದೇವ ದೀಪಾವಳಿ. ವಾರಾಣಸಿಯಲ್ಲಿ ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿರುವುದು ವಾಡಿಕೆ. ಇದರ ಕೆಲವು ಆಕರ್ಷಕ ಫೋಟೋಸ್ ಇಲ್ಲಿವೆ ನೋಡಿ.
(1 / 11)
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಈ ವರ್ಷದ ದೇವ ದೀಪಾವಳಿ ನಡೆಯಿತು. ಇದರಲ್ಲಿ 7ರಿಂದ 8 ಲಕ್ಷ ಭಕ್ತರು ಭಾಗವಹಿಸಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಕೂಡ ಈ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.(HT Photo/Rajesh Kumar )
(3 / 11)
ಗಂಗಾ ನದಿಯ ನದಿಯ ಮುಂಭಾಗದ ಘಾಟ್‌ಗಳು ಎಂದರೆ, ರವಿದಾಸ್ ಘಾಟ್‌ನಿಂದ ರಾಜ್‌ಘಾಟ್‌ವರೆಗೆ, ಗಂಗಾ ನದಿ ಮತ್ತು ಅದರ ಪ್ರಧಾನ ದೇವತೆಯನ್ನು ಗೌರವಿಸುವುದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಉರಿಸಲಾಗಿದೆ. (HT Photo/Rajesh Kumar)
(5 / 11)
ದೇವ ದೀಪಾವಳಿ ನಿಮಿತ್ತ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ವಾರಾಣಸಿಯ ಪಕ್ಷಿ ನೋಟ. (HT Photo/Rajesh Kumar)
(6 / 11)
ಉತ್ತರ ಪ್ರದೇಶ ಸರ್ಕಾರವು ಆಯೋಜಿಸಿದ ಉತ್ಸವದಲ್ಲಿ 12 ಲಕ್ಷ ದೀಪಾಲಂಕಾರದ ಜತೆಗೆ ಲೇಸರ್ ಕಿರಣ ಮತ್ತು ಸುಡುಮದ್ದು ಪ್ರದರ್ಶನವೂ ಇತ್ತು.(HT photo by Rajesh Kumar)
(8 / 11)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.(HT Photo/Rajesh Kumar)
(9 / 11)
70ಕ್ಕೂ ಹೆಚ್ಚು ರಾಷ್ಟ್ರಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ಐತಿಹಾಸಿಕ ನಗರ ವಾರಾಣಸಿಗೆ ಆಗಮಿಸಿದ್ದು, ದೇವ ದೀಪಾವಳಿಯಲ್ಲಿ ಭಾಗವಹಿಸಿದರು.(HT Photo/Rajesh Kumar)
(10 / 11)
ದೇವ ದೀಪಾವಳಿಯನ್ನು ಸಾಮಾನ್ಯವಾಗಿ "ದೇವರ ದೀಪಾವಳಿ" ಎನ್ನಲಾಗುತ್ತದೆ. ಇದು ಹಿಂದೂ ತಿಂಗಳ ಕಾರ್ತಿಕ ಹುಣ್ಣಿಮೆಯ ರಾತ್ರಿ ನಡೆಯುವುದು ವಾಡಿಕೆ, (HT Photo/Rajesh Kumar)
ಇತರ ಗ್ಯಾಲರಿಗಳು