Operation Ajay: ಆಪರೇಷನ್ ಅಜಯ್ ಮೊದಲ ವಿಮಾನದಲ್ಲಿ 212 ಭಾರತೀಯರು ಇಸ್ರೇಲ್‌ನಿಂದ ಭಾರತಕ್ಕೆ ವಾಪಸ್, ಫೋಟೋ ವರದಿ
ಯುದ್ಧ ಪೀಡಿತ ಇಸ್ರೇಲ್‌ನಿಂದ ಆಪರೇಷನ್ ಅಜಯ್ ಮೂಲಕ 212 ಭಾರತೀಯರ ಮೊದಲ ತಂಡ ವಿಶೇಷ ವಿಮಾನದಲ್ಲಿ ಇಂದು (ಅ.13) ಭಾರತಕ್ಕೆ ಹಿಂದಿರುಗಿದೆ. ಇದರ ಸಚಿತ್ರ ವರದಿ ಇಲ್ಲಿದೆ.
(1 / 8)
ಹಮಾಸ್ ಉಗ್ರರು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿದ ನಂತರ ಯುದ್ಧಪರಿಸ್ಥಿತಿ ಉಂಟಾಗಿದೆ. ಇಸ್ರೇಲ್‌ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿರುವ ಕಾರಣ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ. ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳ ಮೊದಲ ತಂಡ ವಿಶೇಷ ಚಾರ್ಟರ್ ವಿಮಾನದಲ್ಲಿ ಇಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ, (PTI)
(2 / 8)
ಇಸ್ರೇಲ್‌ನಿಂದ ಬಂದ ಭಾರತೀಯರ ಮೊದಲ ತಂಡವನ್ನು ಸ್ವಾಗತಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.(PTI)
(3 / 8)
ದೆಹಲಿಗೆ ಆಗಮಿಸಿದ ಭಾರತೀಯರನ್ನು ರಾಜೀವ್ ಚಂದ್ರಶೇಖರ್ ಕೈ ಮುಗಿದು ಆತ್ಮೀಯವಾಗಿ ಸ್ವಾಗತಿಸಿದರು. ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಇಸ್ರೇಲ್‌ನಿಂದ ವಿಮಾನದಲ್ಲಿ ಬಂದ ಎಲ್ಲ ಪ್ರಯಾಣಿಕರಿಗೆ ಧೈರ್ಯವನ್ನು ತುಂಬಿದರು. ಪ್ರತಿಯೊಬ್ಬ ಭಾರತೀಯನ ಸುರಕ್ಷತೆಯನ್ನು ಖಾತ್ರಿಪಡಿಸುವ ಬದ್ಧತೆಯಲ್ಲಿ ಭಾರತ ಸರ್ಕಾರವು ಅಚಲವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಅವರನ್ನು ರಕ್ಷಿಸುವ ವಿಚಾರದಲ್ಲಿ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಎತ್ತಿ ತೋರಿಸಿದರು.(PTI)
(4 / 8)
"ನಮ್ಮ ಸರ್ಕಾರವು ಯಾವುದೇ ಭಾರತೀಯನನ್ನು ಎಂದಿಗೂ ಬಿಟ್ಟು ಬಿಡುವುದಿಲ್ಲ. ನಮ್ಮ ಸರ್ಕಾರ, ನಮ್ಮ ಪ್ರಧಾನಿ, ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯದ ತಂಡ ಅವರನ್ನು ರಕ್ಷಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಸಂಕಲ್ಪ ಮಾಡಿದ್ದಾರೆ. ಈ ಆಪರೇಶನ್ ಅಜಯ್‌ನಲ್ಲಿ ಭಾಗಿಯಾಗಿರುವ ವಿಮಾನ ಸಿಬ್ಬಂದಿಗೆ ನಾವು ಕೃತಜ್ಞರಾಗಿರುತ್ತೇವೆ" ಎಂದು ಚಂದ್ರಶೇಖರ್ ಹೇಳಿದರು.(PTI)
(5 / 8)
ಇಸ್ರೇಲ್‌ನ ಭಾರತೀಯ ರಾಯಭಾರಿ ಸಂಜೀವ್ ಸಿಂಗ್ಲಾ, ಇಸ್ರೇಲ್‌ನಲ್ಲಿನ ಸಂಘರ್ಷದ ನಡುವೆ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಕ್ರಿಯವಾಗಿ ಶ್ರಮಿಸುತ್ತಿದೆ. "ಆಪರೇಷನ್ ಅಜಯ್" ನ ಭಾಗವಾಗಿ, ರಾಯಭಾರ ಕಚೇರಿಯು ಭಾರತಕ್ಕೆ ಮರಳಲು ಬಯಸುವವರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಮಾಹಿತಿ ನೀಡಿದರು.(PTI)
(6 / 8)
"ನಾನು ನಿನ್ನೆ ಹೇಳಿದಂತೆ, ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿರುವ ನಮ್ಮ ಎಲ್ಲ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ನಿನ್ನೆ, ವಿದೇಶಾಂಗ ಸಚಿವರು ಭಾರತಕ್ಕೆ ಮರಳಲು ಬಯಸುವ ಭಾರತೀಯರಿಗೆ ಸಹಾಯ ಮಾಡಲು ಆಪರೇಷನ್ ಅಜಯ್ ಅನ್ನು ಘೋಷಿಸಿದರು. ಮತ್ತು ಇಂದು, ಆಪರೇಷನ್ ಅಜಯ್ ಅಡಿಯಲ್ಲಿ, ಮೊದಲ ವಿಮಾನವು ಭಾರತಕ್ಕೆ ಹಿಂತಿರುಗುತ್ತಿದೆ" ಎಂದು ಸಂಜೀವ್ ಸಿಂಗ್ಲಾ ಹೇಳಿದರು.(REUTERS)
(7 / 8)
ಭಾರತೀಯ ಪ್ರಯಾಣಿಕರ ಮೊದಲ ಬ್ಯಾಚ್ ಗುರುವಾರ ಟೆಲ್ ಅವಿವ್‌ನಿಂದ ಭಾರತಕ್ಕೆ ಆಪರೇಷನ್ ಅಜಯ್ ಅಡಿಯಲ್ಲಿ ವಿಮಾನವೇರಲು ಬಂದ ಸಂದರ್ಭ.(REUTERS)
ಇತರ ಗ್ಯಾಲರಿಗಳು