Kashmir Cool: ಎಲ್ಲೆಲ್ಲೂ ಬಿಸಿಗಾಳಿ, ಕಾಶ್ಮೀರದಲ್ಲೀಗ ಹಿಮಪಾತ, ಕರ್ನಾಟಕದ ಐಎಫ್‌ಎಸ್ ಅಧಿಕಾರಿ ತೆಗೆದ ಮೋಹಕ ಚಿತ್ರಗಳಿವು
- IFS Officer Click ಕಾಶ್ಮೀರವನ್ನು ಬೇಸಿಗೆಯ ಹಿಮಪಾತದಲ್ಲಿ ನೋಡುವುದೇ ಚೆಂದ. ಅದರಲ್ಲೂ ಗುಲ್ಮಾರ್ಗ್ ಅಂತು ಪ್ರವಾಸಿಗರಿಂದ ತುಂಬಿ ಹೋಗಿದೆ. ಅಲ್ಲಿನ ಹಿಮಪಾತದ ಕ್ಷಣಗಳನ್ನು ಕರ್ನಾಟಕ ಕೇಡರ್‌ನ ಹಿರಿಯ ಐಎಫ್‌ಎಸ್ ಅಧಿಕಾರಿ ವಿಜಯರಂಜನ್‌ಸಿಂಗ್( VijayRanjan Singh) ಸೆರೆ ಹಿಡಿದಿದ್ದಾರೆ.
- IFS Officer Click ಕಾಶ್ಮೀರವನ್ನು ಬೇಸಿಗೆಯ ಹಿಮಪಾತದಲ್ಲಿ ನೋಡುವುದೇ ಚೆಂದ. ಅದರಲ್ಲೂ ಗುಲ್ಮಾರ್ಗ್ ಅಂತು ಪ್ರವಾಸಿಗರಿಂದ ತುಂಬಿ ಹೋಗಿದೆ. ಅಲ್ಲಿನ ಹಿಮಪಾತದ ಕ್ಷಣಗಳನ್ನು ಕರ್ನಾಟಕ ಕೇಡರ್‌ನ ಹಿರಿಯ ಐಎಫ್‌ಎಸ್ ಅಧಿಕಾರಿ ವಿಜಯರಂಜನ್‌ಸಿಂಗ್( VijayRanjan Singh) ಸೆರೆ ಹಿಡಿದಿದ್ದಾರೆ.
(1 / 10)
ಕಾಶ್ಮೀರ ಎಂದರೆ ಪ್ರವಾಸಿಗರ ಸ್ವರ್ಗ. ಅಲ್ಲಿ ಇರುವುದು ಬಹುತೇಕ ಎರಡೇ ಕಾಲ. ಒಂದು ಮಳೆಗಾಲ, ಮತ್ತೊಂದು ಚಳಿಗಾಲ. ಬೇಸಿಗೆಯಲ್ಲೂ ಚಳಿಯ ವಾತಾವರಣ, ಹಿಮಪಾತದ ಖುಷಿ ಅನುಭವಿಸುವುದೇ ಚಂದ.
(2 / 10)
ಅದರಲ್ಲೂ ಕಾಶ್ಮೀರದ ಗುಲ್‌ಮಾರ್ಗ್ ಎಂದರೆ ಅದು ಹಿಮಪಾತದ ಪ್ರಮುಖ ತಾಣ, ಅಲ್ಲಿ ಯಾವಾಗಲು ಹಿಮಪಾತ ಆಗುತ್ತಲೇ ಇರುತ್ತದೆ.
(3 / 10)
ಗುಲ್ ಮಾರ್ಗ್ ಎಂದರೆ ಅದನ್ನು ಹೂವಿನ ಹಾದಿ ಎಂದು ಅಲ್ಲಿನವರು ಕರೆಯುತ್ತಾರೆ. ಆದರೆ ಹಿಮಪಾತದ ಹಾದಿಯನ್ನು ಗುಲ್ ಮಾರ್ಗ್ ನಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಖುಷಿ. ಹಿಮಪಾತದೊಂದಿಗೆ ಬದುಕು ಕಂಡುಕೊಂಡಿರುವ ಹಲವು ಪ್ರಾಣಿಗಳನ್ನೂ ಅಲ್ಲಿ ನೋಡಬಹುದು.
(4 / 10)
ಗುಲ್ ಮಾರ್ಗ್ ಉದ್ದಕ್ಕೂ ಕಾಣ ಸಿಗುವ ಕೋನಿಫರ್ ಮರಗಳನ್ನು ಹಿಮಪಾತದ ನಡುವೆ ವೀಕ್ಷಿಸುವ ಖುಷಿಯ ಬೇರೆ. ಇದಕ್ಕಾಗಿ ದೇಶ ವಿದೇಶದಿಂದ ಪ್ರವಾಸಿಗರು ಕಾಶ್ಮೀರಕ್ಕೆ ಬರುತ್ತಾರೆ.
(6 / 10)
ನಿರ್ದಿಗಂತದವರೆಗೂ ಎನ್ನುವ ಹಾಗೆ ನೋಡುತ್ತಾ ಇದ್ದರೆ ಬರೀ ಬೆಟ್ಟಗಳ ಸಾಲು ಕಾಣುತ್ತವೆ. ಅವುಗಳ ಸುತ್ತಲೂ ಹಾಲ್ಮೊನೆರೆಯಂತಹ ಹಿಮಪಾತ. ಕೈಗ ಸಿಕ್ಕುಬಿಡುತ್ತವೆ ಎನ್ನುವ ರೀತಿಯಲ್ಲಿವೆ ಚಲಿಸುವ ಮೋಡಗಳು.
(7 / 10)
ಫೆಬ್ರವರಿ ಬಂದರೆ ಇಲ್ಲಿ ಹಿಮಪಾತ ಜೋರಾಗುತ್ತದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಂತೂ ಗುಲ್ ಮಾರ್ಗ್ ಸಂಪೂರ್ಣ ಹಿಮಪಾತದಿಂದಲೇ ತುಂಬಿರುತ್ತದೆ. ಇವುಗಳ ನಡುವೆಯೇ ಹಲವಾರು ಆಟಗಳಿಗೂ ಅವಕಾಶ ನೀಡಲಾಗುತ್ತದೆ.
(8 / 10)
ಗುಲ್ ಮಾರ್ಗ್‌ನಲ್ಲಿ ರೂಪಿಸಿರುವ ವಿಶ್ವದ ಮೂರನೇ ಅತಿ ಉದ್ದನೆಯ ಕೇಬಲ್ ವೇ ಯೋಜನೆ ಕೂಡ ಇಲ್ಲಿ ಜನಪ್ರಿಯ. ಕೇಬಲ್ ವೇನಲ್ಲಿ ಕುಳಿತು ಹಿಮ ಸೌಂದರ್ಯವನ್ನು ಪ್ರವಾಸಿಗರು ಸವಿಯುತ್ತಾರೆ.
(9 / 10)
ಗುಲ್ ಮಾರ್ಗ್‌ನ ಉದ್ದಕ್ಕೂ ಇರುವ ಶೆಫರ್ಡ್‌ಗಳ ಮನೆಗಳು ಕೂಡ ಹಿಮಪಾತಕ್ಕೆ ಸಿಲುಕುತ್ತವೆ. ಕೆಲವರು ಇಲ್ಲಿಯೇ ವಾಸವಿದ್ದುಕೊಂಡು ತಮ್ಮ ಪ್ರಾಣಿಗಳೊಂದಿಗೆ ಜೀವನ ನಡೆಸುವುದು ವಿಶೇಷ.
(10 / 10)
ಗುಲ್ ಮಾರ್ಗ್‌ನ ಹಿಮಪಾತದ ಕ್ಷಣಗಳನ್ನು ಸೆರೆಹಿಡಿದಿರುವ ವಿಜಯರಂಜನ್‌ಸಿಂಗ್ ಇವರು. ಜಾರ್ಖಂಡ್ ಮೂಲದವರಾದರೂ ಕರ್ನಾಟಕದ ಐಎಫ್‌ಎಸ್ ಅಧಿಕಾರಿಯಾಗಿ ಮೂರು ದಶಕದಿಂದ ಕೆಲಸ ಮಾಡುತ್ತಿದ್ದಾರೆ. ಕಾರ್ಕಳ, ನಾಗರಹೊಳೆ, ಮೈಸೂರು ಮೃಗಾಲಯ ಸಹಿತ ಹಲವು ಕಡೆ ಕೆಲಸ ಮಾಡಿ ದೆಹಲಿಯಲ್ಲಿ ಕೇಂದ್ರ ಸೇವೆ ಮೇಲೆ ಇದ್ದಾರೆ. ಸದ್ಯ ಕೇಂದ್ರ ಹಣಕಾಸು ಸಚಿವಾಲಯದ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್(SPMCIL) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ( CMD) ಹುದ್ದೆಯಲ್ಲಿದ್ದಾರೆ.
ಇತರ ಗ್ಯಾಲರಿಗಳು