ಲಕ್ಷದ್ವೀಪದಿಂದ ನಾಗಾಲ್ಯಾಂಡ್‌ವರೆಗೆ; ಭಾರತದ ಈ ಸ್ಥಳಗಳಿಗೆ ವಿಶೇಷ ಪರವಾನಿಗೆ ಇಲ್ಲದೆ ಭಾರತೀಯರಿಗೂ ಎಂಟ್ರಿ ಇಲ್ಲ
- ಭಾರತದಲ್ಲಿ ನೋಡಲು ಸಾಕಷ್ಟು ಆಕರ್ಷಣೀಯ ಸ್ಥಳಗಳಿವೆ, ಆದರೆ ಈ ಎಲ್ಲಾ ಸ್ಥಳಗಳಿಗೂ ಸುಲಭವಾಗಿ ಹೋಗಲು ಆಗುವುದಿಲ್ಲ. ಅದಕ್ಕೆ ಕಾರಣ ಇನ್ನರ್ ಲೈನ್ ಪರ್ಮಿಟ್ ಅಥವಾ ಐಎಲ್‌ಪಿ. ಏನಿದು ಐಎಲ್‌ಪಿ ಲಕ್ಷದ್ವೀಪ ಸೇರಿದಂತೆ ಭಾರತದ ಯಾವೆಲ್ಲಾ ಜಾಗಗಳಿಗೆ ತೆರಳಲು ಈ ವಿಶೇಷ ಪರವಾನಿಗೆ ಅಗತ್ಯ ನೋಡಿ.
- ಭಾರತದಲ್ಲಿ ನೋಡಲು ಸಾಕಷ್ಟು ಆಕರ್ಷಣೀಯ ಸ್ಥಳಗಳಿವೆ, ಆದರೆ ಈ ಎಲ್ಲಾ ಸ್ಥಳಗಳಿಗೂ ಸುಲಭವಾಗಿ ಹೋಗಲು ಆಗುವುದಿಲ್ಲ. ಅದಕ್ಕೆ ಕಾರಣ ಇನ್ನರ್ ಲೈನ್ ಪರ್ಮಿಟ್ ಅಥವಾ ಐಎಲ್‌ಪಿ. ಏನಿದು ಐಎಲ್‌ಪಿ ಲಕ್ಷದ್ವೀಪ ಸೇರಿದಂತೆ ಭಾರತದ ಯಾವೆಲ್ಲಾ ಜಾಗಗಳಿಗೆ ತೆರಳಲು ಈ ವಿಶೇಷ ಪರವಾನಿಗೆ ಅಗತ್ಯ ನೋಡಿ.
(1 / 11)
ಭಾರತವು ಪ್ರವಾಸಿಗರೇ ಸ್ವರ್ಗದಂತಿರುವುದು ಸುಳ್ಳಲ್ಲ. ನಮ್ಮ ದೇಶದಲ್ಲಿ ನೋಡಲು ಸಾಕಷ್ಟು ಸುಂದರ, ರಮ್ಯ ಮನೋಹರ ತಾಣಗಳಿವೆ. ಹಸಿರು ಬೆಟ್ಟಗಳಿಂದ, ತಿಳಿ ನೀಲಿ ಕಡಲಿನವರೆಗೆ ಭಾರತಾಂಬೆಯ ಮಡಿಲಿನಲ್ಲಿ ಏನುಂಟು ಏನಿಲ್ಲ ಹೇಳಿ. ಆದರೆ ಭಾರತದಲ್ಲೇ ಇರುವ ಈ ಕೆಲವು ತಾಣಗಳಿಗೆ ಭೇಟಿ ನೀಡಲು ಭಾರತೀಯರು ವಿಶೇಷ ಪರವಾನಿಗೆ ಹೊಂದಿರಬೇಕು. ಇದನ್ನು ಇನ್ನರ್ ಲೈನ್ ಪರ್ಮಿನ್ ಅಥವಾ ಐಎಲ್‌ಪಿ ಎಂದು ಕರೆಯುತ್ತಾರೆ. ಭಾರತದ ಅಂತರರಾಷ್ಟ್ರೀಯ ಗಡಿಗಳೊಂದಿಗೆ ಸಂಪರ್ಕ ಹೊಂದಿರುವ ಈ ತಾಣಗಳು ಸೂಕ್ಷವಲಯಗಳು ಎಂದೂ ಗುರುತಿಸಲ್ಪಟ್ಟಿದೆ. ಈ ಜಾಗಗಳಿಗೆ ಭಾರತೀಯರು ಕೂಡ ವಿಶೇಷ ಅನುಮತಿ ಪಡೆದು ಹೋಗಬೇಕು. ಅಂತಹ ಜಾಗಗಳು ಯಾವುವು, ಅವು ಎಲ್ಲಿವೆ ಎಂಬುದನ್ನು ಗಮನಿಸಿ.
(2 / 11)
ಭಾರತದ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರ ಹಾಗೂ ನಮ್ಮ ದೇಶದ ಪ್ರಸಿದ್ಧ ಪ್ರವಾಸಿತಾಣ ಲಡಾಕ್ ಬೇರೆ ದೇಶಗಳ ಗಡಿಯೊಂದಿಗೆ ಹೊಂದಿಕೊಂಡಿದ್ದರೂ ಕೂಡ ಈ ದೇಶಗಳಿಗೆ ಪ್ರಯಾಣ ಮಾಡಲು ಯಾವುದೇ ಪರವಾನಿಗೆಯ ಅಗತ್ಯವಿಲ್ಲ ಎನ್ನುವುದು ಸಂತೋಷ ಪಡಬೇಕಾದ ಸುದ್ದಿ.
(3 / 11)
ಇನ್ನರ್ ಲೈನ್ ಪರ್ಮಿಟ್ ಬಗ್ಗೆ ಹೇಳಲು ಹೊರಟರೆ, ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಹೊಗಳಿ ಮೋದಿ ಮಾಡಿರುವ ಸೋಷಿಯಲ್ ಮಿಡಿಯಾ ಪೋಸ್ಟ್‌ಗಳು ವೈರಲ್ ಆಗುವವರೆಗೂ ಇನ್ನರ್ ಲೈನ್ ಪರ್ಮಿಟ್ ಬಗ್ಗೆ ಹಲವರಿಗೆ ತಿಳಿದಿರಲಿಲ್ಲ. ಯಾಕೆಂದರೆ ಲಕ್ಷದ್ವೀಪಕ್ಕೆ ತೆರಳಲು ಕೂಡ ಇನ್ನರ್ ಲೈನ್ ಪರ್ಮಿಟ್ ಅವಶ್ಯ. ಹಾಗಾದರೆ ಲಕ್ಷದ್ವೀಪದೊಂದಿಗೆ ಇನ್ನೂ ಯಾವೆಲ್ಲ ಜಾಗಗಳಿಗೆ ಐಎಲ್‌ಪಿ ಅಗತ್ಯವಿದೆ ನೋಡೋಣ.
(4 / 11)
ಲಕ್ಷದ್ವೀಪ: ಭಾರತದ ಮಾಲ್ಡಿವ್ಸ್ ಎಂದೇ ಖ್ಯಾತಿಯಾದ ಲಕ್ಷದ್ವೀಪವು ಕೇಂದ್ರಾಡಳಿತ ಪ್ರದೇಶವಾಗಿದ್ದು, ಇಲ್ಲಿಗೆ ಹೋಗಲು ಪ್ರತಿಯೊಬ್ಬ ಪ್ರವಾಸಿಗರಿಗೂ ಪರವಾನಿಗೆ ಅವಶ್ಯ. ಒಂದು ಗುರುತಿನ ಚೀಟಿಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಮುಖ್ಯವಾಗುತ್ತದೆ. ಇಲ್ಲಿಗೆ ತೆರಳಲು ಪರವಾನಿಗೆ ಪತ್ರ ಪಡೆಯಲು ಆನ್‌ಲೈನ್ ಅರ್ಜಿಗಳು ಲಭ್ಯ.
(5 / 11)
ಮಣಿಪುರ: ಮಣಿಪುರಕ್ಕೆ ಭೇಟಿ ನೀಡಲು ಕೂಡ ಇನ್ನರ್ ಲೈನ್ ಪರ್ಮಿಟ್ ಅವಶ್ಯವಿದೆ. 2019ರ ಡಿಸೆಂಬರ್ 11 ರಿಂದ ಇಲ್ಲಿಗೆ ತೆರಳಲು ಪರವಾನಿಗೆ ಪಡೆಯಬೇಕು ಎಂಬ ಕಾನೂನು ಹೊರಡಿಸಲಾಗಿದೆ. ಆಗ ರಾಷ್ಟ್ರಪತಿಯಾಗಿದ್ದ ರಾಮ್‌ನಾಥ್ ಕೋವಿಂದ್ ಅವರು ಈ ಆದೇಶಕ್ಕೆ ಸಹಿ ಹಾಕಿದ್ದರು. ಮಣಿಪುರವು ಈಶಾನ್ಯ ಭಾರತದಲ್ಲಿ ಐಎಲ್‌ಪಿ ಹೊಂದಿರುವ ನಾಲ್ಕನೇ ರಾಜ್ಯವಾಗಿದೆ.
(Wikipedia)(6 / 11)
ಅರುಣಾಚಲ ಪ್ರದೇಶ: ಮಯನ್ಮಾರ್, ಭೂತಾನ್, ಚೀನಾ ದೇಶಗಳ ಗಡಿಯೊಂದಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಸ್ಥಳಿಯರಲ್ಲದೇ ಇರುವವರಿಗೆ ವಿಶೇಷ ಪರವಾನಿಗೆ ಅವಶ್ಯವಿದೆ.
(7 / 11)
ಮೇಘಾಲಯ: ಮೇಘಾಲಯವು ಭಾರತದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾದರೂ ಇಲ್ಲಿಗೆ ಹೋಗಲು ಭಾರತೀಯರಿಗೆ ವಿಶೇಷ ಪರವಾನಿಗೆ ಅಗತ್ಯ. 2016ರ ಮೇಘಾಲಯ ನಿವಾಸಿಗಳ ಸುರಕ್ಷತೆ ಹಾಗೂ ಭದ್ರತಾ ಕಾಯಿದೆಯ ಪರಿಷ್ಕೃತ ನಿಯಮಗಳ ಪ್ರಕಾರ ಈ ರಾಜ್ಯದಲ್ಲಿ 24 ಗಂಟೆಗಳ ಕಾಲ ಇರಲು ಬಯಸುವವ ಪ್ರವಾಸಿಗರು, ಕಾರ್ಮಿಕರು, ಯಾವುದೇ ವ್ಯವಹಾರಿಕ ಉದ್ದೇಶದಿಂದ ಬಂದವರು ಕೂಡ ಅಗತ್ಯ ದಾಖಲೆಗಳನ್ನು ನೀಡಿ ಪರವಾನಿಗೆ ಪಡೆಯುವುದು ಅವಶ್ಯ.
(8 / 11)
ನಾಗಾಲ್ಯಾಂಡ್: ಬುಡಕಟ್ಟು ಜನಾಂಗದವರ ನೆಲೆಯಾಗಿರುವ ನಾಗಾಲ್ಯಾಂಡ್ ಮ್ಯಾಯನ್ಮಾರ್ ಗಡಿಯೊಂದಿಗೆ ಹೊಂದಿಕೊಂಡಿದೆ. ಇಲ್ಲಿಗೂ ಕೂಡ ಐಎಲ್‌ಪಿ ಅವಶ್ಯವಾಗಿದೆ. ಇಲ್ಲಿಗೆ ಹೋಗಲು ವಿಶೇಷ ಅನುಮತಿ ಅರ್ಜಿಯನ್ನು ಆನ್‌ಲೈನ್ ಮೂಲಕವೂ ಪಡೆಯಬಹುದು.
(9 / 11)
ಮಿಜೋರಾಂ: ಮಯನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿಕೊಂಡಿರುವ ಮೀಜೋರಾಂಗೆ ತೆರಳಲು ಕೂಡ ಐಎಲ್‌ಪಿ ಅಗತ್ಯವಿದೆ. ಮೀಜೋರಾಂ ಸಂಪರ್ಕ ಅಧಿಕಾರಿಗಳಿಂದ ವಿಶೇಷ ಪರವಾನಿಗೆ ಪಡೆಯಬಹುದು. ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಪ್ರಯಾಣ ಮಾಡುವವರಿಗೆ ವಿಶೇಷ ಪಾಸ್ ಸಿಗುತ್ತದೆ.
(10 / 11)
ಸಿಕ್ಕಿಂ: ಸಿಕ್ಕಿಂ ರಾಜ್ಯದ ಸಂರಕ್ಷಿತ ಪ್ರದೇಶಗಳಾದ ತ್ಸೋಮ್ಗಾ-ಬಾಬಾ ಮಂದಿರ, ನಾಥುಲಾ ಪಾಸ್, ಝೋಂಗ್ರಿಟ್ರೆಕ್, ಸಿಂಗಲಿಲಾ ಟ್ರೆಕ್, ಝೀರೋ ಪಾಯಿಂಟ್, ಯುಮ್ತಾಂಗ್ ಸೇರಿದಂತೆ ಇನ್ನೂ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಅನುಮತಿ ಅವಶ್ಯ.
ಇತರ ಗ್ಯಾಲರಿಗಳು