ಪುರಿ ಜಗನ್ನಾಥ ರಥೋತ್ಸವ 2024 ಜುಲೈ 7 ರಿಂದ ಶುರು, ವಾರ್ಷಿಕ ರಥೋತ್ಸವದ ಮುಹೂರ್ತ, ವಿಶೇಷ ಮತ್ತು ಇತರೆ ವಿವರ- ಫೋಟೋಸ್
Puri Rathayatra 2024 date time: ಪುರಿ ಜಗನ್ನಾಥ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದು ಆಷಾಢ ಮಾಸದ ಹಬ್ಬ. ಈ ಸಲ ಪುರಿ ಜಗನ್ನಾಥ ರಥೋತ್ಸವ 2024 ಜುಲೈ 7 ರಿಂದ ಶುರುವಾಗಲಿದೆ. ವಾರ್ಷಿಕ ರಥೋತ್ಸವದ ಮುಹೂರ್ತ, ವಿಶೇಷ ಮತ್ತು ಇತರೆ ವಿವರ- ಫೋಟೋಸ್ ಇಲ್ಲಿದೆ.
(1 / 7)
ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ಕಾರ್ಯಕ್ರಮ. ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದು ಆಷಾಢ ಮಾಸದಲ್ಲಿ ನಡೆಯುವ ಅತ್ಯಂತ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿ ಇದು ಜುಲೈ 7 ರಿಂದ ಶುರುವಾಗುತ್ತಿದೆ.(PTI)
(2 / 7)
ಪುರಿ ಜಗನ್ನಾಥ ರಥೋತ್ಸವವು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನ ಅಥವಾ ಬಿದಿಗೆಯಂದು ಪ್ರಾರಂಭವಾಗುತ್ತದೆ ಮತ್ತು ಇದು ಆಷಾಢ ಮಾಸದ ಶುಕ್ಲ ಪಕ್ಷದ ಹತ್ತನೇ ದಿನ ಅಥವಾ ದಶಮಿ ತಿಥಿಯಂದು ಕೊನೆಗೊಳ್ಳುತ್ತದೆ. ಪ್ರಸಿದ್ಧ ರಥಯಾತ್ರೆಯನ್ನು ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಆಚರಿಸಲಾಗುತ್ತದೆ.
(3 / 7)
ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ಮಾತ್ರವೇ ಜಗನ್ನಾಥ ದೇವರು ಬಲರಾಮ ಮತ್ತು ಸುಭದ್ರೆಯರೊಂದಿಗೆ ದೇವಾಲಯದಿಂದ ಹೊರಬರುತ್ತಾರೆ. ಪುರಿ ಜಗನ್ನಾಥ ದೇವಾಲಯಕ್ಕೆ ಹಿಂದಿರುಗುವ ಮೊದಲು ಅವರು ಎಂಟು ದಿನಗಳ ಉತ್ಸವದ ವೇಳೆ ಗುಂಡಿಚಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
(4 / 7)
ಪುರಿ ಜಗನ್ನಾಥ ರಥಯಾತ್ರೆಯನ್ನು ಈ ಸಲ ಜುಲೈ 7 ರಂದು ಭಾನುವಾರದಿಂದ ಶುರುಮಾಡಲಾಗುತ್ತಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಬಿದಿಗೆ ಅದೇ ದಿನ ಇದೆ. ಬಿದಿಗೆ ತಿಥಿಯು 04:26 AM ಕ್ಕೆ ಪ್ರಾರಂಭವಾಗಿ ಜುಲೈ 08 04:59 AM ಕ್ಕೆ ಕೊನೆಗೊಳ್ಳುತ್ತದೆ.(PTI)
(5 / 7)
ರಥಯಾತ್ರೆಯ ಸಮಯದಲ್ಲಿ, ಜಗನ್ನಾಥ, ಬಲರಾಮ ಮತ್ತು ಸುಭದ್ರೆಯರು ಜಗನ್ನಾಥ ದೇವಾಲಯದಿಂದ ಹೊರ ಬಂದು ಗುಂಡಿಚಾ ದೇವಾಲಯದಲ್ಲಿ ರಾಣಿ ಗುಂಡಿಚಾಗೆ ಭೇಟಿ ನೀಡುತ್ತಾರೆ. ಅವರನ್ನು ಮೂರು ರಥಗಳಲ್ಲಿ ಕೂರಿಸಿ ಗುಂಡಿಚಾ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಇದುವೆ ಪುರಿ ಜಗನ್ನಾಥನ ವಾರ್ಷಿಕ ರಥೋತ್ಸವ. ಈಗಾಗಲೇ ರಥ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.(Prahlad Mahato)
(6 / 7)
ಮೂವರದ್ದೂ ಬೇರೆ ಬೇರೆ ರಥಗಳು. ಅವುಗಳದ್ದೇ ಆದ ವಿಶೇಷಗಳಿವೆ. ಜಗನ್ನಾಥನ ರಥವು 18 ಚಕ್ರಗಳನ್ನು ಹೊಂದಿದೆ, ಬಲರಾಮನ ರಥವು 16 ಮತ್ತು ಸುಭದ್ರಾ 14 ಚಕ್ರಗಳನ್ನು ಹೊಂದಿದೆ. ಜಗನ್ನಾಥನ ರಥವನ್ನು ನಂದಿಘೋಷ ಎಂದು ಕರೆಯಲಾಗುತ್ತದೆ, ಬಲರಾಮನ ರಥವನ್ನು ತಾಳಧ್ವಜ ಎಂದು ಕರೆಯಲಾಗುತ್ತದೆ ಮತ್ತು ಸುಭದ್ರೆಯ ರಥವನ್ನು ಪದ್ಮಧ್ವಜ ಎಂದು ಕರೆಯಲಾಗುತ್ತದೆ.(Prahlad Mahato)
ಇತರ ಗ್ಯಾಲರಿಗಳು