ಭಾರತದ ಅತಿ ದೊಡ್ಡ ಲೋಕಸಭಾ ಕ್ಷೇತ್ರವಿದು; ಇದರ ವೈಶಿಷ್ಟ್ಯ, ಮತದಾರರ ಸಂಖ್ಯೆ ಇನ್ನಿತರ ವಿವರ ಇಲ್ಲಿದೆ
- ಲೋಕಸಭೆ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿವೆ. ಈ ಹೊತ್ತಿನಲ್ಲಿ ಭಾರತದ ಅತಿ ದೊಡ್ಡ ಲೋಕಸಭಾ ಕ್ಷೇತ್ರ ಯಾವುದು, ಇಲ್ಲಿನ ಮತದಾರರ ಸಂಖ್ಯೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.
- ಲೋಕಸಭೆ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿವೆ. ಈ ಹೊತ್ತಿನಲ್ಲಿ ಭಾರತದ ಅತಿ ದೊಡ್ಡ ಲೋಕಸಭಾ ಕ್ಷೇತ್ರ ಯಾವುದು, ಇಲ್ಲಿನ ಮತದಾರರ ಸಂಖ್ಯೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.
(1 / 7)
ಭಾರತದ ಅತಿ ದೊಡ್ಡ ಲೋಕಸಭಾ ಕ್ಷೇತ್ರ ತೆಲಂಗಾಣದ ಮಲ್ಕಜ್‌ಗಿರಿ. ಇದು ಇಲ್ಲಿನ 17 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕ್ಷೇತ್ರವು 2008 ರಲ್ಲಿ ಅಸ್ತಿತ್ವಕ್ಕೆ ಬಂದಿತು.
(2 / 7)
2019ರ ಲೋಕಸಭಾ ಚುನಾವಣಾ ಸಮೀಕ್ಷೆ ಆಧಾರದಂತೆ ಇಲ್ಲಿ 31,50,303 ಮತದಾರರಿದ್ದು, ಈ ಕ್ಷೇತ್ರವು ದೇಶದಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಆ ಮೂಲಕ ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರ ಎನ್ನಿಸಿಕೊಂಡಿದೆ.
(3 / 7)
ಈ ಕ್ಷೇತ್ರದ ಮೊದಲ ಸಂಸದರು ಸರ್ವೇ ಸತ್ಯನಾರಾಯಣ. ಇವರು ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿದ್ದರು.
(4 / 7)
2014ರಲ್ಲಿ ತೆಲಂಗಾಣವು ಆಂಧ್ರಪ್ರದೇಶದಿಂದ ವಿಭಜನೆಗೊಂಡಾಗ ಈ ಕ್ಷೇತ್ರವು ತೆಲಂಗಾಣಕ್ಕೆ ಸೇರಿತು. 2014 ರಿಂದ 2019ರವರೆಗೆ ಮಲ್ಲರೆಡ್ಡಿ ತೆಲುಗು ದೇಶಂ ಪಾರ್ಟಿಯ ಮೂಲಕ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು.
(5 / 7)
ಮಲ್ಕಜ್‌ಗಿರಿಯನ್ನು ಈ ಹಿಂದೆ ಮಲ್ಲಿಕಾರ್ಜುನಗಿರಿ ಎಂದು ಕರೆಯುತ್ತಿದ್ದರು. ಇದು ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯಲ್ಲಿದೆ.
(6 / 7)
2024ರ ಲೋಕಸಭೆ ಚುನಾವಣೆಗೆ ಬಿಆರ್‌ಎಸ್ ಪಕ್ಷದಿಂದ ರಾಗಿಡಿ ಲಕ್ಷ್ಮ ರೆಡ್ಡಿ ಹಾಗೂ ಬಿಜೆಪಿಯಿಂದ ಈಟಲ ರಾಜೇಂದ್ರ ಸ್ಪರ್ಧಿಸುತ್ತಿದ್ದಾರೆ.
ಇತರ ಗ್ಯಾಲರಿಗಳು