PM Modi in Telangana: ಸಿಕಂದರಾಬಾದ್ ಮಹಾಕಾಳಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ, ತೆಲಂಗಾಣದಲ್ಲಿ 7200 ಕೋಟಿ ರೂ. ಯೋಜನೆಗೆ ಚಾಲನೆ
ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತೆಲಂಗಾಣ ಪ್ರವಾಸ ಮಾಡಿದ್ದು, 7200 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಕಾಮಗಾರಿಗಳಿಗೆ ಚಾಲನೆ ನೀಡಿದರು. ಪ್ರಧಾನಿ ಮೋದಿಯವರ ಈ ಪ್ರವಾಸದ ಸಚಿತ್ರ ವರದಿ ಇದು.
(1 / 7)
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತೆಲಂಗಾಣದ ಸಿಕಂದರಾಬಾದ್ ನ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. (PTI)
(2 / 7)
ಸಿಕಂದರಾಬಾದ್‌ನ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಆಡಳಿತ ಮಂಡಳಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿದರು.(ANI)
(3 / 7)
"ಎಲ್ಲಾ ಭಾರತೀಯರ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಸಿಕಂದರಾಬಾದ್‌ನ ಶ್ರೀ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್' ನಲ್ಲಿ ಹೇಳಿದ್ದರು.(PTI)
(4 / 7)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
(5 / 7)
ಇದಾಗಿ, ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಕೃಷ್ಣನ ಮೂರ್ತಿಯನ್ನು ಕೊಟ್ಟು ಸನ್ಮಾನಿಸಿದರು.(PTI)
(6 / 7)
ಪಿಎಂ ಮೋದಿ ಸಂಗಾರೆಡ್ಡಿಯಲ್ಲಿ 7,200 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ಶಂಕುಸ್ಥಾಪನೆ ನೆರವೇರಿಸಿದರು.(PTI)
ಇತರ ಗ್ಯಾಲರಿಗಳು