Supreetha: ಮೈಸೂರಿನ ಯುವತಿ ಸುಪ್ರೀತಾ ಸಿಯಾಚೆನ್‌ನ ಹಿಮ ಪ್ರದೇಶದಲ್ಲಿ ಸೇವೆ, ದೇಶದ ಮೊದಲ ಮಹಿಳಾ ಅಧಿಕಾರಿಯೆಂಬ ಹೆಮ್ಮೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Supreetha: ಮೈಸೂರಿನ ಯುವತಿ ಸುಪ್ರೀತಾ ಸಿಯಾಚೆನ್‌ನ ಹಿಮ ಪ್ರದೇಶದಲ್ಲಿ ಸೇವೆ, ದೇಶದ ಮೊದಲ ಮಹಿಳಾ ಅಧಿಕಾರಿಯೆಂಬ ಹೆಮ್ಮೆ Photos

Supreetha: ಮೈಸೂರಿನ ಯುವತಿ ಸುಪ್ರೀತಾ ಸಿಯಾಚೆನ್‌ನ ಹಿಮ ಪ್ರದೇಶದಲ್ಲಿ ಸೇವೆ, ದೇಶದ ಮೊದಲ ಮಹಿಳಾ ಅಧಿಕಾರಿಯೆಂಬ ಹೆಮ್ಮೆ photos

  • Indian Air Defence ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ಬಹುತೇಕರ ಕನಸು. ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಅದರಲ್ಲೂ ಸೇನೆ ಸೇರಿಕೊಂಡ ನಂತರ ಅತ್ಯಂತ ದುರ್ಗಮ ಪ್ರದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಇನ್ನು ಕಷ್ಟ. ಮೈಸೂರಿನ ಟಿ.ಸುಪ್ರೀತಾ(CT Supreetha) ಸೇನಾಧಿಕಾರಿಯಾಗಿ ಸಿಯಾಚೆನ್‌ಗೆ ನಿಯೋಜನೆಗೊಂಡ ಮೊದಲ ಮಹಿಳಾ ಸೇನಾಧಿಕಾರಿ.

ಮೈಸೂರಿನ ಸುಪ್ರೀತಾ ಅವರಿಗೆ ಹೆಮ್ಮೆಯ ಕ್ಷಣ, ಭಾರತೀಯ ಸೇನೆಯಲ್ಲಿ ಮೂರು ವರ್ಷದಿಂದ ಸೇವೆ ಮಾಡುತ್ತಿರುವ ಸಂತಸದ ಕ್ಷಣ.
icon

(1 / 6)

ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಸುಪ್ರಿತಾ ಸಿ.ಟಿ. ಅವರು, ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿ ಸೇವೆಯನ್ನು ಆರಂಭಿಸಿದ್ದಾರೆ.
icon

(2 / 6)

ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾದ ದೇಶದ ಮೊದಲ ಮಹಿಳಾ ಯೋಧೆ ಎಂಬುದು  ಸುಪ್ರೀತಾ ಅವರ ವಿಶೇಷ. 
icon

(3 / 6)

2024ರಲ್ಲಿ ಪತಿ ಮೇಜರ್‌ ಜೆರ್ರಿ ಬ್ಲೇಜ್ ಅವರೊಂದಿಗೆ ದೆಹಲಿಯ ರಾಜಪತ್‌ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದ ಸುಪ್ರೀತಾ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌, ಜಬ್ಬಾಲ್ಪರ್‌ ಹಾಗೂ ಲೇಹ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಅವರು ಸಿಯಾಚಿನ್‌ಗೆ ಸ್ವಯಂ ಪ್ರೇರಿತವಾಗಿ ಆಯ್ಕೆಯಾಗಿದ್ದಾರೆ.
icon

(4 / 6)

ಸಿಯಾಚಿನ್‌ ಅತಿ ಕಡಿಮೆ ಉಷ್ಣಾಂಶದ ಪ್ರದೇಶ. ಸದಾ ಹಿಮಗಡ್ಡೆಯಿಂದ ಇರುವ ಇಲ್ಲಿ ಕೆಲಸ ಮಾಡುವುದು ದೊಡ್ಡ ಸವಾಲು.ಸೇನಾ ಅಧಿಕಾರಿಗಳು ಅದರಲ್ಲೂ ಮಹಿಳೆಯರಿಗೆ ಸವಾಲೇ ಸರಿ. ಅದನ್ನು ಗೆದ್ದಿದ್ದಾರೆ. ಸುಪ್ರೀತಾ ಇತಿಹಾಸ ಬರೆದಿದ್ದಾರೆ.
icon

(5 / 6)

ಮೈಸೂರು ಜಿಲ್ಲೆಯಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟ್‌ ಆಗಿರುವ  ತಿರುಮಲ್ಲೇಶ್‌ ಹಾಗೂ ನಿರ್ಮಲಾ ದಂಪತಿ ಪುತ್ರಿ ಸುಪ್ರೀತಾ.  ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಹಾಗೂ ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್‌ ಪಡೆದುಕೊಂಡಿದ್ದರು. ಆನಂತರ  2021ರಲ್ಲಿ ಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಆಗಿ ಆಯ್ಕೆಯಾಗಿ ತರಬೇತಿಯ ನಂತರ ವಾಯುಪಡೆಗೆ ನಿಯೋಜನೆಯಾಗಿದ್ದರು. ಈಗ ಸಿಯಾಚೆನ್‌ನಲ್ಲಿ ಸೇವೆ ಮಾಡುತ್ತಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು