ಭಾರತದ ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ, 2 ದಿನಗಳ ಪ್ರವಾಸದ ಸಚಿತ್ರ ವರದಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸ ಮುಗಿಸಿ ನವದೆಹಲಿಗೆ ವಾಪಸಾದರು. 2021ರಲ್ಲಿ ಭೂತಾನ್ ಪ್ರಕಟಿಸಿದ್ದ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ “ದಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ” ವನ್ನೂ ಇದೇ ವೇಳೆ ಅವರು ಸ್ವೀಕರಿಸಿದರು. ಮೋದಿ ಅವರ ಈ ಪ್ರವಾಸದ ಚಿತ್ರನೋಟ ಇಲ್ಲಿದೆ.
(1 / 9)
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸವನ್ನು ಮುಗಿಸಿ ಶನಿವಾರ ಬೆಳಿಗ್ಗೆ ನವದೆಹಲಿಗೆ ವಾಪಸಾದರು.
(PTI)(2 / 9)
ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸ ಮುಗಿಸಿ ಹಿಂದಿರುಗುವಾಗ ವಿಮಾನದ ಬಾಗಿಲಲ್ಲಿ ಅವರನ್ನು ಬೀಳ್ಕೊಡುತ್ತಿರುವ
ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗಯೆಲ್ ವಾಂಗ್ಚುಕ್ ಮತ್ತು ಪ್ರಧಾನಿ ಶೆರಿಂಗ್ ಟೊಬ್ಗೆ.
(PTI)(3 / 9)
ಭೂತಾನ್ ಪ್ರವಾಸದ ವೇಳೆ ಭಾರತದ ಪ್ರದಾನಿ ನರೇಂದ್ರ ಮೋದಿ ಅವರು ಗ್ಯಾಲ್ಟ್ಸುಯೆನ್ ಜೆಟ್ಸುನ್ ಪೆಮಾ ವಾಂಗ್ಚುಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದರು. ಭೂತಾನ್ ಪ್ರಧಾನಿ ಡಾಶೊ ತ್ಸೆರಿಂಗ್ ಟೊಬ್ಗೆ ಜೊತೆಗಿದ್ದರು.
(PTI)(4 / 9)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 9)
ಭೂತಾನ್‌ನ 13ನೇ ಪಂಚವಾರ್ಷಿಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು 10,000 ಕೋಟಿ ರೂಪಾಯಿಯ ಗಣನೀಯ ನೆರವು ಪ್ಯಾಕೇಜ್ ಅನ್ನು ಇದೇ ವೇಳೆ ಘೋಷಿಸಿದರು.
(PTI)(6 / 9)
ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು "ಸ್ನೇಹಿತ ಮತ್ತು ಹಿರಿಯ ಸಹೋದರ" ಎಂದು ಶ್ಲಾಘಿಸಿದ ಭೂತಾನ್ ಪ್ರಧಾನಿ ಟೋಬ್ಗೆ ಈ ಸನ್ನಿವೇಶವನ್ನು ಕೊಂಡಾಡಿದ್ದಾರೆ. ಭೂತಾನ್ ನಾಗರಿಕರ ಪರವಾಗಿ ಪ್ರಧಾನಿ ಮೋದಿಯವರನ್ನು ರಾಜ ಆತ್ಮೀಯವಾಗಿ ಬರಮಾಡಿಕೊಂಡ ಸಂದರ್ಭ.
(PTI)(7 / 9)
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್ ನ ಅತ್ಯುನ್ನತ ನಾಗರಿಕ ಗೌರವ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ' ನೀಡಿ ಗೌರವಿಸಲಾಯಿತು. ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ಗಣ್ಯರು ಮತ್ತು ನಾಲ್ಕನೇ ವ್ಯಕ್ತಿಯಾಗಿದ್ದಾರೆ.
(PTI)(8 / 9)
ಎರಡು ದಿನಗಳ ಭೇಟಿಯಲ್ಲಿ, ಭಾರತದ ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಟೊಬ್ಗೆ ದ್ವಿಪಕ್ಷೀಯ ಇಂಧನ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಿದರು. 1200 ಮೆಗಾವ್ಯಾಟ್ ಪುನತ್ಸಂಗ್ಚು-1 ಜಲವಿದ್ಯುತ್ ಯೋಜನೆಯ ಬಗ್ಗೆ ತಜ್ಞರ ಮಟ್ಟದ ಚರ್ಚೆಗಳನ್ನು ಅವರು ಸ್ವಾಗತಿಸಿದರು ಮತ್ತು ಈ ವರ್ಷದ ಕೊನೆಯಲ್ಲಿ 1020 ಮೆಗಾವ್ಯಾಟ್ ಪುನತ್ಸಂಗ್ಚು -2 ಜಲವಿದ್ಯುತ್ ಯೋಜನೆ ಕಾರ್ಯಾರಂಭ ಮಾಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
(PTI)ಇತರ ಗ್ಯಾಲರಿಗಳು