PM Modi in Kolkata: ಕೊಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸವಾರಿ
ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ, ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸವಾರಿ ಮಾಡಿದರು. ಈ ಸಂದರ್ಭದ ಸಚಿತ್ರ ವರದಿ ಇಲ್ಲಿದೆ.
(1 / 8)
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್ 5) ಕೋಲ್ಕತ್ತದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.
(PTI)(2 / 8)
ಕೊಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಸೇರಿದಂತೆ ದೇಶಾದ್ಯಂತ ಅನೇಕ ಮೆಟ್ರೋ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅನಾವರಣಗೊಳಿಸಿದರು. ಅಂಡರ್ ವಾಟರ್ ಮೆಟ್ರೋ ಮಾರ್ಗದ ಒಂದು ನೋಟ ಇದು.
(PTI)(3 / 8)
ಅಂಡರ್ ವಾಟರ್ ಮೆಟ್ರೋ ಸೇವೆ ಉದ್ಘಾಟನಾ ಕಾರ್ಯಕ್ರಮದ ನಂತರ, ಪ್ರಧಾನಿ ಮೋದಿ ಅವರು ಮೋದಿ ಶಾಲಾ ಮಕ್ಕಳೊಂದಿಗೆ ಎಸ್‌ಪ್ಲೇನೆಡ್‌ನಿಂದ ಹೌರಾ ಮೈದಾನ ತನಕ ಪ್ರಯಾಣ ಮಾಡಿದರು.
(Video Screengrab)(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 8)
ಕೋಲ್ಕತ್ತಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್, ಉಪಸ್ಥಿತರಿದ್ದರು.
(PTI)(6 / 8)
ಅಂಡರ್ ವಾಟರ್ ಮೆಟ್ರೋ ಮಾರ್ಗದ ರೈಲು ನಿಲ್ದಾಣದ ಒಂದು ನೋಟ. ಅಂಡರ್ ವಾಟರ್ ಮೆಟ್ರೋ ಮಾರ್ಗದ ಸುರಂಗವು 520 ಮೀಟರ್ ಉದ್ದವಿದ್ದು, ರೈಲು ಅದನ್ನು ದಾಟಲು ಸುಮಾರು 45 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(PTI)(7 / 8)
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀಮತ್ ಸ್ವಾಮಿ ಸ್ಮಾರಕಾನಂದ ಜೀ ಮಹಾರಾಜ್ ಅವರನ್ನು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
(ANI)ಇತರ ಗ್ಯಾಲರಿಗಳು