PM Modi: ಲೇಪಾಕ್ಷಿ ವೀರಭದ್ರ ಮಂದಿರದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಭಕ್ತಿ ಭಾವದ ಚಿತ್ರನೋಟ
PM Modi in Lepakshi Temple: ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಇದಕ್ಕಾಗಿ 11 ದಿನಗಳ ವಿಶೇಷ ವ್ರತಾನುಷ್ಠಾನ ಮಾಡುತ್ತಿರುವ ಪ್ರಧಾನಿ ಮೋದಿ ರಾಮಾಯಣದ ಮಹತ್ವ, ಹಿನ್ನೆಲೆ ಹೊಂದಿರುವ ಲೇಪಾಕ್ಷಿ ದೇವಾಲಯಕ್ಕೆ ಭೇಟಿ ನೀಡಿದರು. ಆ ಕ್ಷಣಗಳ ಚಿತ್ರ ನೋಟ.
(1 / 6)
ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಮಂಗಳವಾರ (ಜ.16) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮೋದಿ ಅವರು ರಾಮಚಂದ್ರ ಪ್ರಭುವನ್ನು ಸ್ತುತಿಸಿದರು, ತೆಲುಗಿನಲ್ಲಿ ಹಾಡಲಾದ ವಿಶೇಷ ಸ್ತೋತ್ರಗಳನ್ನು ಆಲಿಸಿದರು. ಅಷ್ಟೇ ಅಲ್ಲ,ರಾಮಾಯಣ ಮಹಾಕಾವ್ಯದ ತೊಗಲುಗೊಂಬೆಯಾಟವನ್ನೂವೀಕ್ಷಿಸಿದರು.(X/Narendra Modi)
(2 / 6)
ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ರಾಮಾಯಣದಲ್ಲಿ ಲೇಪಾಕ್ಷಿಗೆ ಹೆಚ್ಚಿನ ಮಹತ್ವವಿದೆ. ಇಂದು ವೀರಭದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಗೌರವ ನನಗೆ ಸಿಕ್ಕಿದೆ. ಭಾರತದ ಜನರು ಸಂತೋಷದಿಂದ, ಆರೋಗ್ಯವಾಗಿರಲಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಏರಲಿ ಎಂದು ಪ್ರಾರ್ಥಿಸಿದೆ" ಎಂದು ಬರೆದುಕೊಂಡಿದ್ದಾರೆ.(X/Narendra Modi)
(3 / 6)
ದಂತಕಥೆಯ ಪ್ರಕಾರ, ಸೀತೆಯನ್ನು ಅಪಹರಿಸಿದ ರಾಕ್ಷಸ ರಾಜ ರಾವಣನಿಂದ ಆಕೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಪೌರಾಣಿಕ ರಣಹದ್ದು ಜಟಾಯು ತೀವ್ರವಾಗಿ ಗಾಯಗೊಂಡು ನೆಲಕ್ಕೆ ಉರುಳಿದ ಸ್ಥಳವೇ ಲೇಪಾಕ್ಷಿ ಎಂದು ನಂಬಲಾಗಿದೆ. ಲೇಪಾಕ್ಷಿ ದೇವಾಲಯದ ಸಂಕೀರ್ಣವು ಶಿವ, ವಿಷ್ಣು, ಪಾಪನಾಥೇಶ್ವರ, ರಘುನಾಥ, ರಾಮ ಮತ್ತು ಇತರ ದೇವತೆಗಳ ವಿಗ್ರಹಗಳನ್ನು ಹೊಂದಿದೆ. (X/Narendra Modi)
(4 / 6)
ದೇವಸ್ಥಾನದಲ್ಲಿ ರಾಮಾಯಣದ ತೊಗಲು ಗೊಂಬೆಯಾಟವನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು. ಇದನ್ನು ಅವರು ಎಕ್ಸ್‌ನಲ್ಲಿ ಶೇರ್ ಮಾಡಿದ್ದು, “ಲೇಪಾಕ್ಷಿಯ ವೀರಭದ್ರ ದೇವಸ್ಥಾನದಲ್ಲಿ ರಂಗನಾಥ ರಾಮಾಯಣವನ್ನು ಕೇಳಿದೆ. ಅದೇ ರೀತಿ, ರಾಮಾಯಣದ ತೊಗಲುಗೊಂಬೆಯಾಟವನ್ನೂ ನೋಡಿದೆ” ಎಂದು ಬರೆದುಕೊಂಡಿದ್ದಾರೆ. (X/Narendra Modi)
(5 / 6)
ಲೇಪಾಕ್ಷಿಯ ವೀರಭದ್ರ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಮೋದಿಯವರು ದೇವರ ಸ್ತುತಿಗಳನ್ನು ಆಲಿಸಿದರು. ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡುವ ಕೆಲವು ದಿನಗಳ ಮೊದಲು, ಪ್ರಧಾನಿ ಮೋದಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶ್ರೀ ಕಾಳರಾಮ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಕಾಳರಾಮ ದೇವಾಲಯ ಇರುವಲ್ಲಿ ಭಗವಾನ್ ರಾಮನು ತನ್ನ ವನವಾಸದ ಸಮಯದಲ್ಲಿ ವಾಸಿಸುತ್ತಿದ್ದ ಎಂಬ ಪ್ರತೀತಿ ಇದೆ.(X/Narendra Modi)
(6 / 6)
ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಮುಂಚಿತವಾಗಿ ರಾಮಾಯಣದ ಮಹತ್ವ, ಹಿನ್ನೆಲೆ ಹೊಂದಿದ ದೇವಾಲಯಗಳಿಗೆ ಪ್ರಧಾನಮಂತ್ರಿಯವರ ಭೇಟಿ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಮುನ್ನ ತಾನು 11 ದಿನಗಳ ವಿಶೇಷ ಅನುಷ್ಠಾನವನ್ನು ಕೈಗೊಳ್ಳುವುದಾಗಿ ಪ್ರಧಾನಮಂತ್ರಿ ಈ ಹಿಂದೆ ಹೇಳಿದ್ದರು.(X/Narendra Modi)
ಇತರ ಗ್ಯಾಲರಿಗಳು