PM Modi: ಸಂಸತ್ತಿನ ವಿಶೇಷ ಅಧಿವೇಶನ ಕಿರು ಅವಧಿಯದ್ದೇ ಇರಬಹುದು, ಐತಿಹಾಸಿಕ ನಿರ್ಣಯಗಳಾಗಲಿವೆ : ಪಿಎಂ ಮೋದಿ
ಸಂಸತ್‌ನ ವಿಶೇಷ ಅಧಿವೇಶನ ಕಿರು ಅವಧಿಯದ್ದು. ಆದರೆ ಈ ಅಧಿವೇಶನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಐತಿಹಾಸಿಕ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿರುವಂಥದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅಧಿವೇಶನಕ್ಕೆ ಮೊದಲು ಸುದ್ದಿಗಾರರಿಗೆ ತಿಳಿಸಿದರು.
(1 / 8)
ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಹಳೆಯ ಸಂಸತ್ ಭವನ ಕಟ್ಟಡದಲ್ಲಿ ಇಂದು (ಸೆ.18) ಬೆಳಗ್ಗೆ 11 ಗಂಟೆಗೆ ಶುರುವಾಗಿದೆ. ಅಧಿವೇಶನಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ನಿರ್ಣಯಗಳಾಗಲಿವೆ. ವಿಶೇಷ ಅಧಿವೇಶನದ ಎರಡನೇ ದಿನದಿಂದ ಕಲಾಪ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎಂದು ಹೇಳಿದರು. (PTI)
(2 / 8)
ಭಾರತವನ್ನು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಮುಖ ನಿರ್ಧಾರಗಳನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.(REUTERS)
(3 / 8)
"ಈ ಸಂದರ್ಭದಲ್ಲಿ, ನಾವೆಲ್ಲರೂ ಇಡೀ ದೇಶದಲ್ಲಿ ಉತ್ಸಾಹ ಮತ್ತು ಹೊಸ ಆತ್ಮವಿಶ್ವಾಸದ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಈ ಸನ್ನಿವೇಶದಲ್ಲೇ ಈ ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನವು ಚುಟುಕಾಗಿರುವಂಥದ್ದು. ಆದರೆ ಸಮಯದ ದೃಷ್ಟಿಯಿಂದ ಇದಕ್ಕೆ ತುಂಬಾ ಮಹತ್ವ ಇದೆ. ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಅಧಿವೇಶನ ಇದಾಗಿದೆ. ಈ ಅಧಿವೇಶನದ ವಿಶೇಷತೆ ಎಂದರೆ 75 ವರ್ಷಗಳ ಪ್ರಯಾಣವು ಹೊಸ ಗಮ್ಯಸ್ಥಾನದಿಂದ ಪ್ರಾರಂಭವಾಗುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.(PTI)
(4 / 8)
"ಈಗ, ಹೊಸ ಸ್ಥಳದಲ್ಲಿ ಸಂಸತ್ ಪ್ರಯಾಣವನ್ನು ಮುಂದುವರಿಸುವಾಗ, ನಾವು 2047 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾಗಿದೆ. ಇದಕ್ಕಾಗಿ, ಆ ಕುರಿತಾದ ಎಲ್ಲ ನಿರ್ಧಾರಗಳನ್ನು ಕೂಡ ಹೊಸ ಸಂಸತ್ತಿನ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.(PTI)
(5 / 8)
ಈ ಅಧಿವೇಶನದಲ್ಲಿ ಎಲ್ಲ ಸದಸ್ಯರು ಪರಿಣಾಮಕಾರಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಬೇಕು ಹಳೆಯ ಸಮಸ್ಯೆಗಳನ್ನು ಬಿಟ್ಟು ಹೊಸತನವನ್ನು ಈ ಹೊಸ ಸಂಸತ್ ಭವನಕ್ಕೆ ತರಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಪಿಎಂ ಮೋದಿ ಒತ್ತಾಯಿಸಿದರು, (PTI)
(6 / 8)
"ಒಂದು ಕಿರು ಅಧಿವೇಶನ ಇದು. ಎಲ್ಲ ಗೌರವಾನ್ವಿತ ಸಂಸದರು ಇಲ್ಲಿ ಗರಿಷ್ಠ ಸಮಯವನ್ನು ಉತ್ಸಾಹ ಮತ್ತು ಲವಲವಿಕೆಯೊಂದಿಗೆ ವಿನಿಯೋಗಿಸಬೇಕು" ಎಂದು ಪ್ರಧಾನಿ ಮೋದಿ ಹೇಳಿದರು. "ನಂತರ ಅಳಲು ಸಾಕಷ್ಟು ಸಮಯವಿರುತ್ತದೆ" ಎಂದೂ ಲಘುದಾಟಿಯಲ್ಲಿ ಛೇಡಿಸಿದರು.(PTI)
(7 / 8)
ಕೂಗಾಡಲು ಮುಂದೆಯೂ ಬಹಳ ಸಮಯ ಸಿಗಲಿದೆ. ಅದನ್ನು ಮುಂದುವರಿಸಬೇಕು. ಆದರೆ ಕೆಲವೇ ಕೆಲವು ಸಂದರ್ಭಗಳು ಬದುಕಿನಲ್ಲಿ ಎದುರಾಗುವಂಥವು. ಆ ಸಮಯದಲ್ಲಿ ಉತ್ಸಾಹದಿಂದ, ವಿಶ್ವಾಸದಿಂದ ಕೆಲಸ ಮಾಡಬೇಕು. ಅಂತಹ ಸಂದರ್ಭ ಈ ಕಿರು ಅಧಿವೇಶನ ಎಂದು ಎಲ್ಲರೂ ಅರಿತುಕೊಳ್ಳಬೇಕು ಎಂದು ಬಯಸುತ್ತಿರುವಾಗಿ ಪ್ರಧಾನಿ ಮೋದಿ ಹೇಳಿದರು. (PTI)
(8 / 8)
ನಾಳೆ ಗಣೇಶ ಚತುರ್ಥಿ. ಇದೇ ದಿನ ನಾವು ಹೊಸ ಸಂಸತ್ ಭವನ ಪ್ರವೇಶಿಸುತ್ತಿದ್ದೇವೆ. ಗಣೇಶನನ್ನು 'ವಿಘ್ನನಾಶಕ' ಎಂದೂ ಕರೆಯುತ್ತಾರೆ, ಈಗ ದೇಶದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಅಡೆತಡೆಗಳಿಲ್ಲ... 'ನಿರ್ವಿಘ್ನ ರೂಪ್ ಸೇ ಸಾರೆ ಸಪ್ನೆ ಸಾರೇ 'ಸಂಕಲ್ಪ್ ಭಾರತ್ ಪರಿಪೂರ್ಣ ಕರೇಗಾ'... ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಇದು ವ್ಯಾಪ್ತಿಯಲ್ಲಿ ಐತಿಹಾಸಿಕವಾದುದು ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.(PTI)
ಇತರ ಗ್ಯಾಲರಿಗಳು