Modi Meditation:ವಿವೇಕಾನಂದರಂತೆಯೇ ಉಡುಪು ಧರಿಸಿದ ಪ್ರಧಾನಿ , ಕನ್ಯಾಕುಮಾರಿಯಲ್ಲಿ ಹೇಗಿದೆ ಮೋದಿ ಧ್ಯಾನ photos
- Modi in Kanyakumari ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ತಮಿಳುನಾಡಿನ ಕನ್ಯಾಕುಮಾರಿಗೆ ಆಗಮಿಸಿದ ಪ್ರಧಾನಿ ಮೋದಿ ಶುಕ್ರವಾರ ಬೆಳಿಗ್ಗೆ ಧ್ಯಾನ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಹೀಗೆ ..
- Modi in Kanyakumari ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ತಮಿಳುನಾಡಿನ ಕನ್ಯಾಕುಮಾರಿಗೆ ಆಗಮಿಸಿದ ಪ್ರಧಾನಿ ಮೋದಿ ಶುಕ್ರವಾರ ಬೆಳಿಗ್ಗೆ ಧ್ಯಾನ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಹೀಗೆ ..
(1 / 8)
19 ನೇ ಶತಮಾನದ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತದ ಆಧ್ಯಾತ್ಮಿಕ ಖ್ಯಾತಿಯನ್ನು ಜಗತ್ತಿಗೆ ಕೊಂಡೊಯ್ದರು. ಮಹಾನ್ ಸನ್ಯಾಸಿಯ ಗೌರವಾರ್ಥವಾಗಿ 1970 ರಲ್ಲಿ ಸ್ಮಾರಕವನ್ನು ಕನ್ಯಾಕುಮಾರಿಯಲ್ಲಿ ನಿರ್ಮಿಸಲಾಯಿತು. ಇಲ್ಲಿಯೇ ಮೋದಿ ಅವರು ಧ್ಯಾನಸ್ಥರಾಗಲು ಹೊರಟ ಕ್ಷಣ.
(2 / 8)
ಕೃತಿಯ ಪ್ರಶಾಂತ ಸೌಂದರ್ಯ ಮತ್ತು ಆಧ್ಯಾತ್ಮಿಕ ನಾಯಕನ ಭವ್ಯವಾದ ಉಪಸ್ಥಿತಿಯಿಂದ ಸುತ್ತುವರೆದಿರುವ ಸಮುದ್ರದ ಮಧ್ಯದಲ್ಲಿರುವ ಬಂಡೆಯ ಮೇಲೆ ಧ್ಯಾನ ಮಾಡುವುದು ಹೇಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಿದ್ದರೆ ಖಂಡಿತವಾಗಿಯೂ ಕನ್ಯಾಕುಮಾರಿ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಬೇಕು , ಇದು ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿ ಕರಾವಳಿಯ ಕಲ್ಲಿನ ದ್ವೀಪದಲ್ಲಿ ನಿಂತಿರುವ ಒಂದು ಅದ್ಭುತ ಸ್ಮಾರಕ. ಇಲ್ಲಿಯೇ ಪ್ರಧಾನಿ ಮೋದಿ ಧ್ಯಾನ ಆರಂಭಿಸಿದ್ದಾರೆ.
(3 / 8)
ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಅದನ್ನು ಅಚ್ಚುಕಟ್ಟಾಗಿ ಹಾಗೂ ಜನರ ಗಮನ ಸೆಳೆಯುವ ಹಾಗೆಯೇ ಮಾಡುತ್ತಾರೆ. ಲೋಕಸಭೆ ಚುನಾವಣೆ ಮುಗಿಸಿ ಭಾರತದ ದಕ್ಷಿಣದ ತುದಿಯಲ್ಲಿರುವ ಪ್ರಸಿದ್ದ ಯಾತ್ರಾ ಸ್ಥಳ ಕನ್ಯಾಕುಮಾರಿಯಲ್ಲಿ ಧ್ಯಾನ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಅವರು ಸೂರ್ಯ ದೇವನಿಗೆ ನಮಸ್ಕರಿಸಿದ್ದು ಹೀಗೆ.
(4 / 8)
ಕನ್ಯಾಕುಮಾರಿಯ ವಿವೇಕ ಸ್ಮಾರಕದಲ್ಲಿ ಒಂದು ಸುತ್ತು ಹಾಕಿದ ಪ್ರಧಾನಿ ಮೋದಿ ಅಲ್ಲಿಯೇ ಸೂರ್ಯಾಸ್ತವನ್ನು ಅನುಭವಿಸಿ ಧ್ಯಾನವನ್ನೂ ಆರಂಭಿಸಿದರು.
(5 / 8)
ಅಪ್ಪಟ ಭಾರತದ ವೇಷದಲ್ಲಿಯೇ ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡು ಪ್ರಧಾನಿ ಮೋದಿ ಧ್ಯಾನವನ್ನು ಆರಂಭಿಸಿದ್ದಾರೆ.
(7 / 8)
ಗುರುವಾರವೇ ಕನ್ಯಾಕುಮಾರಿಗೆ ಮೋದಿ ಅವರು ಬಂದು ದೇಗುಲಗಳ ದರ್ಶನ ಮಾಡಿದ್ದರು. ಶುಕ್ರವಾರ ಬೆಳಿಗ್ಗೆಯಿಂದ ಧ್ಯಾನವನ್ನು ಆರಂಭಿಸಿದಾಗ ಕಂಡು ಬಂದದ್ದು ಹೀಗೆ.
ಇತರ ಗ್ಯಾಲರಿಗಳು