Modi: ಸಿಖ್‌ ವೇಷಧಾರಿಯಾದ ಮೋದಿ, ಪಾಟ್ನಾ ಗುರುದ್ವಾರದಲ್ಲಿ ಆಹಾರ ಬಡಿಸಿದ ಪ್ರಧಾನಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi: ಸಿಖ್‌ ವೇಷಧಾರಿಯಾದ ಮೋದಿ, ಪಾಟ್ನಾ ಗುರುದ್ವಾರದಲ್ಲಿ ಆಹಾರ ಬಡಿಸಿದ ಪ್ರಧಾನಿ

Modi: ಸಿಖ್‌ ವೇಷಧಾರಿಯಾದ ಮೋದಿ, ಪಾಟ್ನಾ ಗುರುದ್ವಾರದಲ್ಲಿ ಆಹಾರ ಬಡಿಸಿದ ಪ್ರಧಾನಿ

  • Modi in Patna Gurudwara ಪ್ರಧಾನಿ ನರೇಂದ್ರ ಮೋದಿ ಯಾವುದೇ ಊರಿಗೆ ಹೋದರೆ ಅಲ್ಲಿನ ಮಂದಿರ, ದೈವ ಸ್ಥಳಕ್ಕೆ ಭೇಟಿ ಮಾಡುತ್ತಾರೆ. ಈ ಬಾರಿ ಬಿಹಾರದ ಪಾಟ್ನಾದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿ ಅಪ್ಪಟ ಸಿಖ್‌ ಆಗಿದ್ದರು. ಅವರ ಗುರುದ್ವಾರ ಭೇಟಿ, ಸೇವೆಯ ಚಿತ್ರಣ ಹೀಗಿತ್ತು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾದಲ್ಲಿರುವ ಪ್ರಸಿದ್ದ ಗುರುದ್ವಾರಕ್ಕೆ ಭೇಟಿ ನೀಡಿದರು.
icon

(1 / 8)

ಅಪ್ಪಟ ಸಿಖ್‌ ರೀತಿಯಲ್ಲಿಯೇ ತಲೆಗೆ ಟರ್ಬನ್‌ ಧರಿಸಿ ಗುರುದ್ವಾರ ಪ್ರವೇಶಿಸಿದ ಮೋದಿ ಅವರು ಅಲ್ಲಿನ ಧರ್ಮಗುರುಗಳಿಗೆ ಉಡುಗೊರೆಯನ್ನು ನೀಡಿದರು,
icon

(2 / 8)

ಗುರುದ್ವಾರದ ಸಂಪ್ರದಾಯದಂತೆ ಅಲ್ಲಿಗೆ ತೆರಳಿ ವಿಶೇಷ ಪೂಜೆಯನ್ನು ಮೋದಿ ಸಲ್ಲಿಸಿದರು. ಸಿಖ್‌ ಧರ್ಮ ಸಮಾನತೆ, ಸಹಿಷ್ಣುತೆ ಹಾಗೂ ಶಾಂತಿ ಸಾರಿದ ಧರ್ಮ. ಅಂತಹ ಧರ್ಮದ ಕ್ಷೇತ್ರಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ಮೋದಿ ಹೇಳಿದರು.
icon

(3 / 8)

ಪಾಟ್ನಾ ಸಾಹಿಬ್‌ನ ತಖತ್‌ಶ್ರೀ ಹರಿಮಂದಿರ್‌ಜಿ( Takhat Sri Harimandir Ji Patna Sahib)ನಲ್ಲಿ ಕೆಲ ಹೊತ್ತು ಕಳೆದ ಮೋದಿ ಈ ತಾಣವೂ ಗುರು ಗೋವಿಂದಸಿಂಗ್‌ ಅವರು ಭೇಟಿ ನೀಡಿದ ಸ್ಥಳ. ಇಲ್ಲಿಗೆ ಬಂದಿರುವುದು ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
icon

(4 / 8)

ಇದಾದ ಬಳಿಕ ಗುರುದ್ವಾರದಲ್ಲಿ ಚಪಾತಿ ,ಲಟ್ಟಿಸುವ ಮೂಲಕ ಸೇವೆಯಲ್ಲೂ ಪ್ರಧಾನಿ ಮೋದಿ ಭಾಗಿಯಾದರು.
icon

(5 / 8)

ಪಾಟ್ನಾ ಗುರುದ್ವಾರದ ಅಡುಗೆ ಮನೆಯಲ್ಲಿ ಅಡುಗೆ ತಯಾರಿಸುವ ಸೇವೆಯಲ್ಲೂ ಭಾಗಿಯಾದ ಮೋದಿ ಜನರ ಸೇವೆಯೇ ಪರಮಧ್ಯೇಯ ಎಂದು ನಂಬಿರುವ ಸಿಖ್‌ ಧರ್ಮದಲ್ಲಿ ಸೇವೆ ಮಾಡಿದ್ದು ಸಂತಸದಾಯಕ ಎಂದು ಹೇಳಿಕೊಂಡಿದ್ದಾರೆ.
icon

(6 / 8)

ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ತಾವೇ ಖುದ್ದು ಊಟವನ್ನು ಬಡಿಸಿದ ಪ್ರಧಾನಿ ಮೋದಿ ಸೇವೆಯಲ್ಲಿ ಖುಷಿಯಿದೆ ಎಂದು ಹೇಳಿದ್ದಾರೆ.
icon

(7 / 8)

ಸಿಖ್‌ ಧರ್ಮದ ಗುರುಗಳು,. ಸಮುದಾಯದ ಪ್ರತಿನಿಧಿಗಳಿಗೆ ಮೋದಿ ಅವರೇ ಊಟವನ್ನು ಬಡಿಸಿದರು. ಸೇವೆಯಲ್ಲಿ ಭಾಗಿಯಾದ ಕ್ಷಣವೇ ವಿಶೇಷವಾಗಿತ್ತು ಎಂದು ಮೋದಿ ಖುಷಿ ಹಂಚಿಕೊಂಡಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು