ನರೇಂದ್ರ ಮೋದಿ ಸಂಬಳ ಎಷ್ಟು; ಭಾರತದ ಪ್ರಧಾನಿಗೆ ಸಿಗುವ ಸವಲತ್ತುಗಳು, ಮನೆ, ವಿಮಾನ ಹಾಗೂ ಭದ್ರತೆ ವಿವರ
- Narendra Modi: ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 9ರಂದು ದೆಹಲಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಅಧಿಕಾರಕ್ಕೇರಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಮತ್ತು 30 ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
- Narendra Modi: ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 9ರಂದು ದೆಹಲಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಅಧಿಕಾರಕ್ಕೇರಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಮತ್ತು 30 ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
(1 / 5)
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ, ಜವಾಹರಲಾಲ್ ನೆಹರೂ ನಂತರ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗಿದ್ದರೆ, ಭಾರತದ ಪ್ರಧಾನಿಗೆ ಎಷ್ಟು ಸಂಬಳವಿರುತ್ತದೆ? ಸರ್ಕಾರದಿಂದ ಅವರಿಗೆ ಸಿಗುವ ಸವಲತ್ತುಗಳೇನು ಎಂಬ ಕುತೂಹಲ ನಿಮಗಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
(2 / 5)
ನರೇಂದ್ರ ಮೋದಿ ಸಂಬಳ: ಭಾರತದ ಪ್ರಧಾನ ಮಂತ್ರಿಯು ಭಾರತ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಪ್ರಸ್ತುತ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಪ್ರತಿ ತಿಂಗಳಿಗೆ 1.66 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದರಲ್ಲಿ ಸಂಸದೀಯ ಭತ್ಯೆ 45000 ರೂ., ವೆಚ್ಚ ಭತ್ಯೆ 3000ರೂ., ದಿನಭತ್ಯೆ 2000 ರೂ. ಮತ್ತು ಮೂಲ ವೇತನ 50000 ರೂಪಾಯಿ ಸೇರಿದೆ.
(AFP)(3 / 5)
ಪ್ರಧಾನಿ ಮಂತ್ರಿಯ ಭದ್ರತೆ: ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ರಕ್ಷಣಾ ಗುಂಪು (Special Protection Group) ಭದ್ರತೆಗೆ ಅರ್ಹರಾಗಿದ್ದಾರೆ. ಇದು ಪ್ರಧಾನಿಯ ರಕ್ಷಣೆಗಾಗಿಯೇ ಮೀಸಲಾಗಿರುವ ಘಟಕವಾಗಿದೆ. SPG ಅಧಿಕಾರಿಗಳು ಅತ್ಯುನ್ನತ ಮಟ್ಟದ ತರಬೇತಿ ಪಡೆದಿರುತ್ತಾರೆ. ಉನ್ನತ ನಾಯಕತ್ವದ ಗುಣಗಳು, ವೃತ್ತಿಪರತೆ ಮತ್ತು ಭದ್ರತೆಯ ಜ್ಞಾನ ಇವರಿಗಿರಬೇಕು.
(HT_PRINT)(4 / 5)
ವಸತಿ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪಡೆಯುವ ದೊಡ್ಡ ಸವಲತ್ತುಗಳಲ್ಲಿ ವಸತಿ ಪ್ರಮುಖವಾದ್ದು. ಭಾರತದ ಪ್ರಧಾನ ಮಂತ್ರಿ ರಾಷ್ಟ್ರ ರಾಜಧಾನಿ ದೆಹಲಿಯ 7- ಲೋಕ ಕಲ್ಯಾಣ ಮಾರ್ಗದಲ್ಲಿ ವಾಸಿಸುತ್ತಿದ್ದಾರೆ. ಇದು ರಾಷ್ಟ್ರ ರಾಜಧಾನಿಯ ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ. ಈ ಮನೆಗೆ ಬಾಡಿಗೆಯಾಗಲಿ ಅಥವಾ ನಿರ್ವಹಣೆ ವೆಚ್ಚವಾಗಲಿ ಪ್ರಧಾನಿ ಭರಿಸಬೇಕಿಲ್ಲ.
(HT_PRINT)(5 / 5)
ವಿಶೇಷ ವಿಮಾನ ಮತ್ತು ಇತರ ಪ್ರಯೋಜನಗಳು: ಪ್ರಧಾನಮಂತ್ರಿ ಮೋದಿ ಅವರಿಗೆ ತಮ್ಮ ವೃತ್ತಿಪರ ಪ್ರವಾಸ ಹಾಗೂ ಭೇಟಿಗಳಿಗಾಗಿ ಏರ್ ಇಂಡಿಯಾ ಒನ್ ಎಂಬ ವಿಶೇಷ ವಿಮಾನವಿದೆ. ವಿದೇಶಗಳಿಗೆ ಭೇಟಿ ನೀಡಿದಾಗ ಇವರು ಇದೇ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ವಾಯುಸೇನೆ ನಿರ್ವಹಿಸುವ ಏರ್ ಇಂಡಿಯಾ ವಿಮಾನದಲ್ಲಿ ಸ್ವಯಂ-ರಕ್ಷಣಾ ಸೂಟ್‌ಗಳಿವೆ. ಇದರೊಂದಿಗೆ ಕಾನ್ಫರೆನ್ಸ್ ಕ್ಯಾಬಿನ್ ಸಹಿತ ಪೂರ್ಣ ಪ್ರಮಾಣದ ಕಚೇರಿ ಸ್ಥಳವನ್ನು ಹೊಂದಿವೆ. ಇಲ್ಲಿ ಪ್ರಯಾಣದ ವೇಳೆ ಸಭೆಗಳನ್ನು ನಡೆಸುವ ಅವಕಾಶವಿದೆ.
ಇತರ ಗ್ಯಾಲರಿಗಳು