ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ; ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳ ಅಬ್ಬರ-ಚಿತ್ರನೋಟ
ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಎದ್ದಿದ್ದು, ಇಂದು ತಡರಾತ್ರಿ ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಕಡೆಗೆ ಮುನ್ನುಗ್ಗಲಿದೆ. ಹೀಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಎದ್ದಿರುವ ಕಾರಣ ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 9)
ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತದ ಪರಿಚಲನೆ ಇರುವ ಕಾರಣ, ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಜಿಲ್ಲಾಡಳಿತವೂ ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದು, ಭಾನುವಾರ ಸೋಮೇಶ್ವರ ಬೀಚ್ ಹೀಗಿತ್ತು.(PTI)
(2 / 9)
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಳೆತ್ತರದ ಅಲೆಗಳ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ.(PTI)
(3 / 9)
ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಭಾನುವಾರ ಪ್ರವಾಸಿಗರು ಎಂದಿನಂತೆಯೇ ಇದ್ದರೂ, ಸಮುದ್ರಕ್ಕೆ ಇಳಿಯದಂತೆ ಸ್ಥಳೀಯರು ಎಚ್ಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.(PTI)
(4 / 9)
ರೆಮಲ್ ಚಂಡಮಾರುತದ ಪರಿಣಾಮ ಭಾನುವಾರ ತಡರಾತ್ರಿ ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರಾದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.(HT_PRINT)
(5 / 9)
ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ಧಾಣದಲ್ಲಿ ರೈಲು ಬೋಗಿಗಳನ್ನು ಹಳಿಗೆ ಚೇನ್ ಬಿಗಿದು ಬೀಗ ಜಡಿಯುವ ಕೆಲಸ ಮಾಡಲಾಗಿತ್ತು. ಚಂಡಮಾರುತದ ಪರಿಣಾಮ ರೈಲು ಬೋಗಿಗಳು ಉರುಳಿಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಮಾಡಲಾಗಿದೆ.(PTI)
(6 / 9)
ರೆಮಲ್ ಚಂಡಮಾರುತದ ಕಾರಣ ಮೇ 26ರ ಅಂದರೆ ಇಂದು ಮಧ್ಯಾಹ್ನ 12 ರಿಂದ ಮೇ 27ರ ಬೆಳಗ್ಗೆ 9 ಗಂಟೆ ತನಕ ಕಾರ್ಯಾಚರಣೆ ಸ್ಥಗಿತಗೊಳಿಸಿದ ಕೋಲ್ಕತ ವಿಮಾನ ನಿಲ್ದಾಣದ ಒಂದು ನೋಟ.(Photo by Samir Jana/ Hindustan Times)
(7 / 9)
ಕೋಲ್ಕತದ ರಸ್ತೆಯೊಂದರಲ್ಲಿ ಸೈಕಲ್ ರಿಕ್ಷಾದಲ್ಲಿ ಊರಿಗೆ ಮರಳುತ್ತಿರುವ ಜನ.(Photo by Samir Jana/ Hindustan Times)
(8 / 9)
ರೆಮಲ್ ಚಂಡಮಾರುತ ಅಪ್ಪಳಿಸುವ ಮುನ್ನ ಹೂಗ್ಲಿ ನದಿಯಲ್ಲಿರುವ ಬೋಟ್‌ಗಳನ್ನು ಹಾರಿಹೋಗದಂತೆ ಕಟ್ಟಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.(Photo by Samir Jana/ Hindustan Times)
ಇತರ ಗ್ಯಾಲರಿಗಳು