ಸಂಸತ್ ಭವನಕ್ಕೆ ನುಗ್ಗಿದವರ ಬಳಿ ಬಂದೂಕು ಇದ್ದಿದ್ದರೆ; ಭದ್ರತಾ ವೈಫಲ್ಯದ ಬಗ್ಗೆ ಜನರು ಕೇಳುತ್ತಿರುವ 9 ಪ್ರಶ್ನೆಗಳಿವು
- ದೆಹಲಿಯ ನೂತನ ಸಂಸತ್ ಭವನದಲ್ಲಿ ಇಂದು (ಡಿ.13) ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ಸಂಸದರು ಕೂರುವ ಜಾಗಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ. ಇಬ್ಬರು ವ್ಯಕ್ತಿಗಳು ಸದನಕ್ಕೆ ನುಗ್ಗುವ ಪ್ರಯತ್ನ ಮಾಡಿದ್ದು, ಈ ಘಟನೆಯು ಇದೀಗ ಸಂಸತ್ ಭವನದ ಭದ್ರತೆಯ ಬಗ್ಗೆ ಜನರಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡಿದೆ.
- ದೆಹಲಿಯ ನೂತನ ಸಂಸತ್ ಭವನದಲ್ಲಿ ಇಂದು (ಡಿ.13) ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ಸಂಸದರು ಕೂರುವ ಜಾಗಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ. ಇಬ್ಬರು ವ್ಯಕ್ತಿಗಳು ಸದನಕ್ಕೆ ನುಗ್ಗುವ ಪ್ರಯತ್ನ ಮಾಡಿದ್ದು, ಈ ಘಟನೆಯು ಇದೀಗ ಸಂಸತ್ ಭವನದ ಭದ್ರತೆಯ ಬಗ್ಗೆ ಜನರಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡಿದೆ.
(1 / 10)
ದೆಹಲಿಯಲ್ಲಿರುವ ನೂತನ ಸಂಸತ್ ಭವನ ಕಟ್ಟಡದಲ್ಲಿ ಬುಧವಾರ (ಡಿ 13) ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕೂರುವ ಸ್ಥಳದ ಕಡೆಗೆ ಧುಮುಕಿದ ವಿಚಾರ ಈಗ ವಿಶ್ವಮಟ್ಟದ ಸುದ್ದಿಯಾಗಿದೆ. ಈತನನ್ನು ಸಾಗರ್ ಶರ್ಮಾ ಎಂದು ಗುರುತಿಸಲಾಗಿದ್ದು, ಮೈಸೂರಿನ ಪ್ರತಾಪ್ ಸಿಂಹ ಇವರ ವೀಕ್ಷಕರ ಅನುಮತಿ ಪತ್ರಕ್ಕೆ (ವಿಸಿಟರ್ ಪಾಸ್) ಸಹಿ ಹಾಕಿದ್ದರು ಎಂದು ಇಂಡಿಯಾ ಟುಡೇ ಸೇರಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಬ್ಬ ಮಹಿಳೆಯನ್ನು ನೀಲಂ ಕೌರ್ ಎಂದು ಗುರುತಿಸಲಾಗಿದೆ. ಈಕೆಯ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆಯು ದೇಶದ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜನರ ನಡುವೆ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರಗಳಿವು.
(2 / 10)
1) ಪ್ರೇಕ್ಷಕರ ಗ್ಯಾಲರಿಯಿಂದ ಸಂಸತ್ ಸದಸ್ಯರ ಬಳಿಗೆ ಧುಮುಕಿದವರ ಬಳಿ ಹಳದಿ ಬಣ್ಣದ ಅನಿಲ ಸಿಂಪಡಿಸುವ ಸಿಲಿಂಡರ್ ಇತ್ತು. ಅದನ್ನು ಅವರು ಬಳಸಿದರು. ಒಂದು ವೇಳೆ ಅವರ ಬಳಿ ಆತಂಕಕಾರಿ ಅನಿಲ ಇದ್ದಿದ್ದರೆ ಅನಾಹುತವೇ ಆಗುತ್ತಿತ್ತಲ್ಲವೇ?
(3 / 10)
2) ಕಳೆದ 2001ರಲ್ಲಿ ಭಯೋತ್ಪಾದಕರು ಹೊರಗಿನಿಂದ ದಾಳಿ ಮಾಡಿದ್ದರು. ಅವರನ್ನು ತಡೆಯುವ ಹೋರಾಟದಲ್ಲಿ ಹಲವು ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಬಾರಿ ಸಂಸತ್ ಭವನದ ಒಳಗೇ ದಾಳಿ ನಡೆದಿದೆ. ಇವರ ಬಳಿ ಆಯುಧಗಳು ಇದ್ದಿದ್ದರೆ ಅನಾಹುತವೇ ಆಗುತ್ತಿತ್ತಲ್ಲವೇ?
(4 / 10)
3) ರಾಜ್ಯಗಳಲ್ಲಿರುವ ವಿಧಾನಸಭೆಗಳಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿಯೇ ಹಲವು ಹಂತಗಳಲ್ಲಿ ತಪಾಸಣೆ ನಡೆಯುತ್ತವೆ. ಹೀಗಿರುವ ಲೋಕಸಭೆ ಕಟ್ಟಡಕ್ಕೆ ಪ್ರವೇಶಿಸುವಾಗ ತಪಾಸಣೆ ನಡೆಯುವುದಿಲ್ಲವೇ?
(5 / 10)
4) ಇಂಥ ಘಟನೆ ನಡೆಯಬಹುದು ಎಂಬ ಮಾಹಿತಿಯನ್ನು ಗುಪ್ತಚರ ಸಿಬ್ಬಂದಿ ಕಲೆಹಾಕಿರಲಿಲ್ಲವೇ? ಈ ಮಟ್ಟದ ಭದ್ರತಾ ವೈಫಲ್ಯ ಸಂಭವಿಸಿದ್ದು ಹೇಗೆ? ಇದು ಹಲವು ಹಂತಗಳಲ್ಲಿ ಭದ್ರತಾ ಲೋಪ ಇರುವ ನಿದರ್ಶನ ಅಲ್ಲವೇ?
(6 / 10)
5) ಒಳಪ್ರವೇಶಿಸಿದವರು ಅನಿಲ ಇದ್ದ ಸಿಲಿಂಡರ್ ಕೊಂಡೊಯ್ಯಲು ಹೇಗೆ ಸಾಧ್ಯವಾಯಿತು? ಅವರ ಬ್ಯಾಗ್‌ಗಳನ್ನು ಸ್ಕ್ಯಾನರ್ ಯಂತ್ರದ ಮೂಲಕ ತಪಾಸಣೆ ಮಾಡಿರಲಿಲ್ಲವೇ? ದೈಹಿಕವಾಗಿ ಅವರ ಬಳಿ ಏನಿರಬಹುದು ಎಂದು ತಿಳಿಯಲು ಫ್ರಿಸ್ಕಿಂಗ್ (ಮುಟ್ಟಿ ನೋಡುವುದು) ಮಾಡಿರಲಿಲ್ಲವೇ?
(7 / 10)
6) ಹೊಸ ಸಂಸತ್ ಭವನದಕ್ಕೆ ಹೊಸ ರೀತಿಯ ಭದ್ರತಾ ಶಿಷ್ಟಾಚಾರ ಅಳವಡಿಸಲಾಗಿದೆ. ಈ ಹೊಸ ಶಿಷ್ಟಾಚಾರಗಳಿಗೆ ಭದ್ರತಾ ಸಿಬ್ಬಂದಿ ಇನ್ನೂ ಒಗ್ಗಿಕೊಂಡಿಲ್ಲವೇ? ಆಗಂತುಕರು ಈ ಲೋಪದ ಲಾಭ ಪಡೆದರೆ?
(8 / 10)
7) ದೆಹಲಿ ಪೊಲೀಸರ ಹಲವು ತುಕಡಿಗಳನ್ನೇ ಸಂಸತ್ ಭವನದ ಬಳಿ ನಿಯೋಜಿಸಲಾಗಿದೆ. ಹೊರಗಿನಿಂದ ಕಣ್ಣಿಗೆ ಕಾಣುವಂತೆ ದಾಳಿ ನಡೆದರೆ ಇವರು ತಡೆಯಬಲ್ಲರು. ಆದರೆ ಒಳಗಿನವರೇ ದಾಳಿ ನಡೆಸಬಹುದೆಂದು ಈ ಘಟನೆ ಎತ್ತಿ ತೋರಿಸಿದೆಯೇ?
(9 / 10)
8) ಇಂದಿಗೆ ಸರಿಯಾಗಿ 22 ವರ್ಷಗಳ ಹಿಂದೆ (ಡಿ 13, 2001) ಸಂಸತ್ ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಸಂಸತ್ ದಾಳಿಯ ವರ್ಷಾಚರಣೆ ಇರುವ ದಿನದಂದು ಏನಾದರೂ ಅನಾಹುತ ನಡೆಯಬಹುದು ಎಂಬ ಎಚ್ಚರಿಕೆಯನ್ನು ಭದ್ರತಾ ಸಿಬ್ಬಂದಿ ಕಡೆಗಣಿಸಿದರೇ?
ಇತರ ಗ್ಯಾಲರಿಗಳು