ನೆರೆಯ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ; ಮುಂದುವರಿದ ಧಾರಾಕಾರ ಮಳೆ; ಫೋಟೊಸ್
- ಸಾಮಾನ್ಯಕ್ಕಿಂತ 2 ದಿನ ಮುಂಚಿತವಾಗಿ ನೈರುತ್ಯ ಮುಂಗಾರು ಕೇರಳ ಕರಾವಳಿ ಮತ್ತು ಈಶಾನ್ಯ ಭಾರತಕ್ಕೆ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರ ಫೋಟೊಸ್ ಇಲ್ಲಿವೆ.
- ಸಾಮಾನ್ಯಕ್ಕಿಂತ 2 ದಿನ ಮುಂಚಿತವಾಗಿ ನೈರುತ್ಯ ಮುಂಗಾರು ಕೇರಳ ಕರಾವಳಿ ಮತ್ತು ಈಶಾನ್ಯ ಭಾರತಕ್ಕೆ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರ ಫೋಟೊಸ್ ಇಲ್ಲಿವೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 6)
ನೆರೆಯ ಕೇರಳದಲ್ಲಿ ಸಾಮಾನ್ಯಕ್ಕಿಂತ ಎರಡು ದಿನಗಳ ಮೊದಲೇ ನೈರುತ್ಯ ಮುಂಗಾರು ಪ್ರವೇಶವಾಗಿದ್ದು, ಭಾರಿ ಮಳೆಯಾಗುತ್ತಿದೆ. ಮೇ 29ರ ಬುಧವಾರ ಭಾರಿ ಮಳೆಯಿಂದಾಗಿ ಕೇರಳದ ಕೆಲವೊಂದು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಪ್ರದೇಶದಿಂದ ವೃದ್ಧೆಯೊಬ್ಬರನ್ನು ಕೇರಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ ಬುಧವಾರ ಸ್ಥಳಾಂತರಿಸಿದ್ದಾರೆ. (PTI)
(2 / 6)
ಮೇ 29ರ ಬುಧವಾರ ಕೊಚ್ಚಿಯಲ್ಲಿ ಮಳೆಯಾಗಿದೆ. ಪಾದಚಾರಿಗಳು ಛತ್ರಿಗಳನ್ನು ಬಳಸುತ್ತಿರುವ ದೃಶ್ಯಗಳು ಕಂಡು ಬಂದವು. ಕೊಚ್ಚಿ, ನೆರೆಯ ಪ್ರದೇಶಗಳಾದ ಕಲಮಸ್ಸೆರಿ ಮತ್ತು ಕಕ್ಕನಾಡ್‌ನಲ್ಲಿ ಹಿಂದಿನ ದಿನ ತೀವ್ರ ಮಳೆಯಾಗಿದ್ದು, ವ್ಯಾಪಕ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ.(PTI)
(3 / 6)
ಕೊಚ್ಚಿಯಲ್ಲಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಕೊಚ್ಚಿ ಮತ್ತು ಅದರ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. (PTI)
(4 / 6)
ಕೇರಳದ ತಿರುವನಂತಪುರಂನಲ್ಲಿ ಮಂಗಳವಾರ ನಡೆದ ವಿಶೇಷ ಸಶಸ್ತ್ರ ಪೊಲೀಸ್ (ಎಸ್ಎಪಿ) ಮತ್ತು ಕೇರಳ ಸಶಸ್ತ್ರ ಪೊಲೀಸ್ (ಕೆಎಪಿ) ಪಾಸಿಂಗ್ ಔಟ್ ಪೆರೇಡ್ ನಡೆಯಿತು. ಮಳೆಯ ನಡುವೆಯೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ್ದಾರೆ.(PTI)
(5 / 6)
ಕೊಚ್ಚಿಯ ಹಿನ್ನೀರಿನ ಸಮೀಪ ಬುಧವಾರ (ಮೇ 29) ವ್ಯಕ್ತಿಯೊಬ್ಬರು ಮಳೆಯಿಂದಾಗಿ ಕೊಡೆಯನ್ನು ಹಿಡಿದು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಟ್ಟಾಯಂ ಹಾಗೂ ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣ ಮಾಡಲಾಗಿದೆ.
ಇತರ ಗ್ಯಾಲರಿಗಳು