Ooty Weather: ಊಟಿಯಲ್ಲಿ ಭಾರೀ ಚಳಿ, ತಿಂಗಳಿನಿಂದ 2 ಡಿಗ್ರಿ ಸೆಲ್ಸಿಯಸ್ ಕೂಲ್ ಕೂಲ್; ಹೀಗಿದೆ ಚಿತ್ರಣ Photos
- Coldest Ooty ಊಟಿಯನ್ನು ದಕ್ಷಿಣ ಕಾಶ್ಮೀಯ ಎನ್ನುತ್ತಾರೆ. ಸತತ ಒಂದು ತಿಂಗಳಿನಿಂದ ಇದೇ ನಿಜವಾದ ಕಾಶ್ಮೀರ ಆಗಿದೆ. ಏಕೆಂದರೆ ಇಲ್ಲಿನ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಊಟಿನಲ್ಲೂ ಸಾಕಷ್ಟು ವ್ಯತ್ಯಾಸಗಳು ಆಗುತ್ತಿವೆ. ಊಟಿನಲ್ಲಿ ದಾಖಲಾಗಿರುವ ಚಳಿಯ ಚಿತ್ರ ನೋಟ ಇಲ್ಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 6)
ಊಟಿಯಲ್ಲಿ ಬೆಳಗಿನ ವಿಹಾರ ಹೋದರೆ ನಿಮಗೆ ದಟ್ಟ ಚಳಿಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಊಟಿನಲ್ಲಿ ಚಳಿ ಇದ್ದರೂ ಕನಿಷ್ಠ ಪ್ರಮಾಣ ಇಷ್ಟು ಕುಸಿದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
(2 / 6)
ಊಟಿಗೆ ಬರುವ ಪ್ರವಾಸಿಗರ ವಾಹನದ ಮೇಲೆ ಹಿಮ ಬೀಳುತ್ತಿದೆ. ಕಾಶ್ಮೀರದಲ್ಲ ಕಾಣಸಿಗುವ ಚಿತ್ರಣ ಈಗ ಊಟಿಯಲ್ಲೂ ನೋಡಬಹುದು
(3 / 6)
ಊಟಿಗೆ ಬರುವ ಎಲ್ಲಾ ಮಾರ್ಗಗಳಲ್ಲೂ ಹಿಮವೋ ಹಿಮ. ಮಾರ್ಗ ಮಧ್ಯೆದಲ್ಲಿ ಮುಗಿಲೆತ್ತರಕ್ಕೆ ನಿಂತ ಮರಗಳ ನಡುವೆಯೇ ಹಿಮಚ್ಛಾದಿತ ವಾತಾವರಣ ಒಂದು ತಿಂಗಳಿನಿಂದ ಕಂಡು ಬರುತ್ತಿದೆ.(Kiran Parekh)
(4 / 6)
ಇದು ಊಟಿಯ ಮುಂಜಾವು. ಬೆಳಿಗ್ಗೆಯೇ ಇಲ್ಲಿನ ರಸ್ತೆಗಳು ಚಳಿಯಿಂದ ತುಂಬಿರುತ್ತವೆ. ಹಿಮವೂ ಬಿದ್ದು ರಸ್ತೆ ಸಂಚಾರವೂ ಕೊಂಚ ಕಷ್ಟವೇ, ಸೂರ್ಯನಿಗೂ ಚಳಿಯ ಸನ್ನಿವೇಶ. ಮಧ್ಯಾಹ್ನದ ಹೊತ್ತಿಗೆ ಅಲ್ಪಸ್ವಲ್ಪ ಬಿಸಿಲು ಕಾಣುವ ಸ್ಥಿತಿ.
(5 / 6)
ಊಟಿಯಲ್ಲಿ ಬಿಸಿಲು ಕಾಣಬೇಕು ಎಂದರೆ ಅದು ಮಧ್ಯಾಹ್ನವೇ ಆಗಬೇಕು. ಅಲ್ಲಿವರೆಗೂ ಎಲ್ಲೆಲ್ಲೂ ಚಳಿಯ ವಾತಾವರಣ. ಊಟಿಯ ಮನೆಯೊಂದರ ಸುತ್ತ ಮಧ್ಯಾಹ್ನ ಕಂಡು ಬಂದ ಕೊಂಚ ಬಿಸಿಲಿನ ಸನ್ನಿವೇಶ.
ಇತರ ಗ್ಯಾಲರಿಗಳು