ವಿದೇಶಿ ಮಾಧ್ಯಮಗಳಿಗೆ ಆಪರೇಷನ್ ಸಿಂಧೂರ ಹೇಗೆ ಕಾಣಿಸ್ತು? ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ, ಪಹಲ್ಗಾಮ್‌ಗೆ ಪ್ರತೀಕಾರ
ಭಾರತವು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಿಗೆ ರಾತ್ರೋರಾತ್ರಿ ದಾಳಿ ನಡೆಸಿದೆ. ಸೇನಾ ಡ್ರಿಲ್‌ನ ಸುದ್ದಿಗೆ ಕಾಯುತ್ತಿದ್ದ ಜಗತ್ತಿಗೆ ಅಚ್ಚರಿಯಾಗುವಂತೆ ಭಾರತ ಆಪರೇಷನ್ ಸಿಂಧೂರ ನಡೆಸಿದೆ. ಭಾರತದ ಈ ನಡೆಯನ್ನು, ಈ ಸುದ್ದಿಯನ್ನು ಜಗತ್ತಿನ ವಿವಿಧ ಮಾಧ್ಯಮಗಳು ಹೇಗೆ ವರದಿ ಮಾಡಿವೆ ಎಂದು ನೋಡೋಣ.
(1 / 9)
ಭಾರತವು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಿಗೆ ರಾತ್ರೋರಾತ್ರಿ ದಾಳಿ ನಡೆಸಿದೆ. ಈ ಸುದ್ದಿಯನ್ನು ಪಾಕಿಸ್ತಾನ, ಅಮೆರಿಕ, ಇಂಗ್ಲೆಂಡ್, ಸ್ಪೇನ್ ಸೇರಿದಂತೆ ವಿವಿಧ ದೇಶಗಳ ಮಾಧ್ಯಮಗಳು ಹೇಗೆ ವರದಿ ಮಾಡಿವೆ ನೋಡೋಣ.
(2 / 9)
ದಿ ವಾಷಿಂಗ್ಟನ್ ಪೋಸ್ಟ್: ಕಾಶ್ಮೀರ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟೈಕ್ ನಡೆಸಿದೆ. ಇದರಿಂದ ಯುದ್ಧದ ಭೀತಿ ಉಂಟಾಗಿದೆ.
(4 / 9)
ದಿ ಗಾರ್ಡಿಯನ್: ಭಾರತದ ಕ್ಷಿಪಣಿ ದಾಳಿಯಿಂದ 26 ಜನರು ಮೃತಪಟ್ಟಿದ್ದಾರೆ. ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿರುವುದಾಗಿ ಪಾಕಿಸ್ತಾನ ತಿಳಿಸಿದೆ.
(5 / 9)
ಲೆ ಮೊಂಡೆ(ಫ್ರಾನ್ಸ್): ಪಾಕಿಸ್ತಾನದ ಮೇಲೆ ಭಾರತ ದಾಳಿ, ಬಾಂಬ್ ದಾಳಿಯ ಬಳಿಕ ವಿಶ್ವ ರಾಜತಾಂತ್ರಿಕರು ಸಂಯಮಕ್ಕೆ ಕರೆ ನೀಡುತ್ತಿದ್ದಾರೆ.
(6 / 9)
ದಿ ಡೌನ್: ತಡ ರಾತ್ರಿಯ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನವು 5 ಭಾರತೀಯ ಜೆಟ್‌ಗಳನ್ನು ಹೊಡೆದು ಉರುಳಿಸಿದೆ- ಅಧಿಕಾರಿಗಳ ಹೇಳಿಕೆ ಎಂದು ಪಾಕಿಸ್ತಾನದ ದಿ ಡೌನ್ ವರದಿ ಮಾಡಿದೆ.
(7 / 9)
ದಿ ಟೈಮ್ಸ್ (ಯುಕೆ): ಭಾರತದ ದಾಳಿಯನ್ನು ಪಾಕಿಸ್ತಾನವು ಯುದ್ಧದ ಪ್ರಯತ್ನ ಎಂದು ವ್ಯಾಖ್ಯಾನಿಸಿದೆ. ಭಾರತ- ಪಾಕಿಸ್ತಾನದ ಯುದ್ಧದ ಆತಂಕವನ್ನು ಸರಿಪಡಿಸಲು ಟ್ರಂಪ್ ನೆರವಾಗುತ್ತಾರೆಯೇ?
ಇತರ ಗ್ಯಾಲರಿಗಳು