India's Largest Dam near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India's Largest Dam Near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ

India's Largest Dam near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ

  • India's Largest Dam near China Border ದೇಶದ ಅತಿ ದೊಡ್ಡ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ. 'ದಿಬಾಂಗ್ ವಿವಿಧೋದ್ದೇಶ ಯೋಜನೆ' ಯು ಈಶಾನ್ಯದ ಪರ್ವತ ಪ್ರದೇಶದಲ್ಲಿ ಚೀನಾದ ಗಡಿಗೆ ಹತ್ತಿರದಲ್ಲಿದೆ. 'ನ್ಯಾಷನಲ್ ಹೈಡ್ರೊಎಲೆಕ್ಟ್ರಿಸಿಟಿ ಪವರ್ ಕಾರ್ಪೊರೇಷನ್ ಲಿಮಿಟೆಡ್' ಇದರ ಅನುಷ್ಠಾನ ಹೊಣೆಗಾರಿಕೆ ವಹಿಸಿಕೊಂಡಿದೆ.

ಈ ಅಣೆಕಟ್ಟು ಅಥವಾ ಜಲವಿದ್ಯುತ್ ಯೋಜನೆಯನ್ನು ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯಲ್ಲಿ ದಿಬಾಂಗ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಇದರಿಂದ ವಾರ್ಷಿಕ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಯನ್ನು ನಿರ್ಮಿಸಲು ಒಟ್ಟು 319 ಶತಕೋಟಿ ರೂಪಾಯಿ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಿಸಲು ಒಟ್ಟು ಒಂಬತ್ತು ವರ್ಷ ಬೇಕಾಗುತ್ತದೆ. ಈ ಹಿಂದೆ, ಬ್ರಹ್ಮಪುತ್ರ ನದಿಯನ್ನು ತಿರುಗಿಸಲು ಚೀನಾ ಭಾರತದ ಗಡಿಯ ಸಮೀಪದಲ್ಲಿ ಟಿಬೆಟ್‌ನಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಪರಿಸ್ಥಿತಿಯಲ್ಲಿ ಭಾರತ ಕೂಡ ಚೀನಾ ಗಡಿಗೆ ತೀರಾ ಸಮೀಪದಲ್ಲಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಿದೆ.
icon

(1 / 4)

ಈ ಅಣೆಕಟ್ಟು ಅಥವಾ ಜಲವಿದ್ಯುತ್ ಯೋಜನೆಯನ್ನು ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯಲ್ಲಿ ದಿಬಾಂಗ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಇದರಿಂದ ವಾರ್ಷಿಕ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಯನ್ನು ನಿರ್ಮಿಸಲು ಒಟ್ಟು 319 ಶತಕೋಟಿ ರೂಪಾಯಿ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಿಸಲು ಒಟ್ಟು ಒಂಬತ್ತು ವರ್ಷ ಬೇಕಾಗುತ್ತದೆ. ಈ ಹಿಂದೆ, ಬ್ರಹ್ಮಪುತ್ರ ನದಿಯನ್ನು ತಿರುಗಿಸಲು ಚೀನಾ ಭಾರತದ ಗಡಿಯ ಸಮೀಪದಲ್ಲಿ ಟಿಬೆಟ್‌ನಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಪರಿಸ್ಥಿತಿಯಲ್ಲಿ ಭಾರತ ಕೂಡ ಚೀನಾ ಗಡಿಗೆ ತೀರಾ ಸಮೀಪದಲ್ಲಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಿದೆ.(ಸಾಂಕೇತಿಕ ಚಿತ್ರ HT)

ದಿಬಾಂಗ್ ನದಿಯ ಮೇಲೆ 278 ಮೀಟರ್ ಉದ್ದದ ಅಣೆಕಟ್ಟನ್ನು ಭೂಗತ ಅಡಿಪಾಯದ ಮೇಲೆ ನಿರ್ಮಿಸಲು ಯೋಜಿಸಲಾಗಿದೆ. ಕಾಂಕ್ರೀಟ್ ಒಡ್ಡು ಕುದುರೆಯ ಗೊರಸಿನ ಆಕಾರದಲ್ಲಿ ನಿರ್ಮಾಣವಾಗಲಿದೆ. ಈ ಅಣೆಕಟ್ಟಿನ ಅಡಿಯಲ್ಲಿ 300 ರಿಂದ 600 ಮೀಟರ್ ಉದ್ದ ಮತ್ತು 9 ಮೀಟರ್ ವ್ಯಾಸದ ಸುರಂಗ ಇರುತ್ತದೆ. ಈ ಅಣೆಕಟ್ಟಿನ ಅಡಿಯಲ್ಲಿ ಭೂಗತ ಪವರ್ ಹೌಸ್ ಇರುತ್ತದೆ. ಅಲ್ಲಿರುವ ನೀರಿನ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲಾಗುವುದು. 
icon

(2 / 4)

ದಿಬಾಂಗ್ ನದಿಯ ಮೇಲೆ 278 ಮೀಟರ್ ಉದ್ದದ ಅಣೆಕಟ್ಟನ್ನು ಭೂಗತ ಅಡಿಪಾಯದ ಮೇಲೆ ನಿರ್ಮಿಸಲು ಯೋಜಿಸಲಾಗಿದೆ. ಕಾಂಕ್ರೀಟ್ ಒಡ್ಡು ಕುದುರೆಯ ಗೊರಸಿನ ಆಕಾರದಲ್ಲಿ ನಿರ್ಮಾಣವಾಗಲಿದೆ. ಈ ಅಣೆಕಟ್ಟಿನ ಅಡಿಯಲ್ಲಿ 300 ರಿಂದ 600 ಮೀಟರ್ ಉದ್ದ ಮತ್ತು 9 ಮೀಟರ್ ವ್ಯಾಸದ ಸುರಂಗ ಇರುತ್ತದೆ. ಈ ಅಣೆಕಟ್ಟಿನ ಅಡಿಯಲ್ಲಿ ಭೂಗತ ಪವರ್ ಹೌಸ್ ಇರುತ್ತದೆ. ಅಲ್ಲಿರುವ ನೀರಿನ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲಾಗುವುದು. (ಸಾಂಕೇತಿಕ ಚಿತ್ರ HT)

ಅಣೆಕಟ್ಟಿನ ಮುಖ್ಯ ಉದ್ದೇಶವು ಈ ಪ್ರದೇಶದಲ್ಲಿ ಪ್ರವಾಹ ನಿಯಂತ್ರಣ, ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ವಿದ್ಯುತ್ ಉತ್ಪಾದನೆಯಾಗಿದೆ. 278 ಮೀಟರ್ ಉದ್ದದ ಈ ಅಣೆಕಟ್ಟು ಪೂರ್ಣಗೊಂಡಾಗ ಭಾರತದ ಅತಿ ಎತ್ತರದ ಅಣೆಕಟ್ಟು ಆಗಲಿದೆ. ಅರುಣಾಚಲ ಪ್ರದೇಶ ಸರ್ಕಾರವು ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಿದರೆ ನಿರ್ಮಾಣಕ್ಕೆ ಖರ್ಚು ಮಾಡಿದ ಶೇಕಡ 12 ಹಣವನ್ನು ಪಡೆಯುತ್ತದೆ. ಏತನ್ಮಧ್ಯೆ, ಈ ಭಾಗದ ಆದಿವಾಸಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಮತ್ತು ಅವರ ಸಂಪ್ರದಾಯಗಳು ಹಾಗೇ ಉಳಿಯಲು ಸರ್ಕಾರ 241 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದು ತಿಳಿದಿದೆ.
icon

(3 / 4)

ಅಣೆಕಟ್ಟಿನ ಮುಖ್ಯ ಉದ್ದೇಶವು ಈ ಪ್ರದೇಶದಲ್ಲಿ ಪ್ರವಾಹ ನಿಯಂತ್ರಣ, ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ವಿದ್ಯುತ್ ಉತ್ಪಾದನೆಯಾಗಿದೆ. 278 ಮೀಟರ್ ಉದ್ದದ ಈ ಅಣೆಕಟ್ಟು ಪೂರ್ಣಗೊಂಡಾಗ ಭಾರತದ ಅತಿ ಎತ್ತರದ ಅಣೆಕಟ್ಟು ಆಗಲಿದೆ. ಅರುಣಾಚಲ ಪ್ರದೇಶ ಸರ್ಕಾರವು ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಿದರೆ ನಿರ್ಮಾಣಕ್ಕೆ ಖರ್ಚು ಮಾಡಿದ ಶೇಕಡ 12 ಹಣವನ್ನು ಪಡೆಯುತ್ತದೆ. ಏತನ್ಮಧ್ಯೆ, ಈ ಭಾಗದ ಆದಿವಾಸಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಮತ್ತು ಅವರ ಸಂಪ್ರದಾಯಗಳು ಹಾಗೇ ಉಳಿಯಲು ಸರ್ಕಾರ 241 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದು ತಿಳಿದಿದೆ.(ಸಾಂಕೇತಿಕ ಚಿತ್ರ HT)

ನೆರೆಯ ಚೀನಾ ದೇಶವು ಟಿಬೆಟಿಯನ್ ಪ್ರದೇಶದಲ್ಲಿ ಅರುಣಾಚಲದ ಗಡಿಯಲ್ಲಿ ಹಲವಾರು ಗ್ರಾಮಗಳನ್ನು ನಿರ್ಮಿಸಿದೆ. ಗ್ರಾಮಾಭಿವೃದ್ಧಿ ಹೆಸರಿನಲ್ಲಿ ಅಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ಮಾಡುವ ಮೂಲಕ ಭಾರತದ ಗಡಿಯ ಮೇಲೆ ನಿಗಾ ಇಡಲು ಚೀನಾ ಮುಂದಾಗಿದೆ. ಕಳೆದ ದಿನಗಳಲ್ಲಿ ಲಡಾಖ್ ಮತ್ತು ಅರುಣಾಚಲದಲ್ಲಿ ಚೀನಾದ ಆಕ್ರಮಣಕ್ಕೆ ಭಾರತೀಯರು ಸಾಕ್ಷಿಯಾಗಿದ್ದಾರೆ. ದೇಶೀಯ ರಾಜಕೀಯದಲ್ಲಿ ಮೋದಿ ಸರ್ಕಾರವೂ ಸಾಕಷ್ಟು ಒತ್ತಡದಲ್ಲಿದೆ. ಈ ಪರಿಸ್ಥಿತಿಯಲ್ಲಿ ಚೀನಾಕ್ಕೆ ಪ್ರತಿಕ್ರಿಯೆಯಾಗಿ ಈ ಹೊಸ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ಅನೇಕ ವಿಶ್ಲೇಷಕರು ನಂಬಿದ್ದಾರೆ. 
icon

(4 / 4)

ನೆರೆಯ ಚೀನಾ ದೇಶವು ಟಿಬೆಟಿಯನ್ ಪ್ರದೇಶದಲ್ಲಿ ಅರುಣಾಚಲದ ಗಡಿಯಲ್ಲಿ ಹಲವಾರು ಗ್ರಾಮಗಳನ್ನು ನಿರ್ಮಿಸಿದೆ. ಗ್ರಾಮಾಭಿವೃದ್ಧಿ ಹೆಸರಿನಲ್ಲಿ ಅಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ಮಾಡುವ ಮೂಲಕ ಭಾರತದ ಗಡಿಯ ಮೇಲೆ ನಿಗಾ ಇಡಲು ಚೀನಾ ಮುಂದಾಗಿದೆ. ಕಳೆದ ದಿನಗಳಲ್ಲಿ ಲಡಾಖ್ ಮತ್ತು ಅರುಣಾಚಲದಲ್ಲಿ ಚೀನಾದ ಆಕ್ರಮಣಕ್ಕೆ ಭಾರತೀಯರು ಸಾಕ್ಷಿಯಾಗಿದ್ದಾರೆ. ದೇಶೀಯ ರಾಜಕೀಯದಲ್ಲಿ ಮೋದಿ ಸರ್ಕಾರವೂ ಸಾಕಷ್ಟು ಒತ್ತಡದಲ್ಲಿದೆ. ಈ ಪರಿಸ್ಥಿತಿಯಲ್ಲಿ ಚೀನಾಕ್ಕೆ ಪ್ರತಿಕ್ರಿಯೆಯಾಗಿ ಈ ಹೊಸ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ಅನೇಕ ವಿಶ್ಲೇಷಕರು ನಂಬಿದ್ದಾರೆ. (ಸಾಂಕೇತಿಕ ಚಿತ್ರ HT)


ಇತರ ಗ್ಯಾಲರಿಗಳು