ಭಯೋತ್ಪಾದನೆ ವಿರುದ್ಧ ಭಾರತದ ಸಮರ; ಆಪರೇಷನ್ ಸಿಂದೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತು; ಗಮನಸೆಳೆದ 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಯೋತ್ಪಾದನೆ ವಿರುದ್ಧ ಭಾರತದ ಸಮರ; ಆಪರೇಷನ್ ಸಿಂದೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತು; ಗಮನಸೆಳೆದ 10 ಮುಖ್ಯ ಅಂಶಗಳು

ಭಯೋತ್ಪಾದನೆ ವಿರುದ್ಧ ಭಾರತದ ಸಮರ; ಆಪರೇಷನ್ ಸಿಂದೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತು; ಗಮನಸೆಳೆದ 10 ಮುಖ್ಯ ಅಂಶಗಳು

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತವು ಭಯೋತ್ಪಾದನೆ ವಿರುದ್ಧದ ಸಮರವನ್ನು ತೀವ್ರಗೊಳಿಸಿದೆ. ಮೇ 7 ರಂದು ಆರಂಭಿಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಳಿಕ ಪಾಕಿಸ್ತಾನ - ಭಾರತದ ನಡುವಿನ ಬಿಕ್ಕಟ್ಟು ತೀವ್ರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 12) ಮೊದಲ ಬಾರಿಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಗಮನಸೆಳೆದ 10 ಮುಖ್ಯ ಅಂಶಗಳು ಹೀಗಿವೆ.

ಭಯೋತ್ಪಾದನೆ ವಿರುದ್ಧದ ಭಾರತ ಸಮರ - ಆಪರೇಷನ್ ಸಿಂದೂರ್ ಕಾರ್ಯಾಚರಣೆ ಶುರುವಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 12) ರಾತ್ರಿ 8 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಾಚರಣೆಯ ಉದ್ದೇಶವನ್ನು ಸ್ಪಷ್ಟಗೊಳಿಸಿದ್ದು, ಜಗತ್ತಿಗೂ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ಅವರ ಭಾಷಣದ 10 ಮುಖ್ಯ ಅಂಶಗಳ ಕಡೆಗೊಂದು ನೋಟ ಇಲ್ಲಿದೆ.
icon

(1 / 11)

ಯಾವುದೇ ರೀತಿಯ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗಳನ್ನು ಭಾರತ ಸಹಿಸುವುದಿಲ್ಲ. ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ ಜತೆಗೆ ಭಯೋತ್ಪಾದನೆ ,ಮೂಲಸೌಕರ್ಯಗಳು ಕೆಲಸ ಮಾಡಿದರೆ ಅವುಗಳಿಗೆ ಏನು ಮಾಡಬೇಕೋ ಭಾರತ ಅದನ್ನು ಮಾಡಲಿದೆ. ಭಯೋತ್ಪಾದನೆ ವಿರುದ್ಧ ಭಾರತ ನಿಲುವು ಸ್ಪಷ್ಟವಾಗಿದೆ. ಯಾವುದೇ ಭಯೋತ್ಪಾದನೆ ದಾಳಿ ನಡೆದರೂ ಅದಕ್ಕೆ ತಕ್ಕ ಉತ್ತರವನ್ನು ಅದರ ಮೂಲಕ್ಕೇ ನೀಡಲಾಗುತ್ತದೆ. - ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(2 / 11)

ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಚಟುವಟಿಕೆಗಳು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂಬುದು ಈಗ ಜಗತ್ತಿಗೆ ಗೊತ್ತಾಗಿದೆ. ಪಾಕಿಸ್ತಾನ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಅದು ಕೂಡಲೇ ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಬೇಕು. ಉಗ್ರ ಶಿಬಿರಗಳನ್ನು ಬಂದ್ ಮಾಡಬೇಕು. - ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(3 / 11)

ಪಾಕಿಸ್ಥಾನದ ಜತೆಗೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ವಿಚಾರವಾಗಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸಂಬಂಧಿಸಿದಂತೆ ಮಾತ್ರವೇ ಆಗಿರುತ್ತದೆ. ಅದು ದ್ವಿಪಕ್ಷೀಯ ಮಾತುಕತೆ, ಅದರಲ್ಲಿ ಬೇರೆಯವರಿಗೆ ಅವಕಾಶವಿಲ್ಲ. ಪಾಕಿಸ್ತಾನ ಇದನ್ನು ಅರ್ಥಮಾಡಿಕೊಂಡು ನಡೆಯಬೇಕು. - ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(4 / 11)

ಭಯೋತ್ಪಾದನೆ ಮತ್ತು ಮಾತುಕತೆ (ಟೆರರ್ ಆಂಡ್ ಟಾಕ್‌) ಎರಡೂ ಒಟ್ಟೊಟ್ಟಿಗೆ ಸಾಗದು. ಅದೇ ರೀತಿ, ಟೆರರ್ ಮತ್ತು ಟ್ರೇಡ್ ಕೂಡ ಜೊತೆ ಜೊತೆಯಾಗಿ ನಡೆಯದು. ಹಾಗೆಯೇ, ರಕ್ತ ಹಾಗೂ ನೀರು ಕೂಡ ಒಟ್ಟಿಗೆ ಹರಿಯಲಾರದು. ಪಾಕಿಸ್ತಾನ ಭಯೋತ್ಪಾದನೆ ವಿಚಾರದಲ್ಲಿ ತನ್ನ ನಿಲುವನ್ನು ಬದಲಾಯಿಸಿಕೊಳ್ಳದೇ ಬೇರೆ ದಾರಿಯೇ ಇಲ್ಲ. - ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(5 / 11)

ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ಮತ್ತು ಪಿಒಕೆ ಕುರಿತಂತೆ ಮಾತ್ರ ಇರಲಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೂ ಸ್ಪಷ್ಟಪಡಿಸ ಬಯಸುತ್ತೇನೆ- ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(6 / 11)

ಇದು ಯುದ್ಧಕ್ಕೆ ಸಂಬಂಧಿಸಿದ ಯುಗವಲ್ಲ. ಅದೇ ರೀತಿ ಭಯೋತ್ಪಾದನೆಯ ಯುಗವೂ ಅಲ್ಲ. ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಶಾಂತಿ ಸೌಹಾರ್ದ ಕಾಪಾಡಿಕೊಂಡು ಮುನ್ನಡೆಯಬೇಕು. ಇಂತಹ ಸನ್ನಿವೇಶದಲ್ಲಿ ಭಯೋತ್ಪಾದನೆಗೆ ಮುಂದಾದರೆ ಅದಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಿದೆ- ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(7 / 11)

ಆಪರೇಷನ್ ಸಿಂದೂರ್ ಎಂಬುದು ಕೇವಲ ಹೆಸರಲ್ಲ. ಅದು ಭಯೋತ್ಪಾದನೆ ವಿರುದ್ಧದ ಭಾರತದ ಸಮರ. ಅದಕ್ಕೊಂದು ಹೊಸ ಆಯಾಮ ನೀಡಿದ ಕಾರ್ಯಾಚರಣೆ. ಭಾರತದ ಸ್ವದೇಶಿ ಶಸ್ತ್ರಾಸ್ತ್ರಗಳು, ಆಧುನಿಕ ಯುದ್ಧೋಪಕರಣಗಳ ಕಾರ್ಯಕ್ಷಮತೆ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಭಾರತದ ನಾಗರಿಕರ ಹತ್ಯೆಗೆ ಕಾರಣವಾದ ಭಯೋತ್ಪಾದಕರ ಶಿಬಿರಗಳು ನಾಶವಾಗಿವೆ. 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. - ನರೇಂದ್ರ ಮೋದಿ, ಭಾರತದ ಪ್ರಧಾನಿ.
icon

(8 / 11)

ಪಹಲ್ಗಾಮ್ ಉಗ್ರ ದಾಳಿಯು ಅತ್ಯಂತ ಹೀನ ಭಯೋತ್ಪಾದನಾ ಕೃತ್ಯವಾಗಿತ್ತು. ಅದು ಭಾರತದ ಆತ್ಮದ ಮೇಲೆ ಬಿದ್ದ ಹೊಡೆತವಾಗಿತ್ತು. ಭಾರತ ಅಂತಹ ಹೊಡೆತಗಳಿಗೆ ತಕ್ಕ ಪ್ರತ್ಯುತ್ತರ ನೀಡಿಯೇ ನೀಡುತ್ತದೆ. ಆ ಕೆಲಸವನ್ನು ಹಿಂದೆಯೂ ಸರ್ಜಿಕಲ್ ಸ್ಟ್ರೈಕ್, ವಾಯು ದಾಳಿ ಮೂಲಕ ಸಾಬೀತು ಮಾಡಿದೆ. - ನರೇಂದ್ರ ಮೋದಿ, ಭಾರತದ ಪ್ರದಾನಿ,
icon

(9 / 11)

ನಮ್ಮ ಭಾರತೀಯ ಮಹಿಳೆಯರ ಸಿಂದೂರ ಅಳಿಸುವುದರಿಂದ ಆಗುವ ಪರಿಣಾಮ ಏನು ಎಂಬುದು ಶತ್ರುಗಳಿಗೆ ಈಗ ಮನವರಿಕೆಯಾಗಿದ್ದೀತು. ಆಪರೇಷನ್ ಸಿಂದೂರ್ ಎಂಬುದು ಕೇವಲ ಹೆಸರಲ್ಲ ಎಂಬ ಸಂದೇಶ ಈಗ ಸ್ಪಷ್ಟವಾಗಿ ತಲುಪಬೇಕಾದವರಿಗೆ ತಲುಪಿದೆ- ನರೇಂದ್ರ ಮೋದಿ, ಭಾರತದ ಪ್ರದಾನಿ.
icon

(10 / 11)

ನಮ್ಮ ಧೈರ್ಯಶಾಲಿ ಸೈನಿಕರು ಆಪರೇಷನ್ ಸಿಂದೂರ್‌ನ ಉದ್ದೇಶಗಳನ್ನು ಸಾಧಿಸುವಲ್ಲಿ ಸಾಟಿಯಿಲ್ಲದ ಶೌರ್ಯವನ್ನು ತೋರಿಸಿದ್ದಾರೆ. ಇಂದು, ನಾನು ಅವರ ಧೈರ್ಯ, ಅವರ ಧೈರ್ಯ ಮತ್ತು ಅವರ ಶೌರ್ಯಕ್ಕೆ ತಲೆಬಾಗುತ್ತೇನೆ. ಸಲ್ಯೂಟ್ ಮಾಡುತ್ತೇನೆ.. ನಾನು ಈ ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ ಯಶಸ್ಸನ್ನು ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ನಮ್ಮ ರಾಷ್ಟ್ರದ ಮಗಳಿಗೆ ಅರ್ಪಿಸುತ್ತೇನೆ,- ನರೇಂದ್ರ ಮೋದಿ, ಭಾರತದ ಪ್ರಧಾನಿ
icon

(11 / 11)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು