ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಭಾರತ ಸುಲಭವಾಗಿ ತಟಸ್ಥಗೊಳಿಸಿದ್ದು ಹೇಗೆ; S-400 ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಅಷ್ಟಿಷ್ಟಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಭಾರತ ಸುಲಭವಾಗಿ ತಟಸ್ಥಗೊಳಿಸಿದ್ದು ಹೇಗೆ; S-400 ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಅಷ್ಟಿಷ್ಟಲ್ಲ

ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಭಾರತ ಸುಲಭವಾಗಿ ತಟಸ್ಥಗೊಳಿಸಿದ್ದು ಹೇಗೆ; S-400 ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಅಷ್ಟಿಷ್ಟಲ್ಲ

ಪೆಹಲ್ಗಾಮ್‌ ಭಯೋತ್ಪಾದಕ ತಾಳಿಗೆ ಪ್ರತೀಕಾರವಾಗಿ ಭಾರತವು 'ಆಪರೇಷನ್‌ ಸಿಂದೂರ' ಮೂಲಕ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ, ಜಗತ್ತಿಗೆ ಕಂಟಂಕರಾಗಿದ್ದ ಭಯೋತ್ಪಾದಕರ ದಮನ ಮಾಡಿತು. ಇದನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ, ಭಾರತದ ಮೇಲೆ ಪ್ರತಿದಾಳಿ ನಡೆಸುವ ದುಸ್ಸಾಹಸಕ್ಕೆ ಕೈಹಾಕಿ ಕೈಸುಟ್ಟುಕೊಂಡಿದೆ.

ಭಾರತ ಸೇನಾಪಡೆಯು ಬಲಿಷ್ಠವಾಗಿದ್ದು, ಶತ್ರುದಾಳಿಯನ್ನು ಸದೆಬಡಿಯುವ ಸಾಮರ್ಥ್ಯವಿದೆ. ಹಾಗಿದ್ರೆ ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಸುಲಭವಾಗಿ ಸದೆಬಡಿದ ಭಾರತದ ಆ ಶಕ್ತಿಯ ಬಗ್ಗೆ ತಿಳಿಯೋಣ. ಪಾಕಿಸ್ತಾನದ ದಾಳಿಯನ್ನು ತಡೆಯಲು ಭಾರತೀಯ ವಾಯುಪಡೆಯು ರಷ್ಯಾ ನಿರ್ಮಿತ 'S-400' ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಳಸಿತು. ಭಾರತದ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನ ಹಾರಿಸಿದ 15 ಕ್ಷಿಪಣಿಗಳನ್ನು ತಟಸ್ಥಗೊಳಿಸಲು, ಸುಧಾರಿತ ರಾಡಾರ್ ಮತ್ತು ಶತ್ರುದಾಳಿಯನ್ನು ತಡೆಯುವ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ಬಳಸಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
icon

(1 / 5)

(HT_PRINT)

ಶತ್ರು ದಾಳಿಯನ್ನು ತಡೆಯಲು ಭಾರತ ಬಳಸುವ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ವಿಶ್ವದ ಅತ್ಯಂತ ಮಾರಕವಾದ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿಗಳು ಎಂದು ಪರಿಗಣಿಸಲಾಗಿದೆ. ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ. ಭಾರತದ ಮೇಲೆ ದಾಳಿ ನಡೆಸಲು ನೆರೆಯ ದೇಶಗಳು ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ಶತ್ರುಗಳು ದೂರದಿಂದಲೇ ನಡೆಸುವ ವೈಮಾನಿಕ ಅಥವಾ ಕ್ಷಿಪಣಿ ಬೆದರಿಕೆಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ ಅದನ್ನು ನಿರಾಯಾಸವಾಗಿ ಹೊಡೆದುರುಳಿಸಬಲ್ಲದು. ಇದು ಭಾರತದ ವಾಯು ರಕ್ಷಣೆಗೆ ಆನೆಬಲ ತುಂಬುತ್ತದೆ. ಆ ಮೂಲಕ ಶತ್ರುದಾಳಿಯನ್ನು ತಡೆಗಟ್ಟಿ ರಾಷ್ಟ್ರೀಯ ಭದ್ರತೆಯನ್ನು ಸುಧಾರಿಸುತ್ತದೆ.
icon

(2 / 5)

(AP)

ಮೇ 8ರ ಗುರುವಾರ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ಥಾಲಾ, ಜಲಂಧರ್, ಲುಧಿಯಾನ, ಆದಂಪುರ್, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರ್ಲೈ ಮತ್ತು ಭುಜ್ ಸೇರಿದಂತೆ ಕೆಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿಗೆ ಪಾಕಿಸ್ತಾನ ಪ್ರಯತ್ನಿಸಿತು. ಆದರೆ ಈ ಪ್ರಯತ್ನಗಳನ್ನು ಭಾರತದ ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ವಿಫಲಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
icon

(3 / 5)

ಎಸ್ -400 ರಕ್ಷಣಾ ವ್ಯವಸ್ಥೆಯು ವಿಮಾನ, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವಿವಿಧ ಶ್ರೇಣಿಗಳು ಮತ್ತು ಎತ್ತರದ ಪ್ರದೇಶಗಳಲ್ಲಿ ಏಕಕಾಲದಲ್ಲಿ ಅನೇಕ ಗುರಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಈ ವ್ಯವಸ್ಥೆಯು ಮೂರು ಪ್ರಮುಖ ಘಟಕಗಳನ್ನು ಒಳಗೊಂಡಿದೆ. ಅದುವೇ ಕ್ಷಿಪಣಿ ಲಾಂಚರ್‌ಗಳು, ಶಕ್ತಿಯುತ ರಾಡಾರ್ ಮತ್ತು ಕಮಾಂಡ್ ಸೆಂಟರ್. ಇದು ವಿಮಾನ, ಕ್ರೂಸ್ ಕ್ಷಿಪಣಿಗಳು ಮತ್ತು ಹೆಚ್ಚಿನ ವೇಗದ ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
icon

(4 / 5)

ಎಸ್ -400 ವ್ಯವಸ್ಥೆಯ ಪ್ರಭಾವಶಾಲಿ ಹಾಗೂ ದೀರ್ಘ-ವ್ಯಾಪ್ತಿಯ ಸಾಮರ್ಥ್ಯವೇ ನೆರೆಯ ಹಾಗೂ ನ್ಯಾಟೋ ಸದಸ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ. ಭಾರತಕ್ಕೆ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ಕೊಡುವ ದೇಶ ರಷ್ಯಾ. ಮಿತ್ರರಾಷ್ಟ್ರದಿಂದ ಎಸ್ -400 ತಲುಪಿಸುವ ಒಪ್ಪಂದಕ್ಕೆ 2018ರ ಅಕ್ಟೋಬರ್ 5ರಂದು ಸಹಿ ಹಾಕಲಾಯಿತು. 2018ರಲ್ಲಿ, ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಐದು ಘಟಕಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತವು ರಷ್ಯಾದೊಂದಿಗೆ 5 ಬಿಲಿಯನ್ ಡಾಲರ್ ಒಪ್ಪಂದ ಮಾತ್ತು.
icon

(5 / 5)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು