IND vs AUS 3rd ODI: ಕೈಕೊಟ್ಟ ಬ್ಯಾಟರ್‌ಗಳು; ವಿಶ್ವಕಪ್‌ಗೂ ಮುನ್ನ ಆಸೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು; ಫೋಟೋಸ್
ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್‌ಗಳಿಂದ ಗೆದ್ದು ಕ್ಲೀನ್ ಸ್ವೀಪ್‌ನಿಂದ ಪಾರಾಗಿದೆ. ಟೀಂ ಇಂಡಿಯಾ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.
(1 / 7)
ಆಸ್ಟ್ರೇಲಿಯಾ ನೀಡಿದ್ದ 353 ರನ್‌ಗಳ ಬೃಹತ್ ಗುರಿನ್ನು ಬೆನ್ನಟ್ಟುವಲ್ಲಿ ಟೀಂ ಇಂಡಿಯಾ ವಿಫಲವಾಯಿತು. ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪಿನ್ ಎದುರು ರನ್ ಗಳಿಸಲು ಪರದಾಡಿತು. ಮ್ಯಾಕ್ಸವೆಲ್ 10 ಓವರ್ ಬೌಲಿಂಗ್ ಮಾಡಿ 40 ರನ್ ಕೊಟ್ಟು ಪ್ರಮುಖ 4 ವಿಕೆಟ್ ಪಡೆದರು. ಇದರೊಂದಿಗೆ ಆಸ್ಟ್ರೇಲಿಯಾ ಸತತ 5 ನೇ ಸೋಲನ್ನು ತಪ್ಪಿಸಿಕೊಂಡಿತು.(PTI)
(2 / 7)
ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ಟಾಪ್ ಬ್ಯಾಟರ್‌ಗಳು ಟೀಂ ಇಂಡಿಯಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮೆಚೆಲ್ ಮಾರ್ಷ್ 84 ಎಸೆತಗಳಿಂದ 96 ರನ್ ಗಳಿಸಿ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು.(ANI)
(3 / 7)
ಆಸ್ಟ್ರೇಲಿಯಾ 352 ರನ್ ಪೇರಿಸಲು ಸ್ಟೀವನ್ ಸ್ಮಿತ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ 119 ಎಸೆತಗಳಲ್ಲಿ 137 ರನ್ ಸಿಡಿಸಿತು. ಡೇವಿಡ್ ವಾರ್ನರ್ ಕೇವಲ 34 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸೇರಿ 56 ರನ್ ಗಳಿಸಿ ಪ್ರಸಿದ್ಧ್ ಕೃಷ್ಣ ಬೌಲಿಿಂಗ್‌ನಲ್ಲಿ ಔಟಾದರು.(ANI)
(4 / 7)
ಮಾರ್ನಸ್ ಲ್ಯಾಬುಶೇನ್ 58 ಎಸೆತಗಳಿಂದ 72 ರನ್ ಗಳಿಸಿದರು. ಇದು ಕೂಡ ಆಸ್ಟ್ರೇಲಿಯಾ 352 ರನ್‌ಗಳ ಬೃಹತ್ ರನ್ ಪೇರಿಸಲು ನೆರವಾಯಿತು.(AFP)
(5 / 7)
ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮುಗಿಸಿದರು. ರೋಹಿತ್ ಆಡದ ಕೊನೆಯ ಪಂದ್ಯದಲ್ಲೇ 57 ಎಸೆತಗಳಿಂದ 81 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.(BCCI Twitter)
(6 / 7)
ವಾಷಿಂಗ್ಟನ್ ಸುಂದರ್ ಅವರೊಂದಿಗೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಈ ಇಬ್ಬರು ಆಟಗಾರರು ಮೊದಲ ವಿಕೆಟ್‌ಗೆ 65 ಬಾಲ್‌ಗಳಿಂದ 74 ರನ್ ಗಳಿಸಿದರು. ಸುಂದರ್ 30 ಎಸೆತಗಳಿಂದ 18 ರನ್ ಗಳಿಸಿದರು. ಇದರಲ್ಲಿ 1 ಬೌಂಡರಿ, 1 ಸಿಕ್ಸರ್ ಸೇರಿತ್ತು.(AFP)
ಇತರ ಗ್ಯಾಲರಿಗಳು