WCL 2024 Final: ಭಾರತ vs ಪಾಕಿಸ್ತಾನ ಫೈನಲ್; ಹೈವೋಲ್ಟೇಜ್​ ಪಂದ್ಯ ವೀಕ್ಷಿಸುವುದೇಗೆ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wcl 2024 Final: ಭಾರತ Vs ಪಾಕಿಸ್ತಾನ ಫೈನಲ್; ಹೈವೋಲ್ಟೇಜ್​ ಪಂದ್ಯ ವೀಕ್ಷಿಸುವುದೇಗೆ? ಇಲ್ಲಿದೆ ವಿವರ

WCL 2024 Final: ಭಾರತ vs ಪಾಕಿಸ್ತಾನ ಫೈನಲ್; ಹೈವೋಲ್ಟೇಜ್​ ಪಂದ್ಯ ವೀಕ್ಷಿಸುವುದೇಗೆ? ಇಲ್ಲಿದೆ ವಿವರ

  • India vs Pakistan: ವಿಶ್ವ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಲೀಗ್ ಫೈನಲ್​ನಲ್ಲಿ ​ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.

ಬದ್ಧವೈರಿಗಳ ಸೆಣಸಾಟಕ್ಕೆ ಕ್ರಿಕೆಟ್ ಲೋಕ ಸಜ್ಜಾಗಿದೆ. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​​ ಲೀಗ್-2024 ಫೈನಲ್​ನಲ್ಲಿ ಭಾರತ ಚಾಂಪಿಯನ್ಸ್​ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಇಂದು (ಜುಲೈ 13) ಸೆಣಸಾಟ ನಡೆಸಲಿವೆ.
icon

(1 / 10)

ಮೊದಲ ಸೆಮಿಫೈನಲ್​ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಪಾಕಿಸ್ತಾನ, ಫೈನಲ್​ಗೆ ಅರ್ಹತೆ ಪಡೆಯಿತು. ಎರಡನೇ ಸೆಮೀಸ್​​ನಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಮಣಿಸಿದ ಭಾರತ, ಪ್ರಶಸ್ತಿ ಸುತ್ತಿಗೇರಿತು. ಈ ಪಂದ್ಯ ಎಲ್ಲಿ, ಎಷ್ಟೊತ್ತಿಗೆ ಪಂದ್ಯ ಆರಂಭಗೊಳ್ಳಲಿದೆ. ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ವಿವರ.
icon

(2 / 10)

ಇಂಡೋ-ಪಾಕ್ ಹೈವೋಲ್ಟೇಜ್ ಫೈನಲ್ ಪಂದ್ಯ ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ನಲ್ಲಿ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ 8:30ಕ್ಕೆ ನಡೆಯಲಿದೆ. ಟೂರ್ನಿಯ ಮೊದಲ 10 ಲೀಗ್ ಪಂದ್ಯಗಳು ಈ ಮೈದಾನದಲ್ಲೇ ನಡೆದಿದ್ದವು.
icon

(3 / 10)

ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಹೆಚ್​ಡಿ, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಪ್ರಸಾರವಾಗಲಿದೆ.
icon

(4 / 10)

ಫೈನಲ್​​ ಪಂದ್ಯವನ್ನು ಪಾಕಿಸ್ತಾನದಲ್ಲಿ ಜಿಯೋ ಸೂಪರ್ ಮತ್ತು ತಮಾಶಾದಲ್ಲಿ ಪ್ರಸಾರ ಮಾಡಲಾಗುತ್ತದೆ. ಇಂಗ್ಲೆಂಡ್​ನಲ್ಲಿ ಪಂದ್ಯವನ್ನು ಟಿಎನ್​ಟಿ ಸ್ಪೋರ್ಟ್ಸ್​​ನಲ್ಲಿ ನೋಡಬಹುದು.
icon

(5 / 10)

ಭಾರತದಲ್ಲಿ ಫ್ಯಾನ್​ಕೋಡ್​​​ ಮತ್ತು ವೆಬ್​ಸೈಟ್​ನಲ್ಲಿ ನೋಡಬಹುದು. ಆದರೆ, ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಲೀಗ್​​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಚಾಂಪಿಯನ್ 68 ರನ್​ಗಳಿಂದ ಸೋಲು ಕಂಡಿದೆ.
icon

(6 / 10)

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, 4 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತು. ಕಮ್ರಾನ್ ಅಕ್ಮಲ್ 77, ಶರ್ಜೀಲ್ ಖಾನ್ 72 ಮತ್ತು ಶೋಯೆಬ್ ಮಕ್ಸೂದ್ 51 ರನ್ ಗಳಿಸಿದರು. ಭಾರತ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಲಷ್ಟೇ ಶಕ್ತವಾಯಿತು. ಸುರೇಶ್ ರೈನಾ 52 ರನ್ ಸಿಡಿಸಿ ಔಟಾದರು. ಶರ್ಜೀಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
icon

(7 / 10)

ಉಭಯ ತಂಡಗಳು ಫೈನಲ್ ತಲುಪಿದ್ದೇಗೆ: ಭಾರತ ಲೀಗ್​​ನಲ್ಲಿ 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತು. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತು. ಆದರೆ, ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಮತ್ತೆ ಪಾಕಿಸ್ತಾನ ತಂಡವು ಲೀಗ್​​​ನಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್​​​ ಅನ್ನು ಸೋಲಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಸೋತರು. ಸೆಮೀಸ್​ನಲ್ಲಿ ಕೆರಿಬಿಯನ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ಹೋರಾಟಕ್ಕೆ ಟಿಕೆಟ್ ಪಡೆದರು.
icon

(8 / 10)

ಭಾರತ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಗುರ್​​ಕೀರತ್​ ಮನ್, ರಾಹುಲ್ ಶರ್ಮಾ, ನಮನ್ ಓಜಾ, ರಾಹುಲ್ ಶುಕ್ಲಾ, ಆರ್​​ಪಿ ಸಿಂಗ್, ವಿನಯ್ ಕುಮಾರ್, ಧವಳ್ ಕುಲಕರ್ಣಿ, ಸೌರಭ್, ಅನುರೀತ್ ಸಿಂಗ್, ಪವನ್ ನೇಗಿ.
icon

(9 / 10)

ಪಾಕಿಸ್ತಾನ ಚಾಂಪಿಯನ್ಸ್ ತಂಡ: ಶಾರ್ಜೀಲ್ ಖಾನ್, ಕಮ್ರಾನ್ ಅಕ್ಮಲ್, ಯೂನಿಸ್ ಖಾನ್, ಶೋಯೆಬ್ ಮಲಿಕ್, ಮಿಸ್ಬಾ-ಉಲ್-ಹಕ್, ಶಾಹಿದ್ ಅಫ್ರಿದಿ, ಅಬ್ದುಲ್ ರಜಾಕ್, ವಹಾಬ್ ರಿಯಾಜ್, ಸೊಹೈಲ್ ತನ್ವೀರ್, ಸೊಹೈಲ್ ಖಾನ್, ಅಬ್ದುಲ್ ರಹಮಾನ್, ಅಮೀರ್ ಯಾಮಿನ್, ತೌಫಿಕ್ ಉಮರ್, ಸೊಹೈಬ್ ಮಕ್ಸೂದ್, ಸಯೀದ್ ಅಜ್ಮಲ್, ಯಾಸಿರ್ ಅರಾಫತ್, ತನ್ವೀರ್ ಅಹ್ಮದ್.
icon

(10 / 10)

ಇತರ ಗ್ಯಾಲರಿಗಳು