ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಡೋ-ಆಫ್ರಿಕಾ ಪಂದ್ಯಕ್ಕೂ ಮುನ್ನವೇ ಮಳೆ ಆರಂಭ; ಮ್ಯಾಚ್ ಟೈಮಲ್ಲಿ ಶೇ 70ರಷ್ಟು ವರುಣನ ಆತಂಕ

ಇಂಡೋ-ಆಫ್ರಿಕಾ ಪಂದ್ಯಕ್ಕೂ ಮುನ್ನವೇ ಮಳೆ ಆರಂಭ; ಮ್ಯಾಚ್ ಟೈಮಲ್ಲಿ ಶೇ 70ರಷ್ಟು ವರುಣನ ಆತಂಕ

  • T20 World Cup 2024 Final : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಪಂದ್ಯಕ್ಕೆ ಬಾರ್ಬಡೋಸ್​​ನಲ್ಲಿ ಮಳೆ ಸುರಿಯುತ್ತಿದೆ.

ಇಂದು (ಜೂನ್ 29) ಟಿ20 ವಿಶ್ವಕಪ್ 2024 ಫೈನಲ್​ನಲ್ಲಿ ಭಾರತ vs ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್​​ ಓವಲ್ ಕ್ರಿಕೆಟ್​ ಮೈದಾನದಲ್ಲಿ ಜರುಗುವ ಈ ಪಂದ್ಯಕ್ಕೆ 4 ಗಂಟೆಗಳ ಮೊದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ.
icon

(1 / 6)

ಬಾರ್ಬಡೋಸ್​​ನಲ್ಲಿ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಮೋಡ ಕವಿದ ವಾತಾವರಣ ಇತ್ತು. ಸಮಯ ಮುಂದುವರೆದಂತೆ ಮಳೆ ಆರಂಭಗೊಂಡಿತು. ನಂತರ ಮಳೆ ಜೋರಾಯಿತು. ಕಳೆದ ಎಂಟು ಗಂಟೆಗಳಿಂದ ಬಾರ್ಬಡೋಸ್​​ನಲ್ಲಿ ಮಳೆಯಾಗಿರಲಿಲ್ಲ.
icon

(2 / 6)

ಟಿ20 ವಿಶ್ವಕಪ್ ಫೈನಲ್​ಗೆ ಮೀಸಲು ದಿನವಿದ್ದು, ಪಂದ್ಯಕ್ಕೆ ಹೆಚ್ಚುವರಿ 190 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಶನಿವಾರ ಪಂದ್ಯ ಮುಗಿಯದಿದ್ದರೆ, ಭಾನುವಾರ ಪಂದ್ಯ ನಡೆಯಲಿದೆ. ಭಾನುವಾರದ ಪಂದ್ಯವು ಶನಿವಾರ ಪಂದ್ಯ ನಿಂತ ಸ್ಥಳದಿಂದ ಪ್ರಾರಂಭವಾಗಲಿದೆ.
icon

(3 / 6)

ಮಳೆಯಿಂದಾಗಿ ಪಂದ್ಯ ರದ್ದಾದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಶೇ 70ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಪಂದ್ಯ ಆರಂಭಗೊಳ್ಳುವುದು ವಿಳಂಬವಾಗುವ ಸಾಧ್ಯತೆ ಇದೆ.
icon

(4 / 6)

ಪಂದ್ಯದ ಸಮಯದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಹೆಚ್ಚಿವೆ. ಅದಕ್ಕೂ ಮುನ್ನ ಅಕ್ಯೂವೆದರ್ ಮುನ್ಸೂಚನೆಯು ಮಳೆಯ ಶೇಕಡಾ 29 ರಷ್ಟು ಸುರಿಯುವ ನಿರೀಕ್ಷೆ ಇದೆ. ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಅಂದರೆ ಭಾರತೀಯ ಕಾಲಮಾನ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
icon

(5 / 6)

ಬಾರ್ಬಡೋಸ್​​ನಲ್ಲಿ ಗಂಟೆಗೆ 32 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಆಗಿದೆ. ಕ್ರಿಕೆಟ್ ಪ್ರೇಮಿಗಳು ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಾರದು ಎಂದು ಪ್ರಾರ್ಥಿಸುತ್ತಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು