ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ind Vs Sa Final: ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ 5 ಕಾರಣಗಳಿವು

IND vs SA Final: ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ 5 ಕಾರಣಗಳಿವು

  • ಟೀಂ ಇಂಡಿಯಾ 176 ರನ್‌ಗಳ ಸವಾಲಿನ ಮೊತ್ತ ಪೇರಿಸಿದ್ದು ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ ತಂಡವನ್ನ ಗೆಲುವಿನ ದಡ ಸೇರಿಸುವ ನಿಟ್ಟಿನಲ್ಲಿ ಬ್ಯಾಟಿಂಗ್ ಮಾಡಿದ್ರು. ಆದರೆ ಇವರ ಕನಸಿಗೆ ಬ್ರೇಕ್ ಹಾಕಿದ್ದು ಹಾರ್ದಿಕ್ ಪಾಂಡ್ಯ. ಭಾರತ ತಂಡದ ಗೆಲುವಿಗೆ ಪ್ರಮುಖ 5 ಅಂಶಗಳು ಇಲ್ಲಿವೆ.

ಟೀಂ ಇಂಡಿಯಾ ನಾಯಕ ರೋಹಿತ್ ಮತ್ತು ತಂಡದ ಐಸಿಸಿ ಟಿ20 ವಿಶ್ವಕಪ್ ಕನಸು ನನಸಾಗಿದೆ. ಬಾರ್ಬಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
icon

(1 / 8)

ಟೀಂ ಇಂಡಿಯಾ ನಾಯಕ ರೋಹಿತ್ ಮತ್ತು ತಂಡದ ಐಸಿಸಿ ಟಿ20 ವಿಶ್ವಕಪ್ ಕನಸು ನನಸಾಗಿದೆ. ಬಾರ್ಬಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.(AP)

ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದು ಹಂತದಲ್ಲಿ ಮಾರ್ಕರಮ್ ಪಡೆ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಇದಕ್ಕೆ ಟೀಂ ಇಂಡಿಯಾದ ಬೌಲರ್‌ಗಳು ಅವಕಾಶ ನೀಡಲಿಲ್ಲ.
icon

(2 / 8)

ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದು ಹಂತದಲ್ಲಿ ಮಾರ್ಕರಮ್ ಪಡೆ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಇದಕ್ಕೆ ಟೀಂ ಇಂಡಿಯಾದ ಬೌಲರ್‌ಗಳು ಅವಕಾಶ ನೀಡಲಿಲ್ಲ.(HT_PRINT)

ಗೆಲುವಿನ ಸನಿಹಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡದ ಕೈಯಿಂದ ಟೀಂ ಇಂಡಿಯಾ ಗೆಲುವು ಕಸಿದುಕೊಂಡಿದ್ದು ಹೇಗೆ, ಕೊನೆಯಲ್ಲಾದ ಪ್ರಮುಖ 5 ಕಾರಣಗಳು ಇಲ್ಲಿವೆ.
icon

(3 / 8)

ಗೆಲುವಿನ ಸನಿಹಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡದ ಕೈಯಿಂದ ಟೀಂ ಇಂಡಿಯಾ ಗೆಲುವು ಕಸಿದುಕೊಂಡಿದ್ದು ಹೇಗೆ, ಕೊನೆಯಲ್ಲಾದ ಪ್ರಮುಖ 5 ಕಾರಣಗಳು ಇಲ್ಲಿವೆ.(PTI)

1. ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (39) ಮತ್ತು ಹೆನ್ರಿಚ್ ಕ್ಲಾಸೆನ್ (52) ಉತ್ತಮ ಬ್ಯಾಟಿಂಗ್ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ 13ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ 2 ಎಸೆತದಲ್ಲಿ ಸಿಕ್ಸ್ ನೀಡಿ 3ನೇ ಎಸೆತದಲ್ಲೇ ಡಿ ಕಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 
icon

(4 / 8)

1. ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (39) ಮತ್ತು ಹೆನ್ರಿಚ್ ಕ್ಲಾಸೆನ್ (52) ಉತ್ತಮ ಬ್ಯಾಟಿಂಗ್ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ 13ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ 2 ಎಸೆತದಲ್ಲಿ ಸಿಕ್ಸ್ ನೀಡಿ 3ನೇ ಎಸೆತದಲ್ಲೇ ಡಿ ಕಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. (PTI)

2. ಡಿ ಕಾಕ್ ವಿಕೆಟ್ ಪಡೆದ ಬಳಿಕ ಹೆನ್ರಿಜ್ ಕ್ಲಾಸೆನ್ ಮೇಲೆ ಒತ್ತಡ ಹೆಚ್ಚಾಯ್ತು. 16 ಓವರ್‌ಗಳಲ್ಲಿ 150 ರನ್ ಗಳಿಸಿದ್ದ ಹರಿಣಗಳು ಗೆಲುವಿನ ಸನಿಹಕ್ಕೆ ಬಂತು. ಆದರೆ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ 52 ರನ್ ಗಳಿಸಿದ್ದ ಕ್ಲಾಸೆನ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. 
icon

(5 / 8)

2. ಡಿ ಕಾಕ್ ವಿಕೆಟ್ ಪಡೆದ ಬಳಿಕ ಹೆನ್ರಿಜ್ ಕ್ಲಾಸೆನ್ ಮೇಲೆ ಒತ್ತಡ ಹೆಚ್ಚಾಯ್ತು. 16 ಓವರ್‌ಗಳಲ್ಲಿ 150 ರನ್ ಗಳಿಸಿದ್ದ ಹರಿಣಗಳು ಗೆಲುವಿನ ಸನಿಹಕ್ಕೆ ಬಂತು. ಆದರೆ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ 52 ರನ್ ಗಳಿಸಿದ್ದ ಕ್ಲಾಸೆನ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. (AP)

3. ಮೂರು ಓವರ್‌ಗಳಲ್ಲಿ 22 ರನ್‌ಗಳ ಅಗತ್ಯವಿದ್ದಾಗ 18ನೇ ಓವರ್‌ ಬೌಲಿಂಗ್ ಮಾಡಲು ಬಂದ ಜಸ್ಪ್ರೀತ್ ಬುಮ್ರಾ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಬುಮ್ರಾ 2 ರನ್ ನೀಡಿ ಯಾನ್ಸನ್ ವಿಕೆಟ್ ಕಬಳಿಸಿದರು. 
icon

(6 / 8)

3. ಮೂರು ಓವರ್‌ಗಳಲ್ಲಿ 22 ರನ್‌ಗಳ ಅಗತ್ಯವಿದ್ದಾಗ 18ನೇ ಓವರ್‌ ಬೌಲಿಂಗ್ ಮಾಡಲು ಬಂದ ಜಸ್ಪ್ರೀತ್ ಬುಮ್ರಾ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಬುಮ್ರಾ 2 ರನ್ ನೀಡಿ ಯಾನ್ಸನ್ ವಿಕೆಟ್ ಕಬಳಿಸಿದರು. (ICC - X )

4. 12 ಎಸೆತಗಳಲ್ಲಿ 20 ರನ್ ಅವಶ್ಯಕತೆ ಇದ್ದಾಗ 19ನೇ ಓವರ್ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ಬಿಗಿ ಬೌಲಿಂಗ್ ಮೂಲಕ ಕೇವಲ 4 ರನ್ ಮಾತ್ರ ಬಿಟ್ಟುಕೊಟ್ಟರು.
icon

(7 / 8)

4. 12 ಎಸೆತಗಳಲ್ಲಿ 20 ರನ್ ಅವಶ್ಯಕತೆ ಇದ್ದಾಗ 19ನೇ ಓವರ್ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ಬಿಗಿ ಬೌಲಿಂಗ್ ಮೂಲಕ ಕೇವಲ 4 ರನ್ ಮಾತ್ರ ಬಿಟ್ಟುಕೊಟ್ಟರು.(AFP)

5. ಅಂತಿಮವಾಗಿ ಕೊನೆಯ ಓವರ್‌ನಲ್ಲಿ 16 ರನ್ ಬೇಕಾಗಿತ್ತು. ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಹಾರ್ದಿಕ್ ಅವರ ಮೊದಲ ಎಸೆತದಲ್ಲೇ ಸೂರ್ಯ ಕುಮಾರ್ ಯಾದವ್ ಬೌಂಡರಿ ಲೈನ್ ಬಳಿ ಹಿಡಿದ ಡೇವಿಡ್ ಮಿಲ್ಲರ್ ಅದ್ಭುತ ಕ್ಯಾಚ್ ಟೀಂ ಇಂಡಿಯಾದ ಟಾಂಪಿಯನ್ ಪಟ್ಟವನ್ನು ಖಾತ್ರಿ ಪಡಿಸಿತು. 
icon

(8 / 8)

5. ಅಂತಿಮವಾಗಿ ಕೊನೆಯ ಓವರ್‌ನಲ್ಲಿ 16 ರನ್ ಬೇಕಾಗಿತ್ತು. ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಹಾರ್ದಿಕ್ ಅವರ ಮೊದಲ ಎಸೆತದಲ್ಲೇ ಸೂರ್ಯ ಕುಮಾರ್ ಯಾದವ್ ಬೌಂಡರಿ ಲೈನ್ ಬಳಿ ಹಿಡಿದ ಡೇವಿಡ್ ಮಿಲ್ಲರ್ ಅದ್ಭುತ ಕ್ಯಾಚ್ ಟೀಂ ಇಂಡಿಯಾದ ಟಾಂಪಿಯನ್ ಪಟ್ಟವನ್ನು ಖಾತ್ರಿ ಪಡಿಸಿತು. (AP)


ಇತರ ಗ್ಯಾಲರಿಗಳು