ವನಿತೆಯರ ಬೊಂಬಾಟ್ ಬ್ಯಾಟಿಂಗ್; ಟೆಸ್ಟ್ನಲ್ಲಿ ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡವಾದ ಭಾರತ
- ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವನಿತೆಯರು ಸೊಗಸಾದ ಪ್ರದರ್ಶನ ನೀಡಿದ್ದಾರೆ. ಮೊದಲ ದಿನದಾಟದಲ್ಲೇ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ. ಟೆಸ್ಟ್ ಇನ್ನಿಂಗ್ಸ್ನಲ್ಲಿ ಒಂದೇ ದಿನದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಎರಡನೇ ತಂಡ ಎಂಬ ದಾಖಲೆ ಬರೆದಿದ್ದಾರೆ.
- ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವನಿತೆಯರು ಸೊಗಸಾದ ಪ್ರದರ್ಶನ ನೀಡಿದ್ದಾರೆ. ಮೊದಲ ದಿನದಾಟದಲ್ಲೇ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ. ಟೆಸ್ಟ್ ಇನ್ನಿಂಗ್ಸ್ನಲ್ಲಿ ಒಂದೇ ದಿನದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಎರಡನೇ ತಂಡ ಎಂಬ ದಾಖಲೆ ಬರೆದಿದ್ದಾರೆ.
(1 / 10)
2014ರ ಬಳಿಕ ತವರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಮೊದಲ ದಿನದ ಅಂತ್ಯಕ್ಕೆ 410/7 ರನ್ ಗಳಿಸಿದೆ. ಅಲ್ಲದೆ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.(BCCI Women-X)
(2 / 10)
ಭಾರತದ ಇನ್ನಿಂಗ್ಸ್ನ ನಾಲ್ಕನೇ ಅರ್ಧಶತಕವನ್ನು ದೀಪ್ತಿ ಗಳಿಸಿದರು. ರಾಣಾ ಜೊತೆಗೂಡಿ ಭಾರತ ಮೊತ್ತವನ್ನು 89.1 ಓವರ್ಗಳಲ್ಲಿ 400ರ ಗಡಿ ದಾಟಿಸಿದರು. ಆ ಮೂಲಕ ಭಾರತವು ತವರಿನಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸಿತು. ಈ ಹಿಂದೆ 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ತವರಿನ ಟೆಸ್ಟ್ ಪಂದ್ಯದಲ್ಲಿ 400 ರನ್ಗೆ 6 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತ್ತು.(PTI)
(3 / 10)
ನಾಯಕಿ ಹರ್ಮನ್ಪ್ರೀತ್ ಕೌರ್ ತಮ್ಮ ಅತ್ಯಧಿಕ ಟೆಸ್ಟ್ ಸ್ಕೋರ್ ದಾಖಲಿಸಿದರು. ಆದರೆ, ವಿಲಕ್ಷಣ ರನ್ ಔಟ್ ಆಗುವುದರೊಂದಿಗೆ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು.(PTI)
(4 / 10)
ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ 88 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 66 ರನ್ ಕಲೆ ಹಾಕಿದರು. ಇದು ಅವರ ಚೊಚ್ಚಲ ಅರ್ಧಶತಕ. (BCCI Women-X)
(5 / 10)
ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಮೌಲ್ಯಯುತ ಕಾಣಿಕೆ ನೀಡಿದರು. ಆರಂಭಿಕ ಆಟಗಾರ್ತಿ ಶುಭಾ ಸತೀಶ್, ಪದಾರ್ಪಣೆ ಪಂದ್ಯದಲ್ಲೇ 69 ರನ್ ಸಿಡಿಸಿದರು. ಅನುಭವಿ ಜೆಮಿಮಾ ರೋಡ್ರಿಗಸ್ 68 ರನ್ ಕಲೆ ಹಾಕಿದರು. ಇವರಿಬ್ಬರು ಮೂರನೇ ವಿಕೆಟ್ಗೆ 115 ರನ್ಗಳ ಜೊತೆಯಾಟವಾಡಿದರು.(BCCI Women-X)
(6 / 10)
ಕಳೆದ 88 ವರ್ಷಗಳಲ್ಲಿ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವೊಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ನಿದರ್ಶನ ಇದಾಗಿದೆ. 1935ರಲ್ಲಿ ಕ್ರೈಸ್ಟ್ಚರ್ಚ್ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧಇಂಗ್ಲೆಂಡ್ ತಂಡವು 431 ರನ್ ಗಳಿಸಿತ್ತು. ಇದು ವನಿತೆಯರ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅಧಿಕ ಮೊತ್ತವಾಗಿದೆ. ಭಾರತವು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.(PTI)
(7 / 10)
ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕನ್ನಡತಿ ಶುಭಾ ಸತೀಶ್, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ 24 ವರ್ಷ ಹರೆಯದ ಕನ್ನಡತಿ, 49 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆಕರ್ಷಕ ಹೊಡೆತಗಳಿಂದ ಎಡಗೈ ಆಟಗಾರ್ತಿ ಒಟ್ಟು 69 ರನ್ ಕಲೆ ಹಾಕಿದರು. ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಅರ್ಧಶತಕ ತಲುಪಿದ ಭಾರತದ ಎರಡನೇ ವನಿತೆ ಎಂಬ ದಾಖಲೆ ನಿರ್ಮಿಸಿದರು. ಮತ್ತೊಂದೆಡೆ ಚೊಚ್ಚಲ ಟೆಸ್ಟ್ನಲ್ಲಿ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ 12ನೇ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.(PTI)
(9 / 10)
ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ದೀಪ್ತಿ ಶರ್ಮಾ ಮತ್ತು ಸ್ನೇಹಾ ರಾಣಾ ಕೂಡ ಏಳನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ಭಾರತ ಮೊತ್ತ 400 ರನ್ಗಳ ಗಡಿ ದಾಟಲು ನೆರವಾದರು.(PTI)
ಇತರ ಗ್ಯಾಲರಿಗಳು