ಮಹಿಳಾ ಏಷ್ಯಾಕಪ್ 2024: ಯುಎಇ ಸವಾಲಿಗೆ ಭಾರತ ತಂಡ ಸಿದ್ಧ, ಗೆದ್ದರೆ ಸೆಮಿಫೈನಲ್ಗೆ ಹರ್ಮನ್ ಪಡೆ
- India Women vs United Arab Emirates Women: ಮಹಿಳಾ ಏಷ್ಯಾಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ, ಯುಎಇ ವಿರುದ್ಧದ ಸೆಣಸಾಟಕ್ಕೆ ಸಜ್ಜಾಗಿದೆ.
- India Women vs United Arab Emirates Women: ಮಹಿಳಾ ಏಷ್ಯಾಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ, ಯುಎಇ ವಿರುದ್ಧದ ಸೆಣಸಾಟಕ್ಕೆ ಸಜ್ಜಾಗಿದೆ.
(1 / 6)
ಮಹಿಳಾ ಏಷ್ಯಾಕಪ್ 2024 ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ, ಇದೀಗ ಯುಎಇ ವಿರುದ್ಧ ಸೆಣಸಾಟಕ್ಕೆ ಸಜ್ಜಾಗಿದೆ.(ACC)
(2 / 6)
ಉಭಯ ತಂಡಗಳ ನಡುವಿನ ಈ ಕಾದಾಟಕ್ಕೆ ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ವೇದಿಕೆ ಒದಗಿಸಲಿದೆ. ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.(ACC)
(3 / 6)
ಎ ಗುಂಪಿನ ಅಂಕಪಟ್ಟಿಯಲ್ಲಿ 2 ಅಂಕ ಪಡೆದಿರುವ ಭಾರತ, ಯುಎಇ ವಿರುದ್ಧ ಗೆದ್ದರೇ ಮೊದಲ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
(4 / 6)
ಯುಎಇ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 6 ವಿಕೆಟ್ಗಳಿಂದ ಸೋತಿದ್ದು, ಇದೀಗ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ. ಆ ಮೂಲಕ ಸೆಮೀಸ್ ಆಸೆ ಜೀವಂತವಾಗಿರಿಸಲು ಕಸರತ್ತು ನಡೆಸಿದೆ. ಯುಎಇ ಸೋತರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. (ACC)
(5 / 6)
ಭಾರತ ಸಂಭಾವ್ಯ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಎಸ್ ಸಜನಾ, ರೇಣುಕಾ ಸಿಂಗ್(ACC)
ಇತರ ಗ್ಯಾಲರಿಗಳು