ಪಾಕಿಸ್ತಾನ, ಪಿಒಕೆಯ 9 ಉಗ್ರ ತಾಣಗಳ ಮೇಲೆ ಭಾರತೀಯ ಸೇನೆಯ ದಾಳಿ, ರಾತ್ರೋ ರಾತ್ರಿ ಶುರುವಾದ ಆಪರೇಷನ್ ಸಿಂದೂರದ ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕಿಸ್ತಾನ, ಪಿಒಕೆಯ 9 ಉಗ್ರ ತಾಣಗಳ ಮೇಲೆ ಭಾರತೀಯ ಸೇನೆಯ ದಾಳಿ, ರಾತ್ರೋ ರಾತ್ರಿ ಶುರುವಾದ ಆಪರೇಷನ್ ಸಿಂದೂರದ ಫೋಟೋಸ್

ಪಾಕಿಸ್ತಾನ, ಪಿಒಕೆಯ 9 ಉಗ್ರ ತಾಣಗಳ ಮೇಲೆ ಭಾರತೀಯ ಸೇನೆಯ ದಾಳಿ, ರಾತ್ರೋ ರಾತ್ರಿ ಶುರುವಾದ ಆಪರೇಷನ್ ಸಿಂದೂರದ ಫೋಟೋಸ್

ಆಪರೇಷನ್ ಸಿಂದೂರ ಫೋಟೋಸ್: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ಥಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯಲ್ಲಿದ್ದ 9 ಉಗ್ರ ತಾಣಗಳ ಮೇಲೆ ಭಾರತೀಯ ಸೇನೆ ಬುಧವಾರ ನಸುಕಿನ ವೇಳೆ ನಿಶ್ಚಿತ ದಾಳಿ ನಡೆಸಿದೆ. ರಾತ್ರೋ ರಾತ್ರಿ ಶುರುವಾದ ಆಪರೇಷನ್ ಸಿಂದೂರದ ಫೋಟೋಸ್ ಇಲ್ಲಿದೆ.

ಪಾಕಿಸ್ತಾನ, ಪಿಒಕೆಯ 9 ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯ ಬುಧವಾರ (ಮೇ 7) ನಸುಕಿನ ವೇಳೆ ದಾಳಿ ಶುರುಮಾಡಿದೆ. ರಾತ್ರೋ ರಾತ್ರಿ ಕಾರ್ಯಾಚರಣೆಯಿಂದ ಪಾಕಿಸ್ತಾನ ಬೆದರಿದ್ದು, ಏನಾಗುತ್ತಿದೆ ಎಂಬುದು ಅರಿವಾಗುವ ಮೊದಲೇ ಉಗ್ರ ನೆಲೆಗಳು ಕೆಲವು ನಾಶವಾಗಿವೆ ಎಂದು ಹೇಳಲಾಗುತ್ತಿದೆ. ಆಪರೇಷನ್ ಸಿಂದೂರದ ಫೋಟೋಸ್ ಇಲ್ಲಿದೆ.
icon

(1 / 10)

(REUTERS)

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯ ರಾಜಧಾನಿ ಮುಜಾಫರಾಬಾದ್‌ನ ನಗರದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿರುವ ಭದ್ರತಾ ಪಡೆಯ ಒಂದು ನೋಟ. ಇದು ಮೇ 7ರ ತಡರಾತ್ರಿಯ ಚಿತ್ರ ಎಂದು ಎಎಫ್‌ಪಿ ಉಲ್ಲೇಖಿಸಿದೆ.
icon

(2 / 10)

(HT_PRINT / AFP)

ಆಪರೇಷನ್ ಸಿಂದೂರ: ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ರಾಜಧಾನಿ ಮುಜಾಫರಬಾದ್‌ನ ನಿಶ್ಚಿತ ಗುರಿ ಮೇಲೆ ಭಾರತ ಬುಧವಾರ (ಮೇ 7) ನಸುಕಿನ ವೇಳೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಹೇಳಿದೆ. ಇದೇ ವೇಳೆ, ಅಲ್ಲಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಎಫ್‌ಪಿ ವರದಿ ಹೇಳಿದೆ.
icon

(3 / 10)

(AFP)

ಪಿಒಕೆಯಲ್ಲಿ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬೆನ್ನಿಗೆ, ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಎಂಬ ವಿವರವನ್ನು ಎಎಫ್‌ಪಿ ಚಿತ್ರಸಹಿತ ನೀಡಿದೆ.
icon

(4 / 10)

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ರಾಜಧಾನಿ ಮುಜಾಫರಾಬಾದ್‌ ಪಟ್ಟಣ ಮೇ 6ರ ರಾತ್ರಿ ವೇಳೆ ಈ ರೀತಿ ಗೋಚರಿಸಿತ್ತು. ಈ ಚಿತ್ರವನ್ನು ರಾಯ್ಟರ್ಸ್ ಹಂಚಿಕೊಂಡಿದೆ.
icon

(5 / 10)

ಪಿಒಕೆಯ ಮುಜಾಫರಾಬಾದ್‌ನಲ್ಲಿ ಮೇ 7 ನಸುಕಿನ ವೇಳೆ ಭಾರತದ ಶಂಕಿತ ಕ್ಷಿಪಣಿ ದಾಳಿಯಿಂದ ಕಟ್ಟಡ ಒಂದು ನಾಶವಾಗಿದೆ.ಅದರ ಫೋಟೋವನ್ನು ಸುದ್ದಿ ಸಂಸ್ಥೆ ಎಪಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಸೇನಾ ಸಿಬ್ಬಂದಿ ಕಟ್ಟಡದ ಅವಶೇಷವನ್ನು ಪರಿಶೀಲಿಸುತ್ತಿರುವ ದೃಶ್ಯವಿದೆ.
icon

(6 / 10)

(AP)

ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್‌ನ ಸಮೀಪ ನಿಶ್ಚಿತ ಕಟ್ಟಡದ ಮೇಲೆ ಭಾರತದ ಶಂಕಿತ ಕ್ಷಿಪಣಿ ದಾಳಿಯ ಬಳಿಕ ಅಲ್ಲಿನ ಸ್ಥಳೀಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ದಾಳಿ ಹಾನಿ ಪರಿಶೀಲಿಸುತ್ತಿದ್ದ ದೃಶ್ಯದ ಚಿತ್ರವನ್ನು ಸುದ್ದಿ ಸಂಸ್ಥೆ ಎಪಿ ಹಂಚಿಕೊಂಡಿದೆ. ಮೇ 7 ರಂದು ನಸುಕಿನ ವೇಳೆ ಆಪರೇಷನ್ ಸಿಂದೂರ ನಡೆಸಿರುವುದಾಗಿ ಭಾರತ ಸರ್ಕಾರ ಈಗಾಗಲೇ ಹೇಳಿಕೆ ನೀಡಿದೆ.
icon

(7 / 10)

ಭಾರತದ ಶಂಕಿತ ಕ್ಷಿಪಣಿ ದಾಳಿಗೆ ಮುಜಾಫರಬಾದ್‌ನಲ್ಲಿ ಧ್ವಂಸವಾಗಿರುವ ಕಟ್ಟಡ ಅವಶೇಷನಗಳ ನಡುವೆ ಸ್ಥಳೀಯರು ಏನೋ ಹುಡುಕುತ್ತಿರುವ ದೃಶ್ಯದ ಚಿತ್ರವನ್ನು ಸುದ್ದಿ ಸಂಸ್ಥೆ ಎಪಿ ಹಂಚಿಕೊಂಡಿದೆ.
icon

(8 / 10)

ವೈಮಾನಿಕ ದಾಳಿಯ ಸುಳಿವು ಸಿಕ್ಕ ಕಾರಣ ಬುಧವಾರ (ಮೇ 7) ನಸುಕಿನ ವೇಳೆ ಮುಜಾಫರಾಬಾದ್‌ನ ಪಟ್ಟಣವನ್ನು ಸಂಪೂರ್ಣ ಕತ್ತಲು ಮಾಡಲಾಗಿತ್ತು. ರಾಯ್ಟರ್ಸ್ ಈ ಫೋಟೋವನ್ನು ಹಂಚಿಕೊಂಡಿದೆ.
icon

(9 / 10)

ಶಂಕಿತ ಕ್ಷಿಪಣಿ ದಾಳಿ ನಡೆದ ಕಟ್ಟಡದ ಸಮೀಪ ಪಾಕಿಸ್ತಾನದ ಭದ್ರತಾ ಪಡೆ ಸಿಬ್ಬಂದಿ, ಸ್ಥಳೀಯರು, ಮಾಧ್ಯಮ ಪ್ರತಿನಿಧಿಗಳು ಸೇರಿಕೊಂಡ ನೋಟವನ್ನು ಸುದ್ದಿ ಸಂಸ್ಥೆ ಎಪಿ ಹಂಚಿಕೊಂಡಿದೆ.
icon

(10 / 10)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು