ODI World Cup: 2019ರ ವಿಶ್ವಕಪ್ ನಂತರ ಏಕದಿನದಲ್ಲಿ ಅಧಿಕ ಶತಕ ಸಿಡಿಸಿದ ಭಾರತದ ಆಟಗಾರರು ಇವರೇ; ಸೆಂಚುರಿ ಬರ ಎದುರಿಸಿದ್ದ ಕೊಹ್ಲಿಯೇ ಮುಂದು
- Most Century In Odis After World Cup 2019: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಎಲ್ಲಾ ತಂಡಗಳು ಸಹ ಭರ್ಜರಿ ತಯಾರಿಯಲ್ಲಿ ನಿರತವಾಗಿವೆ. ನಾವಿಂದು 2019ರ ಏಕದಿನ ವಿಶ್ವಕಪ್ ಬಳಿಕ ಅತಿ ಹೆಚ್ಚು ಶತಕ ಗಳಿಸಿದ ಭಾರತ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
- Most Century In Odis After World Cup 2019: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಎಲ್ಲಾ ತಂಡಗಳು ಸಹ ಭರ್ಜರಿ ತಯಾರಿಯಲ್ಲಿ ನಿರತವಾಗಿವೆ. ನಾವಿಂದು 2019ರ ಏಕದಿನ ವಿಶ್ವಕಪ್ ಬಳಿಕ ಅತಿ ಹೆಚ್ಚು ಶತಕ ಗಳಿಸಿದ ಭಾರತ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
(1 / 7)
ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಸಜ್ಜಾಗುತ್ತಿದೆ. 2011ರ ಬಳಿಕ ಅಂದರೆ 12 ವರ್ಷಗಳ ನಂತರ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿದ್ದು, ಭಾರತೀಯ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆದರೆ, 2019ರ ಏಕದಿನ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಬಗ್ಗೆ ಈ ಮುಂದೆ ತಿಳಿಯೋಣ.
(2 / 7)
ಶತಕಗಳ ಬರ ಎದುರಿಸಿದ್ದ ವಿರಾಟ್ ಕೊಹ್ಲಿ ಅವರೇ ಈ ಪಟ್ಟಿಯಲ್ಲಿ ಮುಂದಿದ್ದಾರೆ. 2019ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅಧಿಕ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಒಟ್ಟು 39 ಪಂದ್ಯಗಳಲ್ಲಿ 5 ಶತಕ ಬಾರಿಸಿದ್ದಾರೆ.
(3 / 7)
ವಿರಾಟ್ ನಂತರದ ಸ್ಥಾನದಲ್ಲಿ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಸ್ಥಾನ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್ನಲ್ಲಿರುವ ಗಿಲ್ ನ್ಯೂಜಿಲೆಂಡ್ ವಿರುದ್ಧದ ದ್ವಿಶತಕ ಸೇರಿದಂತೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 4 ಶತಕ (2019ರ ಏಕದಿನ ವಿಶ್ವಕಪ್ ನಂತರ) ಸಿಡಿಸಿದ್ದಾರೆ.
(4 / 7)
2019ರ ವಿಶ್ವಕಪ್ ಬಳಿಕ ಕೆಎಲ್ ರಾಹುಲ್ 3 ಶತಕ ಸಿಡಿಸಿದ್ದಾರೆ. ರಾಹುಲ್ ಒಟ್ಟು 31 ಏಕದಿನಗಳಲ್ಲಿ ಕಾಣಿಸಿಕೊಂಡಿದ್ದು, 3 ಶತಕ ಸಿಡಿಸಿದ್ದಾರೆ. ಆದಾಗ್ಯೂ, 2020 ರಿಂದ ಹೆಚ್ಚು ಗಾಯದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಅವಕಾಶ ಪಡೆದಿದ್ದೇ ಕಡಿಮೆ. ಒಂದು ವೇಳೆ ಫಿಟ್ ಆಗಿದ್ದರೆ, ಅವರ ಬ್ಯಾಟ್ನಿಂದ ಇನ್ನಷ್ಟು ಶತಕಗಳು ಹರಿದು ಬರುತ್ತಿದ್ದವು ಎಂಬುದರಲ್ಲಿ ಯಾವುದೇ ಅಚ್ಚರಿ ಇಲ್ಲ.
(5 / 7)
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಸಿಡಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೆಗಾ ಟೂರ್ನಿಯ ಬಳಿಕ ಸಿಡಿಸಿದ್ದು, 3 ಶತಕವಷ್ಟೆ. ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಹಿಟ್ಮ್ಯಾನ್, 3 ಶತಕಗಳಿಗೆ ಸುಸ್ತಾದರು.
(6 / 7)
ಈ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಐದನೇ ಸ್ಥಾನದಲ್ಲಿದ್ದಾರೆ. ಅಯ್ಯರ್ ಟೀಂ ಇಂಡಿಯಾ ಪರ 2019ರ ವಿಶ್ವಕಪ್ ನಂತರ ಒಟ್ಟು 2 ಶತಕ ಬಾರಿಸಿದ್ದಾರೆ. ಆದಾಗ್ಯೂ, ಅವರ ಪ್ರದರ್ಶನವು ಅತ್ಯಂತ ಸ್ಥಿರವಾಗಿದೆ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅಯ್ಯರ್, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ 2023 ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿದೆ.
(7 / 7)
ಏಕದಿನ ವಿಶ್ವಕಪ್ 2023 ಹತ್ತಿರ ಬರುತ್ತಿದೆ. ಭಾರತದ ಆಟಗಾರರು ತವರಿನಲ್ಲಿ ಆರ್ಭಟಿಸುವ ನಿರೀಕ್ಷೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಮಧ್ಯಮ ಕ್ರಮಾಂಕದ ಆಸ್ತಿ ಎಂದೇ ಕರೆಸಿಕೊಳ್ಳುವ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಫಿಟ್ನೆಸ್ ಕುರಿತು ವರದಿ ಬಂದಿಲ್ಲ. ಅವರು ಕೂಡ ರಿಕವರ್ ಆಗಲಿ, ಇನ್ನಷ್ಟು ಶತಕಗಳನ್ನು ಸಿಡಿಸಿ ಭಾರತಕ್ಕೆ ಟ್ರೋಫಿ ಗೆದ್ದುಕೊಡಲಿ ಎಂಬುದು ನಮ್ಮೆಲ್ಲರ ಆಶಯ.
ಇತರ ಗ್ಯಾಲರಿಗಳು