ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ತಿರಸ್ಕರಿಸಿದ್ದ ಈ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್
ನ್ಯಾಷನಲ್ ಕ್ರಷ್, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಚಂದನವನದಿಂದ ಬಾಲಿವುಡ್‌ವರೆಗೆ ಆಕೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಆಕೆ ತಿರಸ್ಕರಿಸಿದ್ದ ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿವೆ.
(1 / 9)
ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದ ರಶ್ಮಿಕಾ ಮಂದಣ್ಣಗೆ ಈಗ ಬಾಲಿವುಡ್‌ನಲ್ಲೂ ಭಾರಿ ಬೇಡಿಕೆ. ಆಕೆ ಈಗಾಗಲೇ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ, ಮಾತ್ರವಲ್ಲ ಈಕೆ ನಟಿಸಿರುವ ಸಿನಿಮಾಗಳು ಹಿಟ್ ಆಗಿವೆ. ಪುಷ್ಪಾದಂತಹ ಸೂಪರ್ ಡೂಪರ್ ಹಿಟ್ ಚಿತ್ರದಲ್ಲೂ ರಶ್ಮಿಕಾ ನಾಯಕಿ. ಆದರೆ ರಶ್ಮಿಕಾ ಮಂದಣ್ಣ ತಿರಸ್ಕರಿಸಿದ್ದ ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದವು. ನ್ಯಾಷನಲ್ ಕ್ರಶ್ ತಿರಸ್ಕರಿಸಿ, ಬಾಕ್ಸ್ ಆಫೀಸ್‌ನಲ್ಲಿ ಕಂಡ ಚಿತ್ರಗಳು ಯಾವುದು ನೋಡಿ.
(instagram)(2 / 9)
ಮಾಸ್ಟರ್: 2021ರಲ್ಲಿ, ರಶ್ಮಿಕಾ ಮಂದಣ್ಣ ಮಾಸ್ಟರ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದರು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಶ್ಮಿಕಾ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದ ಈ ಚಿತ್ರವನ್ನು ತಿರಸ್ಕರಿಸಿದ್ದರು. ರಶ್ಮಿಕಾ ಒಲ್ಲೆ ಎಂದ ಈ ಚಿತ್ರಕ್ಕೆ ಮಾಳವಿಕಾ ಮೋಹನ್ ಆಯ್ಕೆಯಾಗುತ್ತಾರೆ.
(instagram)(3 / 9)
ಶಾಹಿದ್ ಕಪೂರ್ ನಟನೆಯ ‘ಜೆರ್ಸಿ‘ ಚಿತ್ರದಲ್ಲಿ ಶಾಹಿದ್ ಕಪೂರ್ ಪತ್ನಿ ವಿದ್ಯಾ ತಲ್ವಾರ್ ಪಾತ್ರದಲ್ಲಿ ನಟಿಸಲು ರಶ್ಮಿಕಾಗೆ ಆಫರ್ ಬಂದಿತ್ತು. ಆದರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದ ಕಾರಣ, ರಶ್ಮಿಕಾ ಆ ಚಿತ್ರವನ್ನು ತಿರಸ್ಕರಿಸಿದರು. ನಂತರ ಈ ಚಿತ್ರಕ್ಕೆ ಮೃಣಾಲ್ ಠಾಕೂರ್ ಆಯ್ಕೆಯಾಗುತ್ತಾರೆ.
(instagram)(4 / 9)
ಬೀಸ್ಟ್: ದಳಪತಿ ವಿಜಯ್ ನಟನೆಯ ಬೀಸ್ಟ್ ಚಿತ್ರಕ್ಕೂ ರಶ್ಮಿಕಾ ಮಂದಣ್ಣಗೆ ಆಫರ್ ಬಂದಿತ್ತು. ರಶ್ಮಿಕಾ ಈ ಆಫರ್ ನಿರಾಕರಿಸಿದ್ದ ಕಾರಣ ಪೂಜಾ ಹೆಗ್ಡೆ ಆಯ್ಕೆಯಾಗುತ್ತಾರೆ.
(instagram)(5 / 9)
ಗೇಮ್ ಚೇಂಜರ್: ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರಕ್ಕೂ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಅವಕಾಶವಿತ್ತು. ಆದರೆ ಆಕೆ ತಿರಸ್ಕರಿಸಿದ್ದ ಕಾರಣ ಕಿಯಾರಾ ಅಡ್ವಾಣಿ ಈ ಚಿತ್ರಕ್ಕೆ ನಾಯಕಿಯಾಗುತ್ತಾರೆ.
(instagram)(6 / 9)
ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕೂ ಮೊದಲು, ಸಂಜಯ್ ಲೀಲಾ ಬನ್ಸಾಲಿ ಒಂದು ಚಿತ್ರ ಮಾಡುತ್ತಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಜೊತೆ ರಣದೀಪ್ ಹೂಡಾ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ ರಶ್ಮಿಕಾ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ಆಕೆ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ, ಅಲ್ಲದೇ ಈ ಚಿತ್ರವು ಸೆಟ್ಟೇರಲಿಲ್ಲ.
(instagram)(7 / 9)
ರಶ್ಮಿಕಾ ಮಂದಣ್ಣ ಕನ್ನಡ ‘ಕಿರಿಕ್ ಪಾರ್ಟಿ‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಿರಿಕ್ ಪಾರ್ಟಿ ಹಿಂದೆ ರಿಮೇಕ್‌ನಲ್ಲೂ ನಟಿಸುವಂತೆ ರಶ್ಮಿಕಾ ಅವರಿಗೆ ಕೇಳಲಾಗಿತ್ತು. ಆದರೆ ಆಕೆ ನಿರಾಕರಿಸಿದ್ದರು ಎಂದು ಹೇಳಲಾಗುತ್ತದೆ.
(instagram)(8 / 9)
ಸಲ್ಮಾನ್ ಖಾನ್ ಜೊತೆ ‘ಸಿಕಂದರ್‘ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ರಶ್ಮಿಕಾ ಅವರ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಅವರು ಆಯುಷ್ಮಾನ್ ಖುರಾನಾ ಜೊತೆ ಹಾರರ್ ಕಾಮಿಡಿ ಸಿನಿಮಾ ‘ಥಮಾ‘ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
(instagram)ಇತರ ಗ್ಯಾಲರಿಗಳು