Soma Pradosh Vrat: ಇಂದು ವರ್ಷದ ಮೊದಲ ಸೋಮ ಪ್ರದೋಷ ವ್ರತ; ಶಿವ ಪಾರ್ವತಿ ಇಬ್ಬರನ್ನೂ ಒಲಿಸಿಕೊಳ್ಳಲು ಈ ರೀತಿ ಪೂಜಿಸಿ
Soma Pradosha Vrat 2024: ಇಂದು ಶಿವನ ಭಕ್ತರು ಸೋಮ ಪ್ರದೋಷ ವ್ರತ ಆಚರಿಸುತ್ತಿದ್ದಾರೆ. ಸೋಮ ಪ್ರದೋಷ ಪೂಜೆ ಮಾಡಿದರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಈ ವರ್ಷದ ಮೊದಲ ಸೋಮ ಪ್ರದೋಷ ಪೂಜೆ ಇದಾಗಿದ್ದು, ಈ ದಿನ ಶಿವನನ್ನು ಯಾವ ರೀತಿ ಆರಾಧಿಸಬೇಕು ಎಂದು ತಿಳಿಯಿರಿ.
(1 / 6)
ಸೋಮ ಪ್ರದೋಷ ವ್ರತವನ್ನು ಆಚರಿಸುವುದರಿಂದ ಭಕ್ತರು ಎಲ್ಲಾ ಸಂಕಷ್ಟಗಳಿಂದ ಪಾರಾಗುತ್ತಾರೆ. ಅವರ ಮನಸ್ಸಿನ ಆಸೆಗಳೆಲ್ಲವೂ ಈಡೇರುತ್ತದೆ ಎಂದು ನಂಬಲಾಗಿದೆ. ಬಹಳಷ್ಟು ಜನರು ಈ ದಿನ ಉಪವಾಸ ಆಚರಿಸುತ್ತಾರೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವವರಿಗೆ ಅವರು ಬಯಸಿದ ಜೀವನ ಸಂಗಾತಿ ಸಿಗುತ್ತಾರೆ ಎಂದು ನಂಬಲಾಗಿದೆ.
(2 / 6)
ಸೋಮ ಪ್ರದೋಷ ದಿನದಂದು ಉಪವಾಸ ಮಾಡುವುದರಿಂದ ಮನೆಯಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ದಂಪತಿ ನಡುವೆ ಪ್ರೀತಿ ಹೆಚ್ಚಲಿದೆ, ಸಂತಾನ ಲಾಭ ದೊರೆಯಲಿದೆ ಶಿವನು ನಿಮಗೆ ಸದಾ ಕಾಲ ಅನುಗ್ರಹ ನೀಡುತ್ತಾನೆ.
(3 / 6)
ಈ ದಿನ ಶಿವನಿಗೆ ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡುವುದು ಬಹಳ ಶುಭ. ಈ ದಿನ ಶಿವನಿಗೆ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಬೇಕು. ಪಂಚಾಮೃತವನ್ನು ಸಮರ್ಪಿಸಬೇಕು.
(5 / 6)
ಈ ದಿನ ಶಿವನಿಗೆ ಬಿಳಿ ಬಟ್ಟೆಯನ್ನು ಅರ್ಪಿಸಬೇಕು. ಜೊತೆಗೆ ಪಾರ್ವತಿಗೆ ಹಳದಿ ವಸ್ತ್ರಗಳನ್ನು ಅರ್ಪಿಸಬೇಕು. ಇದು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ಹೆಚ್ಚಿಸುತ್ತದೆ.
ಇತರ ಗ್ಯಾಲರಿಗಳು