ರಕ್ಷಾ ಬಂಧನ 2024: ರಾಖಿ ಹಬ್ಬಕ್ಕೆ ನಿಮ್ಮ ಪ್ರೀತಿಯ ಸಹೋರನಿಗೆ ಈ ಪೋಸ್ಟರ್‌ಗಳ ಮೂಲಕ ಶುಭ ಹಾರೈಸಿ
ಸಹೋದರ-ಸಹೋದರಿಯರ ಬಾಂಧವ್ಯದ ರಕ್ಷಾ ಬಂಧನ ಹಬ್ಬಕ್ಕೆ ಒಂದೇ ದಿನ ಬಾಕಿ ಇದೆ. ಈ ಬಾರಿ ಅಣ್ಣ-ತಮ್ಮನಿಗೆ ಯಾವ ರೀತಿ ರಾಖಿ ಕಟ್ಟಬಹುದು ಎಂದು ಸಹೋದರಿಯರು ಮೊದಲೇ ಪ್ಲ್ಯಾನ್ ಮಾಡಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
(1 / 8)
ಹಾಗೇ ದೂರದಲ್ಲಿರುವ ಸಹೋದರರಿಗೆ ಕೊರಿಯರ್ ಮೂಲಕ ರಾಖಿ, ಉಡುಗೊರೆಗಳನ್ನು ಕಳಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಹಬ್ಬದಂದು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ನಿಮ್ಮ ಪ್ರೀತಿಯ ಸಹೋದರರಿಗೆ ರಾಖಿ ಹಬ್ಬಕ್ಕೆ ಈ ರೀತಿ ವಿಶ್ ಮಾಡಿ. (PC: Canva)
(2 / 8)
ಜೀವನದುದ್ದಕ್ಕೂ ನನಗೆ ರಕ್ಷೆಯಾಗಿ ನಿಂತು, ನನ್ನ ಸಂತೋಷ, ಸಾಧನೆಗೆ ಬೆನ್ನುಲುಬಾಗಿ ನಿಂತ ಸಹೋದರನಿಗೆ ರಕ್ಷಾ ಬಂಧನದ ಶುಭಾಶಯಗಳು.
(4 / 8)
ಪ್ರೀತಿಯ ಸಹೋದರನಿಗೆ ರಕ್ಷಾ ಬಂಧನದ ಶುಭಾಶಯಗಳು. ದೇವರು ನಿನಗೆ ಸಂತೋಷ, ಯಶಸ್ಸು, ಆರೋಗ್ಯ ಆಯಸ್ಸು ನೀಡಿ ಆಶೀರ್ವದಿಸಲಿ.
(5 / 8)
ನಿಮ್ಮಂಥ ಸಹೋದರನನ್ನು ಪಡೆದಿರುವ ನಾವೇ ಪುಣ್ಯವಂತರು. ರಕ್ಷಾ ಬಂಧನದ ಶುಭ ಹಾರೈಕೆಗಳು. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ.
(6 / 8)
ರಾಖಿ ಎಂಬ ಈ ಪವಿತ್ರ ರಕ್ಷೆಯು ನಮ್ಮ ಬಾಂಧವ್ಯವನ್ನು ಬಲಪಡಿಸಲಿ. ನಿಮ್ಮ ಜೀವನದಲ್ಲಿ ಎಲ್ಲಾ ಶುಭವಾಗಲಿ. ನಿಮಗೆ ರಕ್ಷಾ ಬಂಧನದ ಶುಭಾಶಯಗಳು.
(7 / 8)
ಬಾಲ್ಯದ ಸಿಹಿ ನೆನಪುಗಳು ಎಂದೆಂದಿಗೂ ಶಾಶ್ವತವಾಗಿರಲಿ, ನಿನ್ನ ಆಶೀರ್ವಾದ, ರಕ್ಷೆ ಸದಾ ನನಗಿರಲಿ, ಪ್ರೀತಿಯ ಸಹೋರನಿಗೆ ರಕ್ಷಾ ಬಂಧನದ ಶುಭಾಶಯಗಳು.
ಇತರ ಗ್ಯಾಲರಿಗಳು