ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆತು ಸಂತೋಷದ ಜೀವನ ನಡೆಸಲು ದೇವಶಯನಿ ಏಕಾದಶಿಯಂದು ಈ ಪರಿಹಾರಗಳನ್ನು ಕೈಗೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆತು ಸಂತೋಷದ ಜೀವನ ನಡೆಸಲು ದೇವಶಯನಿ ಏಕಾದಶಿಯಂದು ಈ ಪರಿಹಾರಗಳನ್ನು ಕೈಗೊಳ್ಳಿ

ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆತು ಸಂತೋಷದ ಜೀವನ ನಡೆಸಲು ದೇವಶಯನಿ ಏಕಾದಶಿಯಂದು ಈ ಪರಿಹಾರಗಳನ್ನು ಕೈಗೊಳ್ಳಿ

ಭಗವಾನ್ ವಿಷ್ಣುವು ನಿದ್ರೆಗೆ ಜಾರುವ ಸಮಯವನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ 4 ತಿಂಗಳ ಕಾಲ ಶುಭ ಕಾರ್ಯಗಳಿಗೆ ನಿಷೇಧವಿದೆ. ಇದನ್ನು ಚಾತುರ್ಮಾಸ ಎಂದು ಕೂಡಾ ಕರೆಯಲಾಗುತ್ತದೆ. ದೇವಶಯನಿ ಏಕಾದಶಿ ದಿನವನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ.

ನಂಬಿಕೆಯ ಪ್ರಕಾರ, ದೇವಶಯನಿ ಏಕಾದಶಿ ದಿನ ಉಪವಾಸ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು. ಭಕ್ತರು ಈ ದಿನ ಭಗವಾನ್‌ ವಿಷ್ಣು ಹಾಗೂ ವಿಷ್ಣುವಿನ ಅವತಾರವಾದ ವೆಂಕಟೇಶ್ವರನನ್ನು ಪೂಜಿಸುತ್ತಾರೆ. 
icon

(1 / 6)

ಅಭಿಷೇಕ: ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಬೇಕೆಂದರೆ ದೇವಶಯನಿ ಏಕಾದಶಿಯ ದಿನ ದೇವರಿಗೆ ಶಂಖದ ನೀರಿನಿಂದ ಅಭಿಷೇಕ ಮಾಡಿ ಕುಂಕುಮಾರ್ಚನೆ ಮಾಡಿ. ಹೀಗೆ ಮಾಡುವುದರಿಂದ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ.
icon

(2 / 6)

ಮುದ್ರಾ ಪರಿಹಾರ: ದೇವಶಯನಿ ಏಕಾದಶಿಯ ರಾತ್ರಿ, ವಿಷ್ಣುವಿನ ಫೋಟೋ  ಬಳಿ ಒಂದು ರೂಪಾಯಿ ನಾಣ್ಯವನ್ನು ರಾತ್ರಿಯಿಡೀ ಇರಿಸಿ. ಮರುದಿನ ಬೆಳಗ್ಗೆ ಈ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಹಣದ ಪೆಟ್ಟಿಗೆಯಲ್ಲಿ ಅಥವಾ ಸುರಕ್ಷಿತವಾಗಿ ಇರಿಸಿ. ಇದರಿಂದ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುತ್ತದೆ.  ಎಂದಿಗೂ ಹಣದ ಕೊರತೆ ಬರುವುದಿಲ್ಲ ಎಂದು ನಂಬಲಾಗಿದೆ.
icon

(3 / 6)

ತುಳಸಿ ಪೂಜೆ: ವೈವಾಹಿಕ ಜೀವನ ಸಂತೋಷದಿಂದ ಕೂಡಿರಲು ದೇವಶಯನಿ ಏಕಾದಶಿಯಂದು ತುಳಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚಿ. ತುಳಸಿಯನ್ನು ಪ್ರಾರ್ಥಿಸಿ ಆರತಿ ಮಾಡಿ. ಓಂ ನಮೋ ಭಗವತೇ ವಾಸುದೇವ ನಮ: ಎಂಬ ಮಂತ್ರವನ್ನು ಜಪಿಸುತ್ತಾ 11 ಬಾರಿ ಪ್ರದಕ್ಷಿಣೆ ಮಾಡಿ. ಈ ರೀತಿ ಮಾಡುವುದರಿಂದ ಪತಿ-ಪತ್ನಿ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. 
icon

(4 / 6)

ವೃತ್ತಿ ಪ್ರಗತಿ: ಏಕಾದಶಿಯಂದು ನಿರ್ಗತಿಕರಿಗೆ ಹಣ, ಆಹಾರ, ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು. ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿರುವ ಮಕ್ಕಳ ವಿಚಾರದಲ್ಲಿ ದೇವಶಯನಿ ಏಕಾದಶಿಯಂದು ಈ ಪರಿಹಾರ ಮಾಡಿದರೆ ಮಕ್ಕಳ ಏಕಾಗ್ರತೆ ಹೆಚ್ಚಿ, ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು