Makar Sankranti 2025: ಮಕರ ಸಂಕ್ರಾಂತಿಯಂದು ಮಾಡುವ ದಾನದ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
- Makar Sankranti 2025: ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ದಿನ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ದೇಶಾದ್ಯಂತ ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಸಂಕ್ರಾಂತಿಯನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ.
- Makar Sankranti 2025: ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ದಿನ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ದೇಶಾದ್ಯಂತ ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಸಂಕ್ರಾಂತಿಯನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ.
(1 / 7)
ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಸಂಬಂಧಿಸಿದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಸೂರ್ಯನು ಸಂಕ್ರಾಂತಿಯಂದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.
(2 / 7)
ಮಕರ ಸಂಕ್ರಾಂತಿಯಂದು ಸ್ನಾನ, ಧ್ಯಾನ ಮತ್ತು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪುರಾಣಗಳು ಮಕರ ಸಂಕ್ರಾಂತಿಯನ್ನು ದೇವತೆಗಳ ದಿನವೆಂದು ವರ್ಣಿಸುತ್ತವೆ. ಈ ದಿನದಂದು ಮಾಡಿದ ದಾನಗಳು ನೂರು ಪಟ್ಟು ನಮಗೆ ಹಿಂತಿರುಗುತ್ತವೆ ಎಂದು ನಂಬಲಾಗಿದೆ.
(3 / 7)
ಮಕರ ಸಂಕ್ರಾಂತಿಯಂದು ಶುದ್ಧ ತುಪ್ಪ, ಆಹಾರ ಮತ್ತು ಹೊದಿಕೆಗಳನ್ನು ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈದು ಉತ್ತರಾಯಣದ ಆರಂಭವಾಗಿದ್ದು ಭೀಷ್ಮನು ದಕ್ಷಿಣಾಯನದಲ್ಲಿ ದೇಹತ್ಯಜಿಸಲು ಬಯಸದೆ ಉತ್ತರಾಯಣದ ಅಷ್ಟಮಿ ದಿನ ಪ್ರಾಣತ್ಯಾಗ ಮಾಡುತ್ತಾನೆ.
(4 / 7)
ಸಂಕ್ರಾಂತಿ ಹಬ್ಬದಂದು ನೆರೆಹೊರೆಯವರಿಗೆ, ಸಂಬಂಧಕರಿಗೆ ಎಳ್ಳು ದಾನ ಮಾಡಿದರೆ ಶುಭ ಎಂದು ನಂಬಲಾಗಿದೆ. ಅದರೆ ಕೇವಲ ಎಳ್ಳು ತೆಗೆದುಕೊಳ್ಳುವುದರಿಂದ ದೋಷ ಎಂಬ ಕಾರಣಕ್ಕೆ ಎಳ್ಳಿನ ಜೊತೆ ಬೆಲ್ಲ, ಶೇಂಗಾ, ಕೊಬ್ಬರಿ, ಕಡಲೆಯನ್ನು ಸೇರಿಸಿ ಕೊಡಲಾಗುತ್ತದೆ.
(5 / 7)
ಹಬ್ಬದಂದು ಎಳ್ಳು, ಬೆಲ್ಲ ದಾನ ಮಾಡಿದರೆ ಶನಿ ಹಾಗೂ ಸೂರ್ಯದೇವರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ದಾನ ಧರ್ಮ ಮಾಡುವುದರಿಂದ ಪೂರ್ವಜರು ಕೂಡಾ ಸಂತುಷ್ಟರಾಗಿ ನಿಮ್ಮ ಜೀವನದ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.
(6 / 7)
ಎಳ್ಳುದಾನ ಮಾಡುಡುವುದು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಹಾರಿಸಲಾಗುತ್ತದೆ. ರಾಸುಗಳಿಗೆ ಅಲಂಕಾರ ಮಾಡಿ ಸಂಜೆ ಸಮಯದಲ್ಲಿ ಕಿಚ್ಚು ಹಾಯಿಸಲಾಗುತ್ತದೆ.
(Freepik )ಇತರ ಗ್ಯಾಲರಿಗಳು