ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್ ಫೋಟೋ ಶೂಟ್ ಮಾಡಿಸುವ ಪ್ಲ್ಯಾನ್ ಇದ್ರೆ ಇಲ್ಲಿದೆ ಐಡಿಯಾ
ಶೋಭಾಕೃತ್ ನಾಮ ಸಂವತ್ಸರ ಕಳೆದು ಕ್ರೋಧಿನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಈ ಸಂವತ್ಸರದಲ್ಲಿ ಎಂದಿನಂತೆ ಸಾಲು ಸಾಲು ಹಬ್ಬಗಳ ರಾಶಿ ಇದೆ. ಮೊದಲ ಹಬ್ಬವಾಗಿ ಯುಗಾದಿ ಆಚರಿಸಲಾಗುತ್ತಿದೆ.
(1 / 10)
ಏಪ್ರಿಲ್ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.
(2 / 10)
ಜನವರಿ 22 ರಂದು ಉತ್ತರ ಪ್ರದೇಶದಲ್ಲಿನ ಅಯೋಧ್ಯೆ ರಾಮಮಂದಿರವನ್ನು ಅದ್ಧೂರಿಯಾಗಿ ಲೋಕಾಪರ್ಣೆ ಮಾಡಲಾಗಿತ್ತು. ಇದೇ ಸಂಭ್ರಮದಲ್ಲಿ ಈ ಬಾರಿ ರಾಮನವಮಿಯನ್ನು ಇನ್ನಷ್ಟು ಸಡಗರದಿಂದ ಆಚರಿಸಲಾಗುತ್ತಿದೆ.
(3 / 10)
ಭಕ್ತರು ಮನೆಯಲ್ಲಿ, ದೇವಸ್ಥಾನಕ್ಕೆ ತೆರಳಿ ಶ್ರೀರಾಮನ ಪೂಜೆ ಮಾಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ ಇನ್ನೂ ಕೆಲವರು ಭಕ್ತರು ರಘುರಾಮನ ಮೇಲಿನ ಭಕ್ತಿಯನ್ನು ತಮ್ಮ ಕಂದನಿಗೆ ಫೋಟೋಶೂಟ್ ಮಾಡಿಸುವ ಮೂಲಕ ಪ್ರದರ್ಶಿಸುತ್ತಾರೆ. (PC: Meenakshi Bhandare @Pinterest)
(4 / 10)
ಶ್ರೀರಾಮನವಮಿಗೆ ನೀವೂ ಕೂಡಾ ಮಕ್ಕಳಿಗೆ ಫೋಟೋಶೂಟ್ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವೊಂದು ಐಡಿಯಾಗಳಿವೆ ನೋಡಿ. (PC: Meenakshi Bhandare @Pinterest)
(5 / 10)
ಮುದ್ದು ಕಂದಮ್ಮಗಳಿಗೆ ಬಾಲರಾಮನ ಥೀಮ್‌ನಲ್ಲಿ ಫೋಟೋಶೂಟ್ ಮಾಡಿಸುವುದು ಎಲ್ಲಿಲ್ಲದ ಸಂಭ್ರಮ,. (PC: Ramya Bargav @pinterest)
(6 / 10)
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆದ ನಂತರ ಮೊದಲ ಬಾರಿಗೆ ಆಚರಿಸುತ್ತಿರುವ ರಾಮನವಮಿ ಇದ್ದಾಗಿರುವುದರಿಂದ ಎಲ್ಲೆಡೆ ತಯಾರಿ ಜೋರಾಗಿದೆ. (PC: revati garud @interest)
(7 / 10)
ಈ ಬಾರಿ ಅಯೋಧ್ಯೆಯಲ್ಲಿ ಚೈತ್ರ ನವರಾತ್ರಿಯ ಆರಂಭದೊಂದಿಗೆ ಸುಮಾರು 9 ದಿನಗಳ ಕಾಲ ರಾಮನವಮಿ ಸಂಭ್ರಮ ಆರಂಭಗೊಳ್ಳಲಿದೆ. 9ನೇ ದಿನ ಪ್ರಮುಖ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತವೆ. (PC: Sravani Sunitha @pinterest)
(8 / 10)
ಅಯೋಧ್ಯೆಗೆ ಪ್ರತಿದಿನವೂ ಸುಮಾರು 2 ಲಕ್ಷ ಭಕ್ತರು ಆಗಮಿಸುತ್ತಿದ್ದು ರಾಮನವಮಿಯ ದಿನ ಸುಮಾರು 50 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
(9 / 10)
ಶ್ರೀರಾಮನು ಮಹಾವಿಷ್ಣುವಿನ 7ನೇ ಅವತಾರ ಎಂದು ನಂಬಲಾಗಿದೆ. ನವಮಿಯಂದು ರಾಮನು ಅಯೋಧ್ಯೆಯಲ್ಲಿ ಜನಿಸಿದರಿಂದ ಆ ದಿನ ರಾಮನವಮಿ ಎಂದು ಆಚರಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಕೂಡಾ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. (PC: Tejaswini Deshmane @Pinterest)
ಇತರ ಗ್ಯಾಲರಿಗಳು