Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು-indian festival ugadi 2024 10 famous temples you can visit for ugadi tirupati mysuru chamundeshwari goravanahalli prk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು

Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು

  • ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸ ವರ್ಷ. ಈ ಹಬ್ಬದ ದಿನ ಬೇವು-ಬೆಲ್ಲ ಹಂಚುವ ಜೊತೆಗೆ ಬಗೆ ಬಗೆ ತಿನಿಸುಗಳನ್ನು ತಯಾರಿಸುವುದು ವಾಡಿಕೆ. ಯುಗಾದಿ ಹಬ್ಬದಂದು ಪೂಜೆಗೆ, ಆಚರಣೆಗೂ ವಿಶೇಷ ಮಹತ್ವವಿದೆ. ಈ ವರ್ಷದ ಯುಗಾದಿಗೆ ನೀವು ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಈ 10 ದೇಗುಲಗಳಿಗೆ ಪ್ಲಾನ್‌ ಮಾಡಿ. 

ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಬೇವು-ಬೆಲ್ಲ ಹಂಚಿ ಸಂಭ್ರಮದಿಂದ ಆಚರಿಸುವ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ (ಪಂಚಾಂಗ) ಚೈತ್ರ ಮಾಸದ ಮೊದಲ ದಿನದಂದು ಆಚರಿಸುವ ಹಬ್ಬವೇ ಯುಗಾದಿ. ಯುಗಾದಿ ಎಂಬ ಹೆಸರು ಯುಗ ಮತ್ತು ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿದೆ. ಯುಗ ಅಂದರೆ ವರ್ಷ, ಆದಿ ಅಂದರೆ ಆರಂಭ ಎಂದರ್ಥ. ಹೊಸ ಯುಗದ ಆರಂಭವೇ ಯುಗಾದಿ ಹಬ್ಬ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ನಲ್ಲಿ ಗುಡಿ ಪಾಡ್ವಾ ಎಂಬ ಹೆಸರಿನಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 9 ರಂದು (ಮಂಗಳವಾರ) ಹಬ್ಬವನ್ನು ಆಚರಿಸಲಾಗುತ್ತಿದೆ. ಯುಗಾದಿಯಂದು ಮನೆಗಳಲ್ಲಿ ಮಾತ್ರವಲ್ಲವೇ ದೇವಾಲಯಗಳಲ್ಲೂ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತೆ. ಈ ವರ್ಷ ಯುಗಾದಿಗೆ ನೀವು ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ರೆ ಈ 10 ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಿ. ಇಂದೇ ಪ್ಲಾನ್‌ ಮಾಡಿ. 
icon

(1 / 12)

ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ತಿರುಮಲ-ತಿರುಪತಿ: ತಿರುಪತಿ ತಿರುಮಲದಲ್ಲಿರುವ ಪ್ರಖ್ಯಾತ ವೆಂಕಟೇಶ್ವರನ ದೇವಸ್ಥಾನದಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೇಶದ ಶ್ರೀಮಂತ ದೇಗುಲವಾಗಿರುವ ಈ ದೇಗುಲದಲ್ಲಿ ಯುಗಾದಿ ಹಬ್ಬದಂದು ವಿಶೇಷ ಪೂಜಾ-ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ದೇವರಿಗೆ ಹೊಸ ರೇಷ್ಮೆ ವಸ್ತ್ರಗಳನ್ನು ಅರ್ಪಿಸಲಾಗುತ್ತದೆ. ಪ್ರತಿ ವರ್ಷ ಯುಗಾದಿ ಹಬ್ಬದಂದು ‘ಯುಗಾದಿ ಆಸ್ಥಾನಂ’ ಉತ್ಸವವನ್ನು ಕೈಗೊಳ್ಳಲಾಗುತ್ತದೆ. ವೇದ ವಿದ್ವಾಂಸರು, ಅರ್ಚಕರು ಮತ್ತು ಭಕ್ತರ ಸಮ್ಮುಖದಲ್ಲಿ ಮೊದಲ ವಾರ್ಷಿಕ ಉತ್ಸವವನ್ನು ಆಚರಿಸಲಾಗುತ್ತದೆ.
icon

(2 / 12)

3. ಗಣೇಶ ಮಂದಿರ, ಡೊಂಬಿವಲಿ, ಮುಂಬೈ: ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಹೆಸರಿನಲ್ಲಿ ಹೊಸ ವರ್ಷವನ್ನು ಯುಗಾದಿ ದಿನದಂದೇ ಆಚರಿಸಲಾಗುತ್ತದೆ. ಪ್ರತಿ ವರ್ಷ, ಹೊಸ ವರ್ಷದ ಮೊದಲ ದಿನದಂದು, ಮುಂಬೈನ ಡೊಂಬಿವಲಿಯ ಗಣೇಶ ಮಂದಿರದಲ್ಲಿ ಭವ್ಯ ಮೆರವಣಿಗೆಯನ್ನು ಆಯೋಜಿಸುವ ಮೂಲಕ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸುವ ಭಕ್ತರು ಸಂಭ್ರಮದಿಂದ ಪಾಲ್ಗೊಂಡು ಹಬ್ಬಕ್ಕೆ ಹೊಸ ಕಳೆ ತರುತ್ತಾರೆ.
icon

(3 / 12)

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಹಾಪುರ, ಮಹಾರಾಷ್ಟ್ರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿ ದೇವಿಯ ದೇವಸ್ಥಾನವನ್ನು ಕ್ರಿ.ಪೂ 634ರಲ್ಲಿ ಕರ್ಣದೇವ ಚಾಲುಕ್ಯ ಆಳ್ವಿಕೆಯಲ್ಲಿ ನಿರ್ಮಿಸಿದನು. ದೇವಿಯ ಮೂರ್ತಿಯನ್ನು ಕಲ್ಲಿನ ವೇದಿಕೆಯ ಮೇಲೆ ಆರೋಹಿಸಲಾಗಿದೆ. ಕಿರೀಟಧಾರಿ ದೇವಿಯ ಮೂರ್ತಿಯು ರತ್ನದಿಂದ ಮಾಡಲ್ಪಟ್ಟಿದ್ದು, ಸುಮಾರು 40 ಕೆ.ಜಿಯಷ್ಟು ತೂಗುತ್ತದೆ. ಪುರಾತನವಾದ ಈ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಮರಾಠಿಯನ್ನರ ಹೊಸ ವರ್ಷ ಗುಡಿ ಪಾಡ್ವಾದಂದು ದೇವಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜಾ-ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ.
icon

(4 / 12)

ದೊಡ್ಡ ಬಸವನ ಗುಡಿ ದೇವಸ್ಥಾನ, ಬೆಂಗಳೂರು: ದೊಡ್ಡ ಬಸವನ ಗುಡಿ ಅಥವಾ ನಂದಿ ದೇವಸ್ಥಾನ ಎಂದೂ ಕರೆಯಲ್ಪಡುವ ಈ ದೇಗುಲವು ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಭಗವಂತ ಶಿವನಿಗೆ ವಾಹನ ಆಗಿರುವ ಹಿಂದೂ ದೇವತೆಯಾದ ನಂದಿಗೆ ಸಮರ್ಪಿಸಲಾಗಿದೆ. ದಿನನಿತ್ಯದ ಜಂಜಾಟದಿಂದ ಬೇಸತ್ತ ಉದ್ಯಾನನಗರಿಯ ಜನತೆ ಯುಗಾದಿ ಹಬ್ಬದಂದು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಸವರ್ಷದಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ದೂರದೂರಿನ ದೇಗುಲಗಳತ್ತ ಹೋಗಲು ಸಾಧ್ಯವಾಗದ ಭಕ್ತರು ಇಲ್ಲಿ ಭೇಟಿ ನೀಡಿ, ಪೂಜೆ ಸಲ್ಲಿಸಬಹುದು.
icon

(5 / 12)

ದೊಡ್ಡ ಗಣೇಶ ದೇವಸ್ಥಾನ, ಬೆಂಗಳೂರು: ಬುಲ್ ಟೆಂಪಲ್ ಪಕ್ಕದಲ್ಲಿಯೇ ದೊಡ್ಡ ಗಣೇಶ ದೇವಸ್ಥಾನವಿದೆ (ಕನ್ನಡದಲ್ಲಿ ದೊಡ್ಡ ಗಣೇಶ ದೇವಸ್ಥಾನ ಎಂದರ್ಥ). ಈ ದೇವಾಲಯವನ್ನು ಶಕ್ತಿ ಗಣಪತಿ ಮತ್ತು ಸತ್ಯ ಗಣಪತಿ ದೇವಾಲಯ ಎಂದೂ ಕರೆಯುತ್ತಾರೆ. ಗಣೇಶನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಮುಖ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಗಣೇಶನ ಪ್ರತಿಮೆಯು ದೇಶದ ಅತಿದೊಡ್ಡ ಏಕಶಿಲಾ ವಿಗ್ರಹಗಳಲ್ಲಿ ಒಂದಾಗಿದೆ. ಈ ದೇಗುಲದಲ್ಲಿಯೂ ಯುಗಾದಿಯಂದು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.
icon

(6 / 12)

ದೊಡ್ಡ ಗಣೇಶ ದೇವಸ್ಥಾನ, ಬೆಂಗಳೂರು: ಬುಲ್ ಟೆಂಪಲ್ ಪಕ್ಕದಲ್ಲಿಯೇ ದೊಡ್ಡ ಗಣೇಶ ದೇವಸ್ಥಾನವಿದೆ (ಕನ್ನಡದಲ್ಲಿ ದೊಡ್ಡ ಗಣೇಶ ದೇವಸ್ಥಾನ ಎಂದರ್ಥ). ಈ ದೇವಾಲಯವನ್ನು ಶಕ್ತಿ ಗಣಪತಿ ಮತ್ತು ಸತ್ಯ ಗಣಪತಿ ದೇವಾಲಯ ಎಂದೂ ಕರೆಯುತ್ತಾರೆ. ಗಣೇಶನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಮುಖ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಗಣೇಶನ ಪ್ರತಿಮೆಯು ದೇಶದ ಅತಿದೊಡ್ಡ ಏಕಶಿಲಾ ವಿಗ್ರಹಗಳಲ್ಲಿ ಒಂದಾಗಿದೆ. ಈ ದೇಗುಲದಲ್ಲಿಯೂ ಯುಗಾದಿಯಂದು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.(Bangalore tourism)

 ಶ್ರೀಕಾಕುಳಾಂಧ್ರ ಮಹಾವಿಷ್ಣು ದೇವಾಲಯ, ಆಂಧ್ರಪ್ರದೇಶ: ಶ್ರೀಕಾಕುಳಾಂಧ್ರ ಮಹಾವಿಷ್ಣು ದೇವಾಲಯವನ್ನು 1081 ರಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಸುಂದರವಾದ ರಾಜಗೋಪುರವನ್ನು ಹೊಂದಿದೆ. ಪ್ರಖ್ಯಾತ ವಿಷ್ಣು ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಈ ದೇವಸ್ಥಾನವು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಶ್ರೀಕಾಕುಳಂ ಗ್ರಾಮದಲ್ಲಿದೆ. ಯುಗಾದಿ ಹಬ್ಬದಂದು ಭಗವಂತ ವಿಷ್ಣುವಿಗೆ ವಿಶೇಷವಾಗಿ ಸಿಂಗರಿಸಲಾಗುತ್ತದೆ. ಹೀಗಾಗಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
icon

(7 / 12)

 ಶ್ರೀಕಾಕುಳಾಂಧ್ರ ಮಹಾವಿಷ್ಣು ದೇವಾಲಯ, ಆಂಧ್ರಪ್ರದೇಶ: ಶ್ರೀಕಾಕುಳಾಂಧ್ರ ಮಹಾವಿಷ್ಣು ದೇವಾಲಯವನ್ನು 1081 ರಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಸುಂದರವಾದ ರಾಜಗೋಪುರವನ್ನು ಹೊಂದಿದೆ. ಪ್ರಖ್ಯಾತ ವಿಷ್ಣು ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಈ ದೇವಸ್ಥಾನವು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಶ್ರೀಕಾಕುಳಂ ಗ್ರಾಮದಲ್ಲಿದೆ. ಯುಗಾದಿ ಹಬ್ಬದಂದು ಭಗವಂತ ವಿಷ್ಣುವಿಗೆ ವಿಶೇಷವಾಗಿ ಸಿಂಗರಿಸಲಾಗುತ್ತದೆ. ಹೀಗಾಗಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.(tripoto)

ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು: ಕರ್ನಾಟಕದ ಅರಮನೆ ನಗರಿ ಎಂದೇ ಖ್ಯಾತವಾದ ಮೈಸೂರಿನಲ್ಲಿ ದೇವಾಲಯ ಎಂದಾಗ ಥಟ್ಟನೆ ನೆನಪಾಗುವುದೇ ಪ್ರಖ್ಯಾತ ಚಾಮುಂಡೇಶ್ವರಿ ದೇವಸ್ಥಾನ. ದೇಶ-ವಿದೇಶಗಳಿಂದ ಬರುವ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಹಿಂದೂಗಳ ಹೊಸ ವರ್ಷ ಯುಗಾದಿಯಂದು ಇಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ದೇವಿಗೆ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಅಲ್ಲದೆ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವನ್ನು ಮೈಸೂರು ರಾಜಮನೆತನದ ಅರಮನೆಗೆ ಕಳುಹಿಸಲಾಗುತ್ತದೆ. ಇದು ಹಲವಾರು ವರ್ಷಗಳಿಂದ ನಡೆದು ಬಂದ ಆಚರಣೆಯಾಗಿದೆ. ಯುಗಾದಿಯಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
icon

(8 / 12)

 ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ, ತುಮಕೂರು: ತುಮಕೂರು ಜಿಲ್ಲೆಯ ಗೊರವನಹಳ್ಳಿಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನವು ಸಮೃದ್ಧಿ ಮತ್ತು ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಪ್ರತಿದಿನ ದೇವಿಗೆ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಭಕ್ತರು ಸೀರೆ, ಬಳೆಗಳನ್ನು ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಯುಗಾದಿಯಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತದೆ. ಹೀಗಾಗಿ ಹೊಸವರ್ಷದಂದು ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.
icon

(9 / 12)

 ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ, ತುಮಕೂರು: ತುಮಕೂರು ಜಿಲ್ಲೆಯ ಗೊರವನಹಳ್ಳಿಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನವು ಸಮೃದ್ಧಿ ಮತ್ತು ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಪ್ರತಿದಿನ ದೇವಿಗೆ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಭಕ್ತರು ಸೀರೆ, ಬಳೆಗಳನ್ನು ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಯುಗಾದಿಯಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತದೆ. ಹೀಗಾಗಿ ಹೊಸವರ್ಷದಂದು ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.(tripadvisor)

ಕಾಮಾಕ್ಷಿ ದೇವಸ್ಥಾನ, ವಿಜಯನಗರ ಆಂಧ್ರಪ್ರದೇಶ: ಕಾಮಾಕ್ಷಿ ದೇವಿ ಈ ದೇವಸ್ಥಾನದ ಪ್ರಧಾನ ದೇವರು. ದೇವಿಯ ಮೂರ್ತಿ ಕುಳಿತಿರುವ ಭಂಗಿಯಲ್ಲಿದ್ದು, ಈಕೆ ತನ್ನ ನಂಬಿ ಬಂದ ಭಕ್ತರಿಗೆ ಕೃಪೆ, ಕರುಣೆಯನ್ನು ತೋರುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ದೇವಸ್ಥಾನವು 18 ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ದೇವಿಯ ಆಶೀರ್ವಾದ ಪಡೆಯಲು ಯಾತ್ರಾರ್ಥಿಗಳು ದೂರದ ಊರುಗಳಿಂದ ಬರುತ್ತಾರೆ. ಭಕ್ತರ ಇಷ್ಟಾರ್ಥವನ್ನು ಪೂರೈಸುತ್ತಾಳೆ ಎಂದು ನಂಬಲಾಗಿದ್ದು, ಇಲ್ಲಿ ಪ್ರತಿ ವರ್ಷ ಯುಗಾದಿ ದಿನ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಹೊಸ ವರ್ಷ, ಹೊಸ ಕನಸು ಹೊತ್ತ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ.
icon

(10 / 12)

ಕಾಮಾಕ್ಷಿ ದೇವಸ್ಥಾನ, ವಿಜಯನಗರ ಆಂಧ್ರಪ್ರದೇಶ: ಕಾಮಾಕ್ಷಿ ದೇವಿ ಈ ದೇವಸ್ಥಾನದ ಪ್ರಧಾನ ದೇವರು. ದೇವಿಯ ಮೂರ್ತಿ ಕುಳಿತಿರುವ ಭಂಗಿಯಲ್ಲಿದ್ದು, ಈಕೆ ತನ್ನ ನಂಬಿ ಬಂದ ಭಕ್ತರಿಗೆ ಕೃಪೆ, ಕರುಣೆಯನ್ನು ತೋರುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ದೇವಸ್ಥಾನವು 18 ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ದೇವಿಯ ಆಶೀರ್ವಾದ ಪಡೆಯಲು ಯಾತ್ರಾರ್ಥಿಗಳು ದೂರದ ಊರುಗಳಿಂದ ಬರುತ್ತಾರೆ. ಭಕ್ತರ ಇಷ್ಟಾರ್ಥವನ್ನು ಪೂರೈಸುತ್ತಾಳೆ ಎಂದು ನಂಬಲಾಗಿದ್ದು, ಇಲ್ಲಿ ಪ್ರತಿ ವರ್ಷ ಯುಗಾದಿ ದಿನ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಹೊಸ ವರ್ಷ, ಹೊಸ ಕನಸು ಹೊತ್ತ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ.(Wikipedia)

ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ, ಕರ್ನಾಟಕ: ಕರ್ನಾಟಕ ಪ್ರಮುಖ ದೇವಾಲಯಗಳಲ್ಲಿ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲವೂ ಒಂದು. ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾದ ದೇಗುಲ ಇದಾಗಿದೆ. ಯುಗಾದಿ ದಿನದಂದು ಇಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಹೊಸ ವರ್ಷದಂದು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಬಹುದು.
icon

(11 / 12)

ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ, ಕರ್ನಾಟಕ: ಕರ್ನಾಟಕ ಪ್ರಮುಖ ದೇವಾಲಯಗಳಲ್ಲಿ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲವೂ ಒಂದು. ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾದ ದೇಗುಲ ಇದಾಗಿದೆ. ಯುಗಾದಿ ದಿನದಂದು ಇಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಹೊಸ ವರ್ಷದಂದು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಬಹುದು.(Holidify)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(12 / 12)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

ಇತರ ಗ್ಯಾಲರಿಗಳು