ಜರ್ಮನಿ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತ ಹಾಕಿ ತಂಡಕ್ಕೆ ವಿರೋಚಿತ ಸೋಲು; ಕಂಚಿನ ಪದಕಕ್ಕೆ ಸ್ಪೇನ್ ಎದುರು ಸೆಣಸಾಟ
Indian Hockey Team: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡದ ಚಿನ್ನದ ಪದಕದ ಕನಸು ಭಗ್ನಗೊಂಡಿದೆ. ಜರ್ಮನಿಯ ವಿರುದ್ಧದ ಸೆಮಿಫೈನಲ್ನಲ್ಲಿ 3-2ರ ಅಂತರದಿಂದ ಸೋಲು ಕಾಣುವ ಮೂಲಕ 44 ವರ್ಷಗಳ ನಂತರ ಫೈನಲ್ಗೇರಲು ವಿಫಲವಾಯಿತು.
(1 / 8)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಹಾಕಿ ಸ್ಪರ್ಧೆಯ ರೋಮಾಂಚಕ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ತಂಡವು, ಭಾರತ ತಂಡವನ್ನು 3-2 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಫೈನಲ್ಗೆ ಲಗ್ಗೆ ಹಾಕಿದೆ. (AP)
(2 / 8)
ಆದರೆ, 44 ವರ್ಷಗಳ ಬಳಿಕ ಒಲಿಂಪಿಕ್ಸ್ ಫೈನಲ್ ಪ್ರವೇಶಿಸುವ ಭಾರತದ ಕನಸು ನುಚ್ಚು ನೂರಾಯಿತು. ಕೊನೆಯದಾಗಿ 1980ರ ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿ ಚಿನ್ನದ ಪದಕ ಗೆದ್ದಿತ್ತು.(AP)
(3 / 8)
ವಿಶ್ವ ಚಾಂಪಿಯನ್ ಜರ್ಮನಿ ಈಗ ಚಿನ್ನದ ಪದಕದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ಈ ಚಿನ್ನದ ಪದಕದ ಪಂದ್ಯ ಆಗಸ್ಟ್ 8ರ ರಾತ್ರಿ 10.30ಕ್ಕೆ ನಡೆಯಲಿದೆ.(AP)
(4 / 8)
ಇನ್ನು ಸೆಮೀಸ್ನಲ್ಲಿ ಸೋತಿರುವ ಭಾರತ ಮತ್ತು ಸ್ಪೇನ್ ತಂಡಗಳು ಕಂಚಿನ ಪದಕಕ್ಕಾಗಿ ಕಾದಾಟ ನಡೆಸಲಿವೆ. ಭಾರತ ಟೊಕಿಯೊದ ಫಲಿತಾಂಶವನ್ನು ಪುನರಾವರ್ತಿಸಲು ಎದುರು ನೋಡುತ್ತಿದೆ. ಈ ಪಂದ್ಯ ಆಗಸ್ಟ್ 8ರ 5.30ಕ್ಕೆ ನಡೆಯಲಿದೆ.(REUTERS)
(5 / 8)
ಪಂದ್ಯದ ಮೊದಲ 15ನೇ ನಿಮಿಷದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನಿಂದ ಏಶ್ಯನ್ ಜೈಂಟ್ಸ್ ಮೇಲುಗೈ ಸಾಧಿಸಿತು. ಆದರೆ ನಂತರ ಹಲವು ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ಗಳಿಸಲು ಭಾರತ ವಿಫಲವಾಯಿತು.(AP)
(6 / 8)
2ನೇ ಕ್ವಾರ್ಟರ್ನಲ್ಲಿ ಜರ್ಮನಿ ಪರ ಗೊನ್ಜಾಲೊ ಪೀಲಾಟ್ ಗೋಲು ಬಾರಿಸಿದರೆ, ಕ್ರಿಸ್ಟೋಫರ್ ರುಹ್ರ್ ಮತ್ತೊಂದು ಗೋಲು ಬಾರಿಸಿ 2-1ರ ಮುನ್ನಡೆ ಸಾಧಿಸಿದರು.(AFP)
(7 / 8)
ಮೂರನೇ ಕ್ವಾರ್ಟರ್ನಲ್ಲಿ ಸುಖ್ಜೀತ್ ಎರಡನೇ ಗೋಲ್ ಬಾರಿಸಿ 2-2ರಲ್ಲಿ ಸಮಬಲ ಸಾಧಿಸಿದರು. ಇದರ ನಂತರವೂ ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ಗಳಿಸಲಿಲ್ಲ.(REUTERS)
ಇತರ ಗ್ಯಾಲರಿಗಳು