Indian Navy: ಯಾರೂ ಪ್ರವೇಶಿಸಲಾಗದ ಸಾಗರದ ಧ್ರುವವನ್ನು ಎಂಟೆದೆಯಿಂದ ದಾಟಿದ ದಿಟ್ಟ ನಾರಿಯರು, ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳ ಸಾಹಸ
- ಪಾಯಿಂಟ್ ನೆಮೊವನ್ನು ಪ್ರವೇಶಿಸಲಾಗದ ಸಾಗರ ಧ್ರುವ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳಗಳಲ್ಲಿ ಒಂದಾಗಿದೆ. ಇದು ಹತ್ತಿರದ ಭೂಪ್ರದೇಶದಿಂದ ಸುಮಾರು 2,688 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಭಾರತದ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗು ತಾರಿಣಿ ನೌಕೆಯ ಮೂಲಕ ಧೈರ್ಯವಾಗಿ ದಾಟಿದ್ದಾರೆ.
- ಪಾಯಿಂಟ್ ನೆಮೊವನ್ನು ಪ್ರವೇಶಿಸಲಾಗದ ಸಾಗರ ಧ್ರುವ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳಗಳಲ್ಲಿ ಒಂದಾಗಿದೆ. ಇದು ಹತ್ತಿರದ ಭೂಪ್ರದೇಶದಿಂದ ಸುಮಾರು 2,688 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಭಾರತದ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗು ತಾರಿಣಿ ನೌಕೆಯ ಮೂಲಕ ಧೈರ್ಯವಾಗಿ ದಾಟಿದ್ದಾರೆ.
(1 / 12)
ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಗುರುವಾರ ಭಾರತೀಯ ನೌಕಾ ನೌಕಾಪಡೆಯ ಹಡಗು (ಐಎನ್‌ಎಸ್‌ವಿ) ತಾರಿಣಿಯಲ್ಲಿ ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳವಾದ ಪಾಯಿಂಟ್ ನೆಮೊವನ್ನು ದಾಟುವ ಮೂಲಕ ಹೊಸ ಸಾಹಸ ಮಾಡಿದ್ದಾರೆ. ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ ಎಂಬ ಇಬ್ಬರ ಸಾಹಸಕ್ಕೆ ಜಗತ್ತೇ ಬೆರಗಾಗಿದೆ.
(2 / 12)
ನ್ಯೂಜಿಲೆಂಡ್‌ನ ಲಿಟ್ಟೆಲ್ಟನ್‌ನಿಂದ ಫಾಕ್‌ಲ್ಯಾಂಡ್ ದ್ವೀಪಗಳ ಪೋರ್ಟ್ ಸ್ಟಾನ್ಲಿಗೆ ತಮ್ಮ ಮೂರನೇ ಹಂತದ ಪ್ರಯಾಣದ ಸಮಯದಲ್ಲಿ ಇವರು ಪಾಯಿಂಟ್ ನೆಮೊ ಎಂಬ ಭೂಮಿಯ ಅತ್ಯಂತ ದೂರದ ಸ್ಥಳವನ್ನು ಹಾದು ಹೋಗಿದ್ದಾರೆ.
(3 / 12)
ದಕ್ಷಿಣ ಪೆಸಿಫಿಕ್‌ನಲ್ಲಿರುವ ಪಾಯಿಂಟ್ ನೆಮೊ ಎನ್ನುವುದು "ಯಾರೂ ಪ್ರವೇಶಿಸಲಾಗದ ಸಾಗರ ಧ್ರುವ" ಎಂದೇ ಖ್ಯಾತಿ ಪಡೆದಿದೆ. ಇದು ಭೂಮಿಯ ಅತ್ಯಂತ ದೂರದ ಸ್ಥಳವಾಗಿದೆ.
(4 / 12)
ದಕ್ಷಿಣ ಪೆಸಿಫಿಕ್‌ನಲ್ಲಿರುವ ಪಾಯಿಂಟ್ ನೆಮೊ ಎನ್ನುವುದು "ಯಾರೂ ಪ್ರವೇಶಿಸಲಾಗದ ಸಾಗರ ಧ್ರುವ" ಎಂದೇ ಖ್ಯಾತಿ ಪಡೆದಿದೆ. ಇದು ಭೂಮಿಯ ಅತ್ಯಂತ ದೂರದ ಸ್ಥಳವಾಗಿದೆ. ಹತ್ತಿರದ ಭೂಪ್ರದೇಶದಿಂದ ಈ ಪಾಯಿಂಟ್ ನೆಮೊ ಸುಮಾರು 2,688 ಕಿಲೋಮೀಟರ್ ದೂರದಲ್ಲಿದೆ.
(5 / 12)
ನಾವಿಕ ಸಾಗರ ಪರಿಕ್ರಮ II ಕಾರ್ಯಾಚರಣೆಯ ಭಾಗವಾಗಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾಗರ ಪರಿಕ್ರಮ ಮಾಡುತ್ತಿದ್ದಾರೆ. ಪಾಯಿಂಟ್ ನೆಮೊ ದಾಟಿ ಮುಂದೆ ಸಾಗಿರುವುದು ಮಹತ್ವದ ಮೈಲಿಗಲ್ಲು ಎಂದು ಭಾರತೀಯ ನೌಕಾಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.
(6 / 12)
"ಪ್ರವೇಶಿಸಲಾಗದ ಸಾಗರ ಧ್ರುವವನ್ನು ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ & ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ ದಾಟಿದ್ದಾರೆ. ಇದು ಧೈರ್ಯ ಮತ್ತು ಸಾಹಸದ ಮನೋಭಾವಕ್ಕೆ ಸಾಕ್ಷಿಯಾಗಿದೆ" ಎಂದು ಭಾರತೀಯ ನೌಕಾಪಡೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
(7 / 12)
ಈ ರೀತಿ ಪಾಯಿಂಟ್ ನೆಮೊವನ್ನ ದಾಟಿ ಹೋಗುವ ಸಂದರ್ಭದಲ್ಲಿ ಇವರಿಬ್ಬರು ಅಲ್ಲಿನ ಸಾಗರದ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿಯು ವಿಶ್ಲೇಷಣೆ ಮಾಡಲಿದೆ. ಈ ಮಾದರಿಗಳು ಸಮುದ್ರದ ಜೀವವೈವಿಧ್ಯತೆ ಮತ್ತು ನೀರಿನ ರಾಸಾಯನಿಕ ಸಂಯೋಜನೆ ಸೇರಿದಂತೆ ಸಾಗರದ ಪರಿಸ್ಥಿತಿಗಳ ಬಗ್ಗೆ ಅಮೂಲ್ಯವಾದ ಮಾಹಿತಿ ಒದಗಿಸುವ ನಿರೀಕ್ಷೆಯಿದೆ. ಇದು ಸಮುದ್ರಶಾಸ್ತ್ರೀಯ ಸಂಶೋಧನೆಗೆ ಕೊಡುಗೆ ನೀಡುತ್ತದೆ ಎಂದು ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿದೆ.
(8 / 12)
ನಾವಿಕ ಸಾಗರ ಪರಿಕ್ರಮ II ಮೂಲಕ ಈ ಇಬ್ಬರು ಮಹಿಳಾ ಅಧಿಕಾಿಗಳು ತಮ್ಮ ಮುಂದಿನ ಗಮ್ಯಸ್ಥಾನವಾದ ಪೋರ್ಟ್ ಸ್ಟಾನ್ಲಿಯತ್ತ ಸಾಗಲಿದ್ದಾರೆ. ಭಾರತೀಯ ನೌಕಾಪಡೆಯ ಇಬ್ಬರು ಅಧಿಕಾರಿಗಳು ಅಕ್ಟೋಬರ್ 2, 2024 ರಂದು ಜಗತ್ತನ್ನು ಸುತ್ತುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಅವರು ಗೋವಾದಿಂದ ಐಎನ್‌ವಿಎಸ್ ತಾರಿಣಿ ಹಡಗಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಡಿಸೆಂಬರ್ 22 ರಂದು ನ್ಯೂಜಿಲೆಂಡ್‌ನ ಲಿಟ್ಟೆಲ್ಟನ್ ಬಂದರನ್ನು ತಲುಪಿದರು. ಈ ಮೂಲಕ ತಮ್ಮ ದಂಡಯಾತ್ರೆ ಎರಡನೇ ಹಂತವನ್ನು ಪೂರ್ಣಗೊಳಿಸಿದ್ದಾರೆ.
(9 / 12)
ಇದಾದ ಬಳಿಕ ಇವರಿಬ್ಬರು ಈ ತಿಂಗಳ ಆರಂಭದಲ್ಲಿ ಲಿಟ್ಟೆಲ್ಟನ್‌ನಿಂದ ಅತಿ ದೂರದ ಭಾಗ ಪಾಯಿಂಟ್ ನೆಮೊದತ್ತ ಹೊರಟರು. ಫಾಕ್‌ಲ್ಯಾಂಡ್ ದ್ವೀಪಗಳಲ್ಲಿರುವ ಪೋರ್ಟ್ ಸ್ಟಾನ್ಲಿಗೆ ತೆರಳಿದರು. ಇದು ಸುಮಾರು 5,600 ನಾಟಿಕಲ್ ಮೈಲು ಪ್ರಯಾಣವಾಗಿದೆ. ಒಂದು ನಾಟಿಕಲ್ ಮೈಲು 1,852 ಮೀಟರ್‌ಗಳು ಅಥವಾ 1.852 ಕಿಲೋಮೀಟರ್‌ಗಳಿಗೆ ಸಮಾನವಾದ ಉದ್ದವಾಗಿದೆ.
(10 / 12)
ಐಎನ್‌ವಿಎಸ್ ತಾರಿಣಿ ಪಾಯಿಂಟ್ ನೆಮೊ ಮೂಲಕ ಹಾದು ಹೋಗುವುದು ಸುಲಭವಲ್ಲ. ಸಮುದ್ರ ಸಂಚಾರದ ವಿಷಯದಲ್ಲಿ ಗಮನಾರ್ಹ ಸಾಧನೆಯಾಗಿದೆ. ಪಾಯಿಂಟ್ ನೆಮೊವನ್ನು ಪ್ರವೇಶಿಸಲಾಗದ ಸಾಗರ ಧ್ರುವ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳಗಳಲ್ಲಿ ಒಂದಾಗಿದೆ. ಇದು ಹತ್ತಿರದ ಭೂಪ್ರದೇಶದಿಂದ ಸುಮಾರು 2,688 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಸಾಮಾನ್ಯವಾಗಿ ಯಾವುದೇ ಮಾನವ ವಾಸಸ್ಥಳದಿಂದ ಅತ್ಯಂತ ದೂರದ ಬಿಂದು ಎಂದು ಪರಿಗಣಿಸಲಾಗುತ್ತದೆ.
(11 / 12)
ಪಾಯಿಂಟ್ ನೆಮೊವನ್ನು ಬಾಹ್ಯಾಕಾಶ ಸಂಸ್ಥೆಗಳು ಬಳಸುತ್ತವೆ. ಅಂದರೆ, ಉಪಗ್ರಹಗಳು ಮತ್ತು ಬಾಹ್ಯಾಕಾಶ ಕೇಂದ್ರಗಳು ಸೇರಿದಂತೆ ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲಿಗೆ ಬೀಳಿಸಿ ನಾಶಪಡಿಸಲಾಗುತ್ತದೆ. ಈ ಮೂಲಕ ನಿಷ್ಕ್ರೀಯ ನೌಕೆಗಳಿಂದ ಜನನಿಬಿಡ ಪ್ರದೇಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಇತರ ಗ್ಯಾಲರಿಗಳು