ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ; ಐತಿಹಾಸಿಕ ಸಂಭ್ರಮಕ್ಕೆ ದೇಶದಾದ್ಯಂತ ದೇಗುಲಗಳಲ್ಲಿ ಭರದ ಸಿದ್ಧತೆ; ಇಲ್ಲಿದೆ ಫೋಟೊಸ್
- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಾಳೆ (ಜ.22) ನಡೆಯಲಿದೆ. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಈ ನಡುವೆ ದೇಶದ ವಿವಿಧ ದೇವಾಲಯಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯತ್ತಿವೆ. ದೇಶದಾದ್ಯಂತ ದೇವಾಲಯಗಳಲ್ಲಿ ನಡೆಯುತ್ತಿರುವ ಸಿದ್ಧತೆಗಳ ಫೋಟೊಗಳು ಇಲ್ಲಿವೆ.
- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಾಳೆ (ಜ.22) ನಡೆಯಲಿದೆ. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಈ ನಡುವೆ ದೇಶದ ವಿವಿಧ ದೇವಾಲಯಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯತ್ತಿವೆ. ದೇಶದಾದ್ಯಂತ ದೇವಾಲಯಗಳಲ್ಲಿ ನಡೆಯುತ್ತಿರುವ ಸಿದ್ಧತೆಗಳ ಫೋಟೊಗಳು ಇಲ್ಲಿವೆ.
(1 / 10)
ಜನವರಿ 22 ಅಂದರೆ ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ದೇಶದ ವಿವಿಧ ದೇವಾಲಯಗಳು ಯಾವ ರೀತಿ ತಯಾರಿ ನಡೆಸುತ್ತಿವೆ ನೋಡಿ. (AP)
(2 / 10)
ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಗೆ ಲಕ್ನೋದ ಗೋಮತಿ ನಗರವು ಸಕಲ ಸಿದ್ಧತೆ ನಡೆಸಿದ್ದು, ಇಡೀ ನಗರವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಏರಿಯಲ್ ವ್ಯೂವ್‌ನಲ್ಲಿ ಈ ನಗರದ ಅಂದ ಕಾಣಿಸಿದ್ದು ಹೀಗೆ (HT Photo/Deepak Gupta)
(3 / 10)
ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿ ದೇಗುಲದಲ್ಲಿ ಶನಿವಾರ ಕಂಡು ಬಂದ ಭಕ್ತರ ದಂಡು. ಹುನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದು. (ANI)
(4 / 10)
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇಗುಲದ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ವಿಎಚ್‌ಪಿ ಕಾರ್ಯಕರ್ತರು ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಶ್ರೀರಾಮ ಯಾತ್ರೆ ಕೈಗೊಂಡರು. (ANI)
(6 / 10)
ರಾಮನ ದೇಗುಲ ಹಾಗೂ ರಾಮನ ಪ್ರತಿಮೆಯನ್ನು ಅಲಂಕರಿಸಿರುವ ದೃಶ್ಯವು ಮುಂಬೈನಲ್ಲಿ ಕಂಡುಬಂದಿದೆ. ರಸ್ತೆಯಲ್ಲಿ ದೇಗುಲದ ಬೆಳಕಿನ ಅಂದ ಕಂಡಿದ್ದು ಹೀಗೆ (REUTERS)
(7 / 10)
ಬಾಲರಾಮನ ಪ್ರಾಣ ಪ್ರತಿಷ್ಠೆಯ ಸಲುವಾಗಿ ನವದೆಹಲಿಯ ಜನಪಥ್ ಮಾರುಕಟ್ಟೆಯನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. (HT Photo/Raj K Raj)
(8 / 10)
ನೋಯ್ಡಾದ ಇಸ್ಕಾನ್ ದೇವಾಲಯದಲ್ಲಿ ಅಲಂಕಾರಕ್ಕಾಗಿ ಹೂವಿನ ಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. (HT Photo/Sunil Ghosh)
ಇತರ ಗ್ಯಾಲರಿಗಳು