ಇಂಡಿಯನ್ ಓಪನ್: ಸೆಮಿಫೈನಲ್ ಪ್ರವೇಶಿಸುವ ತವಕದಲ್ಲಿ ಪಿವಿ ಸಿಂಧು, ಕಿರಣ್ ಜಾರ್ಜಿಯಾ, ಚಿರಾಗ್-ಸಾತ್ವಿಕ್ ಜೋಡಿ
- Indian Open Badminton: ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಮೂವರು ಇಂದು ಕ್ವಾರ್ಟರ್ ಫೈನಲ್ನಲ್ಲಿ ಸೆಣಸಾಟ ನಡೆಸಲಿದ್ದಾರೆ. ಸಿಂಗಲ್ಸ್ನಲ್ಲಿ ಪಿವಿ ಸಿಂಧು, ಕಿರಣ್ ಜಾರ್ಜಿಯಾ, ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ ಇಂದು ಸೆಣಸಾಟ ನಡೆಸಲಿದ್ದಾರೆ.
- Indian Open Badminton: ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಮೂವರು ಇಂದು ಕ್ವಾರ್ಟರ್ ಫೈನಲ್ನಲ್ಲಿ ಸೆಣಸಾಟ ನಡೆಸಲಿದ್ದಾರೆ. ಸಿಂಗಲ್ಸ್ನಲ್ಲಿ ಪಿವಿ ಸಿಂಧು, ಕಿರಣ್ ಜಾರ್ಜಿಯಾ, ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ ಇಂದು ಸೆಣಸಾಟ ನಡೆಸಲಿದ್ದಾರೆ.
(1 / 5)
ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜನವರಿ 16ರ ಗುರುವಾರ ಭಾರತದ ಆಟಗಾರರ ಪಾಲಿಗೆ ಉತ್ತಮ ದಿನವಾಗಿತ್ತು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿರಣ್ ಜಾರ್ಜ್ ಮತ್ತು ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್-ಶೆಟ್ಟಿ ಜೋಡಿ ಕೂಡ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಇಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಯಾರು ಯಾರ ವಿರುದ್ಧ ಸೆಣಸಾಟ ನಡೆಸಲಿದ್ದಾರೆ ನೋಡೋಣ.
(PTI)(2 / 5)
ಪಿವಿ ಸಿಂಧು ಅವರು ವಿಶ್ವದ 46ನೇ ಶ್ರೇಯಾಂಕಿತ ಜಪಾನ್ನ ಮನಾಮಿ ಸುಯಿಜು ಅವರನ್ನು 21-15, 21-13 ನೇರ ಸೆಟ್ಗಳಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಅವರು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರನ್ನು ಎದುರಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪಂದ್ಯ ನಡೆಯಲಿದೆ.
(Hindustan Times)(3 / 5)
ಕಿರಣ್ ಜಾರ್ಜ್ ಕೂಡ ಮೊದಲ ಬಾರಿಗೆ ಇಂಡಿಯನ್ ಸೂಪರ್ ಬ್ಯಾಡ್ಮಿಂಟನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. 16ನೇ ಸುತ್ತಿನ ಪಂದ್ಯದಲ್ಲಿ ಅಲೆಕ್ಸ್ ಲಾನಿಯರ್ ಅವರನ್ನು 22-20, 21-13 ರಿಂದ ಸೋಲಿಸಿದ ಕಿರಣ್ ಈಗ ಕ್ವಾರ್ಟರ್ಫೈನಲ್ನಲ್ಲಿ ಚೀನಾದ ಶಟ್ಲರ್ ಹಾಂಗ್ ವಾಂಗ್ ವಾಂಗ್ ಅವರನ್ನು ಎದುರಿಸಲಿದ್ದಾರೆ. ಸಂಜೆ 5.50ಕ್ಕೆ ಪಂದ್ಯ ನಡೆಯಲಿದೆ.
(PTI)(4 / 5)
2022ರಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಗುರುವಾರ (ಜ 16) ನಡೆದ ರೌಂಡ್-16 ಪಂದ್ಯದಲ್ಲಿ ಜಪಾನ್ನ ಮಿಟ್ಸುಹಾಶಿ ಮತ್ತು ಹಿರೋಕಿ ಒಕಾಮುರಾ ವಿರುದ್ಧ 20-22, 21-14, 21-16 ಅಂತರದಿಂದ ಗೆದ್ದ ಭಾರತದ ಜೋಡಿ, ಇಂದು ಕ್ವಾರ್ಟರ್ ಫೈನಲ್ನಲ್ಲಿ ಸೌತ್ ಕೊರಿಯಾದ ಜಿನ್ ಯಂಗ್ ಮತ್ತು ಕಾಂಗ್ ಮಿನ್-ಹ್ಯುಕ್ ಜೋಡಿ ವಿರುದ್ಧ ಸೆಣಸಾಟ ನಡೆಸಲಿದೆ. ಇಂದು ಸಂಜೆ 6.40ಕ್ಕೆ ಪಂದ್ಯ ನಡೆಯಲಿದೆ.
(PTI)ಇತರ ಗ್ಯಾಲರಿಗಳು