Sunita Williams: ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಅವರ ರೋಚಕ ಪಯಣದ ಫೋಟೊಸ್ ಇಲ್ಲಿವೆ ನೋಡಿ
- ನಾಸಾ ಗಗನಯಾತ್ರಿ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್, ಸಹ ಗಗನಯಾತ್ರಿಗಳಾದ ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಜತೆ ಸ್ಪೇಸ್ಎಕ್ಸ್ ಕ್ಯಾಪ್ಸೂಲ್‌ನಲ್ಲಿ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಅವರ ರೋಚಕ ಪ್ರಯಾಣದ ಚಿತ್ರಗಳು ಇಲ್ಲಿವೆ.
- ನಾಸಾ ಗಗನಯಾತ್ರಿ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್, ಸಹ ಗಗನಯಾತ್ರಿಗಳಾದ ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಜತೆ ಸ್ಪೇಸ್ಎಕ್ಸ್ ಕ್ಯಾಪ್ಸೂಲ್‌ನಲ್ಲಿ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಅವರ ರೋಚಕ ಪ್ರಯಾಣದ ಚಿತ್ರಗಳು ಇಲ್ಲಿವೆ.
(1 / 10)
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ ಒಂಬತ್ತು ತಿಂಗಳ ನಂತರ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ನೊಬವ್ ಅವರೊಂದಿಗೆ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್‌ನಲ್ಲಿ ಭೂಮಿಗೆ ಮರಳಿದರು.
(NASA/X)(2 / 10)
ಮಾರ್ಚ್ 18, 2025 ರಂದು, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಕ್ಯಾಪ್ಸೂಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿತು.
(NASA/X)(3 / 10)
ಯಶಸ್ವಿ ನಿರ್ಗಮನದ ನಂತರ, ಫ್ಲೋರಿಡಾ ಕರಾವಳಿಯಲ್ಲಿ ಸ್ಪ್ಲಾಶ್ ಡೌನ್ ಮಾಡುವ ಗುರಿಯನ್ನು ಮಿಷನ್ ಹೊಂದಿತ್ತು.
(@NASA)(4 / 10)
ಸ್ಪೇಸ್‌ಎಕ್ಸ್ ನೌಕೆ ನೀರಿನಲ್ಲಿ ಇಳಿದ ನಂತರ, ಬುಚ್ ವಿಲ್ಮೋರ್, ಅಲೆಕ್ಸಾಂಡರ್ ಗೊರ್ಬುನೊವ್, ನಿಕ್ ಹೇಗ್ ಮತ್ತು ಸುನೀತಾ ವಿಲಿಯಮ್ಸ್ ಸ್ಪೇಸ್ಎಕ್ಸ್ ರೆಸ್ಕ್ಯೂ ಶಿಪ್‌ನಲ್ಲಿ ಕುಳಿತರು.
(NASA via AP)(5 / 10)
ಸ್ಪೇಸ್ಎಕ್ಸ್ ಕ್ಯಾಪ್ಸೂಲ್ ಮೆಕ್ಸಿಕೊ ಕೊಲ್ಲಿಗೆ ಪ್ಯಾರಾಚೂಟ್ ಮೂಲಕ ಹಾರಿತು ಮತ್ತು ಟಲ್ಲಾಹಸ್ಸಿ ಕರಾವಳಿಯಲ್ಲಿ ಸ್ಪ್ಲಾಶ್ ಡೌನ್ ಮಾಡಲಾಯಿತು.
(NASA/X)(6 / 10)
ಸುನೀತಾ ವಿಲಿಯಮ್ಸ್ ಕೊನೆಗೂ ಕ್ಯಾಪ್ಸೂಲ್‌ನಿಂದ ಹೊರಬಂದರು ಮತ್ತು ಅವರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಕರೆದೊಯ್ಯಲಾಯಿತು.
(SpaceX via AP)(7 / 10)
ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ನೀರಿನಲ್ಲಿ ಇಳಿದ ನಂತರ ಮತ್ತು ಗಗನಯಾತ್ರಿಗಳನ್ನು ರಕ್ಷಿಸಿದ ನಂತರ ಸಹಾಯಕ ಸಿಬ್ಬಂದಿ ಸದಸ್ಯರು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದರು.
(AP)(8 / 10)
ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ಭೂಮಿಗೆ ಮರಳಿ ಬರುತ್ತಿರುವಾಗ, ಜನರು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಮರಳುವಿಕೆಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಮುಂಬೈನ ಗುರುಕುಲ ಸ್ಕೂಲ್ ಆಫ್ ಆರ್ಟ್ ಶಿಕ್ಷಕರೊಬ್ಬರು ಗಗನಯಾತ್ರಿಗಳನ್ನು ಸ್ವಾಗತಿಸಲು ಚಿತ್ರಕಲೆಯನ್ನು ರಚಿಸಿದ್ದರು.
(Ashish Vaishnav/ANI)(9 / 10)
ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಗ್ರಾಮವಾದ ಜುಲಾಸನ್‌ನಲ್ಲಿ ಜನರು ಪಟಾಕಿಗಳನ್ನು ಸಿಡಿಸಿ ನೃತ್ಯ ಮಾಡಿದರು.
(AP)ಇತರ ಗ್ಯಾಲರಿಗಳು