ನಿನ್ನೆಯ ದಿನ ನಮ್ಮದಾಗಿರಲಿಲ್ಲ; ಮೋದಿ ಸಂತೈಸಿದ ಚಿತ್ರದೊಂದಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಮಿ
- Mohammed Shami: ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಬೆಂಬಲಿಸಿದ ಅಭಿಮಾನಿಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ.
- Mohammed Shami: ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಟೂರ್ನಿಯುದ್ದಕ್ಕೂ ಬೆಂಬಲಿಸಿದ ಅಭಿಮಾನಿಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ.
(1 / 9)
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾನುವಾರ ರಾತ್ರಿ (ನವೆಂಬರ್ 19) ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಮಣಿಸಿದ ಆಸ್ಟ್ರೇಲಿಯಾ, 6ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡು. ಇದು ಶತಕೋಟಿ ಹೃದಯಗಳು ಒಡೆಯಲು ಕಾರಣವಾಯಿತು.
(2 / 9)
ಪಂದ್ಯದ ಸೋಲಿನ ಆಟಗಾರರಿಗೆ ಭಾರತೀಯರೆಲ್ಲರೂ ಸಾಂತ್ವನ ಹೇಳಿದರು. ಸೋಷಿಯಲ್ ಮೀಡಿಯಾಗಳಲ್ಲಿ ಟೀಮ್ ಇಂಡಿಯಾ ಬೆಂಬಲಿಸುವ ಪೋಸ್ಟ್ಗಳು ಹರಿದಾಡಿದವು. ಪಂದ್ಯ ಸೋತರೂ ನೀವು ನಮ್ಮ ಹೆಮ್ಮೆ ಎಂಬ ಪೋಸ್ಟ್ಗಳನ್ನು ಹಾಕಿದ್ದರು.
(3 / 9)
ಆದರೆ, ಎಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಡೆ. ಪಂದ್ಯದ ಕೊನೆಯ ಹಂತದಲ್ಲಿ ಆಟಗಾರರಿಗೆ ಧೈರ್ಯ ತುಂಬಿದರು. ಆದಾಗ್ಯೂ ಭಾರತ ತಂಡದ ಡ್ರೆಸಿಂಗ್ ರೂಮ್ಗೆ ತೆರಳಿ ಬೇಸರದಲ್ಲಿದ್ದ ಆಟಗಾರರನ್ನು ಧೈರ್ಯ ತುಂಬಿದರು.(Ravindra Jadeja Twitter)
(4 / 9)
ಮೋದಿ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ಟೂರ್ನಿಯುದ್ದಕ್ಕೂ ಬೆಂಬಲಿಸಿದ ಅಭಿಮಾನಿಗಳಿಗೂ ಧನ್ಯವಾದ ಹೇಳಿದ್ದಾರೆ.
(5 / 9)
ಎಕ್ಸ್ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
(6 / 9)
ವಿಶೇಷವಾಗಿ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ತಂಡದ ಆಟಗಾರರ ಉತ್ಸಾಹ ಹೆಚ್ಚಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ನಾವು ಮತ್ತೆ ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.(ICC Twitter)
(7 / 9)
ಶಮಿಗೂ ಮುನ್ನ ರವೀಂದ್ರ ಜಡೇಜಾ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಮೋದಿ ಅವರು ನಿನ್ನೆ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದು, ವಿಶೇಷ ಮತ್ತು ಸ್ಫೂರ್ತಿದಾಯಕ ಎಂದು ಬರೆದುಕೊಂಡಿದ್ದಾರೆ.
(8 / 9)
ನಾವು ಅದ್ಭುತ ಪಂದ್ಯಾವಳಿಯನ್ನೇ ಹೊಂದಿದ್ದೆವು. ಆದರೆ, ನಿನ್ನೆ ನಾವು ಅಲ್ಪಾವಧಿಗೆ ಕೊನೆಗೊಂಡಿದ್ದೇವೆ. ನಾವೆಲ್ಲ ಎದೆಗುಂದಿದ್ದೇವೆ. ಆದರೆ ನಿಮ್ಮ ಪ್ರೀತಿ ಬೆಂಬಲ ನಮ್ಮನ್ನು ಮುಂದುವರಿಸುತ್ತಿದೆ. ಮೋದಿ ಅವರು ನಿನ್ನೆ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.(PTI)
ಇತರ ಗ್ಯಾಲರಿಗಳು